Cabinet Reshuffle: ನವೆಂಬರ್‌ನಲ್ಲಿ ಸಂಪುಟ ಸರ್ಜರಿ; 15 ಹಾಲಿ ಸಚಿವರಿಗೆ ಗೇಟ್ ಪಾಸ್? ಯಾರಿಗೆ ಚಾನ್ಸ್? ಇಲ್ಲಿದೆ ಪಟ್ಟಿ!
ಬೆಂಗಳೂರು, ಅಕ್ಟೋಬರ್ 14: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ನವೆಂಬರ್‌ಗೆ ಎರಡೂವರೆ ವರ್ಷ ಪೂರೈಸಲಿದೆ. ನವೆಂಬರ್ ವೇಳೆಗೆ ರಾಜ್ಯ ರಾಜಕೀಯದಲ್ಲಿ ಮಹಾಕ್ರಾಂತಿಯಾಗಲಿದೆ ಎನ್ನುವ ಚರ್ಚೆ ಕೈ ಪಾಳಯದಲ್ಲಿ ಕೇಳಿ ಬರುತ್ತಿದ್ದು, ಈ ನಡುವೆ ಮುಖ್ಯಮಂತ್ರಿ ಬದಲಾವಣೆ ಹಾಗೂ ಸಚಿವ ಸಂಪುಟ ಪುನರ್‌ರಚನೆ ಕುರಿತು ಗುಸು ಗುಸು ಕೇಳಿ ಬರುತ್ತಿದೆ. ಬಹುದಿನಗಳಿಂದ ಸಚಿವ ಸಂಪುಟ ಸರ್ಜರಿ ಯಾವಾಗ ಎಂದು ಶಾಸಕರು ಕಾದು ಕುಳಿತಿದ್ದು, ಕೊನೆಗೂ ಸಿದ್ದರಾಮಯ್ಯ ಸಂಪುಟಕ್ಕೆ ಸರ್ಜರಿಯ ಯೋಗ ಕೂಡಿ ಬಂದಿದೆ.
ದೀಪಾವಳಿ ಹತ್ತಿರವಾಗುತ್ತಿದ್ದಂತೆ ಸಿದ್ದರಾಮಯ್ಯನವರ ಸಂಪುಟದ ಹಲವು ಸಚಿವರಿಗೆ ರಾಜಕೀಯ ಗ್ರಹಣ ಹಿಡಿಯುವ ಸಾಧ್ಯತೆ ಇದೆ. ಅಂದರೆ, ನವೆಂಬರ್ ಗೆ ಸಚಿವ ಸಂಪುಟ ಪುನರ್‌ರಚನೆಯಾಗಲಿದ್ದು, ಸಿದ್ದರಾಮಯ್ಯ ಸಂಪುಟದ ಬರೋಬ್ಬರಿ 15 ಮಂತ್ರಿಗಳಿಗೆ ಸಂಪುಟದಿಂದ ಕೊಕ್ ಸಿಗಲಿದೆ. ಇನ್ನೂ 15 ಜನ ಹಿರಿಯ ಶಾಸಕರು ಹಾಗೂ ಹೊಸ ಮುಖಗಳಿಗೆ ಮಣೆ ಹಾಕಲು ಹೈಕಮಾಂಡ್ ಮುಂದಾಗಿದೆ. ಏಕೆಂದರೆ ಮುಂದಿನ 2028 ರ ವಿಧಾನಸಭಾ ಚುನಾವಣೆಯನ್ನ ಗಮನದಲ್ಲಿಟ್ಟುಕೊಂಡು ಅಸಮಾಧಾನಿತ ನಾಯಕರಿಗೆ ಮಂತ್ರಿ ಪಟ್ಟ ಕಟ್ಟಲು ಕೈ ಪಡೆ ತಯಾರಿ ನಡೆಸಿದೆ.

ಇನ್ನೂ ಬಿಹಾರದ ಚುನಾವಣೆ ಮುಗಿಯುತ್ತಿದ್ದಂತೆಯೇ ಕರ್ನಾಟಕದ ರಾಜಕೀಯದಲ್ಲಿ ಮಹತ್ವದ ಬದಲಾವಣೆಯೊಂದು ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಸಚಿವ ಸಂಪುಟಕ್ಕೆ ದೊಡ್ಡ ಮಟ್ಟದ ಸರ್ಜರಿ ನಡೆಸಲು ವೇದಿಕೆ ಸಿದ್ಧಗೊಂಡಿದೆ. ಬಿಹಾರ ಚುನಾವಣೆ ಮುಗಿದ ಬಳಿಕ, ಅಂದರೆ ನವೆಂಬರ್ ಎರಡನೇ ವಾರದಲ್ಲಿ, ರಾಜ್ಯದ ನಾಯಕರು ದೆಹಲಿಗೆ ತೆರಳಿ ಹೈಕಮಾಂಡ್ ಜೊತೆ ಅಂತಿಮ ಸುತ್ತಿನ ಮಾತುಕತೆ ನಡೆಸಲಿದ್ದಾರೆ. ಹೈಕಮಾಂಡ್‌ನಿಂದ ಹಸಿರು ನಿಶಾನೆ ಸಿಗುತ್ತಿದ್ದಂತೆಯೇ ಸಂಪುಟ ಪುನಾರಚನೆಯ ಕಸರತ್ತು ಅಧಿಕೃತವಾಗಿ ಆರಂಭವಾಗಲಿದೆ. ನವೆಂಬರ್ ತಿಂಗಳಾಂತ್ಯದ ವೇಳೆಗೆ ಸುಮಾರು 15ಕ್ಕೂ ಹೆಚ್ಚು ಹಾಲಿ ಸಚಿವರು ತಮ್ಮ ಸ್ಥಾನವನ್ನು ಕಳೆದುಕೊಂಡು ಮಾಜಿಗಳಾಗಲಿದ್ದಾರೆ.
ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ 15 ಜನ ಸಚಿವರಿಗೆ ಕೊಕ್ ಸಿಗಲಿದ್ದು, ಈ ಕೊಕ್ ಪಡೆಯುವವರ ಪಟ್ಟಿಯಲ್ಲಿ ಘಟಾನುಘಟಿ ನಾಯಕರ ಹೆಸರುಗಳೇ ಕೇಳಿಬರುತ್ತಿವೆ. ತಮ್ಮ ಪ್ರಭಾವ, ಹಿರಿತನ ಮತ್ತು ಅನುಭವದಿಂದ ಗುರುತಿಸಿಕೊಂಡಿರುವ ಹಲವು ಸಚಿವರ ಕುರ್ಚಿಗೆ ಕಂಟಕ ಎದುರಾಗಿದೆ. ಇನ್ನೂ ಸಚಿವ ಸ್ಥಾನದಿಂದ ಕೊಕ್ ಕೊಟ್ಟು ಪಕ್ಷ ಸಂಘಟನೆಯಂತಹ ಮಹತ್ವದ ಜವಾಬ್ದಾರಿಗಳನ್ನು ನೀಡಿ, ಅವರ ಅನುಭವವನ್ನು ಪಕ್ಷಕ್ಕಾಗಿ ಬಳಸಿಕೊಳ್ಳುವ ಯೋಜನೆಯನ್ನ ಹೈಕಮಾಂಡ್ ಹಾಕಿಕೊಂಡಿದೆ.
ಸಂಪುಟದಲ್ಲಿರುವ ಕೆಲವು ಸಚಿವರ ಕಾರ್ಯವೈಖರಿ ಬಗ್ಗೆ ಸ್ವತಃ ಆಡಳಿತ ಪಕ್ಷದ ಶಾಸಕರೇ ತೀವ್ರ ಅಸಮಾಧಾನ ಮತ್ತು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಮ್ಮ ಕ್ಷೇತ್ರಗಳ ಕೆಲಸಗಳಿಗೆ ಸ್ಪಂದಿಸುತ್ತಿಲ್ಲ, ಕಡತಗಳು ವಿಲೇವಾರಿಯಾಗುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿವೆ. ಅಲ್ಲದೇ ರಾಜ್ಯ ಸರ್ಕಾರಕ್ಕೆ ನವೆಂಬರ್ 21ಕ್ಕೆ ಎರಡೂವರೆ ವರ್ಷ ತುಂಬಲಿರುವ ಸಂದರ್ಭವನ್ನು ಬಳಸಿಕೊಂಡು ಹೊಸಬರಿಗೆ ಅವಕಾಶ' ಮತ್ತು 'ಅಧಿಕಾರ ಹಂಚಿಕೆ' ಎಂಬ ನೆಪವನ್ನು ಮುಂದಿಟ್ಟು, ಅಸಮರ್ಥ ಹಾಗೂ ಆರೋಪ ಎದುರಿಸುತ್ತಿರುವ ಸಚಿವರಿಗೆ ಸೌಜನ್ಯಯುತವಾಗಿ ಗೇಟ್‌ಪಾಸ್ ನೀಡುವ ತಂತ್ರವನ್ನು ಹೈಕಮಾಂಡ್ ರೂಪಿಸಿದೆ ಎನ್ನಲಾಗಿದೆ.
ಸಚಿವ ಸಂಪುಟದಲ್ಲಿ ಯಾರಿಗೆ ಚಾನ್ಸ್?
* ಬಿ.ಕೆ.ಹರಿಪ್ರಸಾದ್
* ಆರ್.ವಿ.ದೇಶಪಾಂಡೆ
* ಸಲೀಂ ಅಹಮದ್
* ನಾಗೇಂದ್ರ
* ಬಸವರಾಜ ರಾಯರೆಡ್ಡಿ
* ಅಪ್ಪಾಜಿ ನಾಡಗೌಡ
* ಲಕ್ಷ್ಮಣ ಸವದಿ
* ರೂಪ ಶಶಿಧರ್
* ತರೀಕೆರೆ ಶ್ರೀನಿವಾಸ್
* ಲೇಔಟ್ ಕೃಷ್ಣಪ್ಪ
* ಟಿ.ಬಿ. ಜಯಚಂದ್ರ
* ರಿಜ್ವಾನ್ ಅರ್ಷದ್ /ಯು.ಟಿ.ಖಾದರ್
* ಕೆ.ಎನ್. ರಾಜಣ್ಣ/ರಘುಮೂರ್ತಿ
* ಶಿವಲಿಂಗೇಗೌಡ/ಎಚ್.ಸಿ. ಬಾಲಕೃಷ್ಣ
* ಪಿ.ಎಂ.ನರೇಂದ್ರ ಸ್ವಾಮಿ/ಶಿವಣ್ಣ
-
ಕಾಂಗ್ರೆಸ್ ಆಡಳಿತ ವೈಫಲ್ಯಕ್ಕೆ ಎ-ಖಾತೆ ಕೈಗನ್ನಡಿ? ಸರ್ಕಾರದ ವಿರುದ್ದ ಆರ್. ಅಶೋಕ್ ವಾಗ್ದಾಳಿ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Government Employees: ಸರ್ಕಾರಿ ನೌಕರರ ವರ್ಗಾವಣೆ ಕುರಿತು ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ












Click it and Unblock the Notifications