ಓ ಮನಸೇಗೆ 100, ಕಾಡುವ ಹಾಡುಗಳಿಗಾಗಿ ಕೋರಿಕೆ
ಅದೊಂದು ಹಾಡು, ಒಂದೇ ಒಂದು ಹಾಡು. ಆ ಹಾಡು ನಿಮ್ಮನ್ನು ಕಾಡಿದಷ್ಟು ಇನ್ನಾವ ಹಾಡೂ ಕಾಡಿಲ್ಲ. ಮನೆಯ ಚಾವಡಿಯಲ್ಲಿ, ಅಡುಗೆ ಮನೆಯಲ್ಲಿ, ಬಚ್ಚಲು ಮನೆಯಲ್ಲಿ, ರಸ್ತೆಯಲ್ಲಿ, ಬಸ್ಸಲ್ಲಿ, ಆಫೀಸಲ್ಲಿ... ನೀವೆಲ್ಲಿ ಹೋದರೂ ಬೆನ್ನಟ್ಟಿ ಬರುತ್ತದೆ ಆ ಹಾಡು. ಸದಾ ನಿಮ್ಮ ನಾಲಿಗೆ ತುದಿಯಲ್ಲಿ ಕುಣಿದಾಡುತ್ತಿರುತ್ತದೆ. ಯಾವುದು ಆ ಹಾಡು? ಅದ್ಯಾಕೆ ಅಂಥಾ ಪರಿ ನಿಮ್ಮನ್ನು ಕಾಡುತ್ತಿದೆ? ಯಾವತ್ತಾದರೂ ಯೋಚನೆ ಮಾಡಿದ್ದೀರಾ? ನಿಮ್ಮಿಷ್ಟದ ಹಾಡಿನ ಜೊತೆಗಿನ ನಿಮ್ಮ ಸಾಂಗತ್ಯವನ್ನು ಮಿಕ್ಕವರ ಜೊತೆ ಹಂಚಿಕೊಳ್ಳಬೇಕು ಎಂದು ನಿಮಗೆ ಯಾವತ್ತಾದರೂ ಅನಿಸಿದೆಯಾ?
‘ಓ ಮನಸೇ...' ನಿಮಗೆ ಅಂಥಾದ್ದೊಂದು ಅವಕಾಶವನ್ನು ಕಲ್ಪಿಸಿ ಕೊಡುತ್ತಿದೆ. ‘ಓ ಮನಸೇ...'ಯ ನೂರನೇ ಸಂಚಿಕೆಯಲ್ಲಿ (ಅಕ್ಟೋಬರ್ 15-31) ನಿಮ್ಮನ್ನು ಕಾಡುವ ಹಾಡಿನ ಸಾಲುಗಳನ್ನು ನಾವು ಪ್ರಕಟಿಸುತ್ತೇವೆ.
ನೀವು ಮಾಡಬೇಕಾದದ್ದು ಇಷ್ಟೆ: ನಿಮಗಿಷ್ಟವಾದ ಹಾಡಿನ ಮೊದಲ ಎರಡು ಸಾಲುಗಳನ್ನು ನಮಗೆ ಬರೆದು ಕಳುಹಿಸಿ. ಆ ಹಾಡು ಯಾಕೆ ನಿಮಗಿಷ್ಟ ಅನ್ನುವುದನ್ನು ನಾಲ್ಕು ವಾಕ್ಯಗಳಿಗೆ ಮೀರದಂತೆ ಬರೆಯಿರಿ. ಆ ಹಾಡಿನ ಗಾಯಕ, ಗೀತರಚನೆಕಾರ, ಸಂಗೀತ ನಿರ್ದೇಶಕ ಮತ್ತು ಸಿನೆಮಾದ ಹೆಸರುಗಳೂ ಇರಲಿ. ಜೊತೆಗೆ ನಿಮ್ಮದೊಂದು ಚಿಕ್ಕ ಫೊಟೋ. ಈ-ಮೇಲ್ ಮುಖೇನ ಬರುವ ಪತ್ರಗಳಿಗೆ ಮೊದಲ ಪ್ರಾಶಸ್ತ್ಯ.

‘ಓ ಮನಸೇ' ಪತ್ರಿಕೆಯ ನೂರನೇ ಸಂಚಿಕೆಯನ್ನು ಓದುಗರು ಮೆಚ್ಚಿದ ಗೀತೆಗಳಿಂದ ಅಲಂಕರಿಸುವ ನಮ್ಮ ಪ್ರಯತ್ನಕ್ಕೆ ನೀವೂ ಕೈ ಜೋಡಿಸಿ. ನಿಮಗೆ ಗೊತ್ತಲ್ವಾ? ಹಾಡು ಹಳೆಯದಾದರೇನು, ಭಾವ ನವನವೀನ. ನಿಮ್ಮ ಪತ್ರಗಳು ಅಕ್ಟೋಬರ್ 1ರ ಒಳಗೆ ನಮ್ಮನ್ನು ತಲುಪಬೇಕು.
ನೀವು ಈ-ಮೇಲ್ ಕಳುಹಿಸಬೇಕಾದ ವಿಳಾಸ: [email protected]
ಪತ್ರ ಕಳುಹಿಸಬೇಕಾದ ವಿಳಾಸ :
ಓ ಮನಸೇ, ನಂ. 2, 80 ಅಡಿ ರಸ್ತೆ,
ಕದಿರೇನಹಳ್ಳಿ ಪೆಟ್ರೋಲ್ ಬಂಕ್‌ನ ಹತ್ತಿರ,
ಪದ್ಮನಾಭನಗರ, ಬನಶಂಕರಿ 2ನೇ ಹಂತ,
ಬೆಂಗಳೂರು-560 070.












Click it and Unblock the Notifications