ತೇಜಸ್ ಗೌಡ ಅಪಹರಣ, ಪ್ರಮುಖ ಆರೋಪಿ ಬಂಧನ

Posted By:
Subscribe to Oneindia Kannada

ಚಿಕ್ಕಮಗಳೂರು, ಜುಲೈ 06 : ಚಿಕ್ಕಮಗಳೂರು ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ನಡುವೆ ತೇಜಸ್ ಗೌಡ ಅಪಹರಣ ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ನಟರಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಕರ್ನಾಟಕ ಸರ್ಕಾರ ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದೆ. ಆದ್ದರಿಂದ, ಇದಕ್ಕೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ಸಿಐಡಿಯೇ ತನಿಖೆ ನಡೆಸಲಿದೆ. ತೇಜಸ್ ಗೌಡ ಅಪಹರಣ ಪ್ರಕರಣದ ತನಿಖೆಯೂ ಸಿಐಡಿಗೆ ಹಸ್ತಾಂತರವಾಗಲಿದೆ. [ಕಲ್ಲಪ್ಪ ಪ್ರಾಮಾಣಿಕ : ಪ್ರತಾಪ್ ಸಿಂಹ]

arrest

ಪ್ರಮುಖ ಆರೋಪಿ : ಜೂನ್ 28ರ ಮುಂಜಾನೆ 2 ಗಂಟೆ ಸುಮಾರಿಗೆ ಚಿಕ್ಕಮಗಳೂರಿನ ರತ್ನಗಿರಿ ಬಡಾವಣೆ ನಿವಾಸಿ ತೇಜಸ್ ಗೌಡ ಅಪಹರಣವಾಗಿತ್ತು. ಈ ಪ್ರಕರಣದಲ್ಲಿ ಕಲ್ಮನೆ ಚಿಟ್ ಫಂಡ್ ಮಾಲೀಕ ನಟರಾಜ್‌ನನ್ನು ಬಂಧಿಸಲಾಗಿದೆ. ನಟರಾಜ್ ಈ ಪ್ರಕರಣದ ಪ್ರಮುಖ ಆರೋಪಿ ಎಂದು ತಿಳಿದುಬಂದಿದೆ. [DySP ಕಲ್ಲಪ್ಪ ಆತ್ಮಹತ್ಯೆ]

ಜುಲೈ 1ರಂದು ತೇಜಸ್ ಗೌಡ ಅವರು ತಮ್ಮ ಅಪಹರಣದ ಬಗ್ಗೆ ಬಸವನಹಳ್ಳಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಆತ್ಮಹತ್ಯೆ ಮಾಡಿಕೊಂಡ ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗ್ ಈ ಪ್ರಕರಣದಲ್ಲಿ 5ನೇ ಆರೋಪಿ. ಪ್ರಕರಣದಲ್ಲಿ ಅಭಿಜಿತ್‌, ನವೀನ್‌ ಶೆಟ್ಟಿ, ವಿಶ್ವಹಿಂದೂ ಪರಿಷತ್‌ ಸಂಘಟನೆಯ ಶಿವಮೊಗ್ಗ ವಿಭಾಗೀಯ ಸಂಚಾಲಕ ಖಾಂಡ್ಯ ಪ್ರವೀಣ್‌ ಇತರ ಆರೋಪಿಗಳಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Chikkamagaluru police arrested the main accused Nataraj in the Tejas Gowda kidnap case. Casr 5th accused Chikkamagaluru deputy superintendent of police (DySP) Kallappa Handibag committed suicide on July 5, 2016.
Please Wait while comments are loading...