• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡಿಕೆಶಿ ಜೊತೆ ಕಾಣಿಸಿಕೊಂಡ ಮಹೇಶ್ ಕಮಟಳ್ಳಿ, ರಮೇಶ್ ಏಕಾಂಗಿ?

|
   ಕುಂದಗೋಳದಲ್ಲಿ ಒಂದಾದ ಡಿ ಕೆ ಶಿವಕುಮಾರ್ | ರಮೇಶ್ ಜಾರಕಿಹೊಳಿ ಒಂಟಿ

   ಧಾರವಾಡ, ಮೇ 09 : ಅಥಣಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಹೇಶ್ ಕಮಟಳ್ಳಿ ಅವರ ನಡೆ ಅಚ್ಚರಿಗೆ ಕಾರಣವಾಗಿದೆ. ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ಜೊತೆ ಕುಂದಗೋಳ ಉಪ ಚುನಾವಣೆಗೆ ಅವರು ಪ್ರಚಾರ ನಡೆಸಿದರು.

   ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಅವರ ಜೊತೆ ಮಹೇಶ್ ಕಮಟಳ್ಳಿ ಗುರುತಿಸಿಕೊಂಡಿದ್ದರು. ಆದರೆ, ಗುರುವಾರ ಅವರು ಡಿ.ಕೆ.ಶಿವಕುಮಾರ್ ಅವರ ಜೊತೆ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.

   ಮೇ 23ರ ತನಕ ಏನೂ ಮಾತನಾಡಲ್ಲ : ರಮೇಶ್ ಜಾರಕಿಹೊಳಿ

   ಮೇ 19ರಂದು ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಡಿ.ಕೆ.ಶಿವಕುಮಾರ್ ಅವರು ಕ್ಷೇತ್ರದ ಚುನಾವಣಾ ಉಸ್ತುವಾರಿಯಾಗಿದ್ದಾರೆ. ಮಹೇಶ್ ಕಮಟಳ್ಳಿ ಅವರ ಮನವೊಲಿಸಿ ಪ್ರಚಾರಕ್ಕೆ ಅವರು ಕರೆತಂದಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

   ಕುಂದಗೋಳ : ಡಿ.ಕೆ.ಶಿವಕುಮಾರ್ ತಂತ್ರದಿಂದ ಬಿಜೆಪಿಗೆ ನಡುಕ

   ಮಾಧ್ಯಮಗಳ ಜೊತೆ ಮಾತನಾಡಿದ ಮಹೇಶ್ ಕಮಟಳ್ಳಿ ಅವರು, 'ನಮ್ಮಲ್ಲಿ ಸಣ್ಣ ಅಸಮಾಧಾನ ಇರುವುದು ನಿಜ. ಆದರೆ, ಪಕ್ಷದಲ್ಲಿಯೇ ಅವುಗಳನ್ನು ಸರಿ ಮಾಡಿಕೊಳ್ಳುತ್ತೇವೆ. ನಾನು ಮತ್ತು ರಮೇಶಣ್ಣ ಪಕ್ಷದಲ್ಲೇ ಇರುತ್ತೇವೆ' ಎಂದು ಹೇಳಿದರು......

   ಕುಂದಗೋಳ ಉಪ ಚುನಾವಣೆ : ಪಕ್ಷಗಳ ಬಲಾಬಲ

   ಮಹೇಶ್ ಕಮಟಳ್ಳಿ ಪ್ರಚಾರ

   ಮಹೇಶ್ ಕಮಟಳ್ಳಿ ಪ್ರಚಾರ

   ಅಥಣಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಹೇಶ್ ಕಮಟಳ್ಳಿ ಅವರು ಗುರುವಾರ ಕುಂದಗೋಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಮಡೊಳ್ಳಿ ಗ್ರಾಮದಲ್ಲಿ ಡಿ.ಕೆ.ಶಿವಕುಮಾರ್ ಅವರ ಜೊತೆ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ಕುಸುಮಾ ಶಿವಳ್ಳಿ ಅವರ ಪರವಾಗಿ ಪ್ರಚಾರ ನಡೆಸಿದರು.

   ಗ್ಯಾಲರಿ: ಡಾ. ಅವಿನಾಶ್ ಜಾಧವ್ ಪರ ವಿ ಸೋಮಣ್ಣ ಪ್ರಚಾರ

   ಜಾರಕಿಹೊಳಿ ಬಣದಲ್ಲಿದ್ದರು

   ಜಾರಕಿಹೊಳಿ ಬಣದಲ್ಲಿದ್ದರು

   ಮಹೇಶ್ ಕಮಟಳ್ಳಿ ಅವರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಬಣದಲ್ಲಿ ಗುರುತಿಸಿಕೊಂಡಿದ್ದರು. ಮಹೇಶ್ ಕಮಟಳ್ಳಿ ಅವರ ಜೊತೆ ಡಿ.ಕೆ.ಶಿವಕುಮಾರ್ ಅವರು ಮಾತುಕತೆ ನಡೆಸಿ ಮನವೊಲಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

   ಹೈಕಮಾಂಡ್‌ಗೂ ತಿಳಿದಿದೆ

   ಹೈಕಮಾಂಡ್‌ಗೂ ತಿಳಿದಿದೆ

   ಮಾಧ್ಯಮಗಳ ಜೊತೆ ಮಾತನಾಡಿದದ ಮಹೇಶ್ ಕಮಟಳ್ಳಿ ಅವರು, 'ಯಾವುದೇ ಕಾರಣಕ್ಕೂ ಪಕ್ಷ ಬಿಡುವ ನಿರ್ಧಾರ ಮಾಡಿಲ್ಲ. ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಿ ಗೆಲ್ಲಿಸಿಕೊಂಡು ಬರುತ್ತೇವೆ. ರಮೇಶಣ್ಣ ನಾನು ಪಕ್ಷದಲ್ಲೇ ಇದ್ದೇವೆ. ಇದು ಹೈಕಮಾಂಡ್ ಅವರಿಗೂ ತಿಳಿದಿದೆ' ಎಂದು ಹೇಳಿದರು.

   ಸಂಧಾನ ಮಾಡುವ ಅವಶ್ಯಕತೆ ಇಲ್ಲ

   ಸಂಧಾನ ಮಾಡುವ ಅವಶ್ಯಕತೆ ಇಲ್ಲ

   'ನಮ್ಮಲ್ಲಿ ಯಾರು ಸಂಧಾನ ಮಾಡುವ ಅವಶ್ಯಕತೆ ಇಲ್ಲ. ಎಲ್ಲರೂ ಒಟ್ಟಾಗಿ ಹೋಗುತ್ತೇವೆ. ಕುಂದಗೋಳದಲ್ಲಿ ನಾವು ಗೆಲ್ಲುತ್ತೇವೆ. ಎಚ್.ಡಿ.ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಎಲ್ಲರೂ ನಮ್ಮ ನಾಯಕರಾಗಿದ್ದಾರೆ, ಯಾರೂ ಆತಂಕ ಪಡುವ ಅಗತ್ಯವಿಲ್ಲ' ಎಂದು ಮಹೇಶ್ ಕಮಟಳ್ಳಿ ಹೇಳಿದರು.

   English summary
   Athani Congress MLA Mahesh Kumathalli election campaign in Kundgol with D.K.Shivakumar. Mahesh Kumathalli identified with Ramesh Jarakiholi in recent days.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X