ಬೆಳಗಾವಿ ಗಡಿಯಲ್ಲಿ ಮಹಾರಾಷ್ಟ್ರದಿಂದ ಮತ್ತೆ ಕ್ಯಾತೆ: ಮರಾಠಿ ಭಾಷಿಕರ ಪ್ರದೇಶ ವಿಲೀನಕ್ಕೆ ಎಂಇಎಸ್‌ ಭರವಸೆ

ಬೆಳಗಾವಿ, ಅಕ್ಟೋಬರ್‌ 12: ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ಸಮೀಪಿಸುತ್ತಿರುವಂತೆಯೇ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ.

ಮಹಾರಾಷ್ಟ್ರ ಗಡಿ ತಜ್ಞರ ಸಮಿತಿ ಮುಖ್ಯಸ್ಥ ಮತ್ತು ಲೋಕಸಭಾ ಸಂಸದ ಧೈರ್ಯಶೀಲ್ ಮಾನೆ ಅವರು ಮುಂಬೈನಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಿಯೋಗದೊಂದಿಗೆ ಸಭೆ ನಡೆಸಿದ್ದಾರೆ. ಇಲ್ಲಿ ಮಹಾರಾಷ್ಟ್ರ ಸರ್ಕಾರದ ಜನ ಆರೋಗ್ಯ ವಿಮಾ ಯೋಜನೆಯನ್ನು ಕರ್ನಾಟಕದ 865 ಗಡಿ ಗ್ರಾಮಗಳ ಮರಾಠಿ ಭಾಷಿಕ ಜನರಿಗೆ ವಿಸ್ತರಿಸಲು ಚರ್ಚೆ ನಡೆಸಲಾಗಿದೆ. ಈ ನಿರ್ಧಾರವು ಕನ್ನಡ ಪರ ಹೋರಾಟಗಾರರನ್ನು ಕೆರಳಿಸಿದ್ದು, ರಾಜ್ಯದಿಂದ ಶೀಘ್ರ ಕ್ರಮಕ್ಕೆ ಒತ್ತಾಯಿಸಿದ್ದಾರೆ.

Maharashtra trouble on Belagavi border: MES promises merger of Marathi-speaking region

ಬುಧವಾರ ಮಹಾರಾಷ್ಟ್ರದಿಂದ ನೇಮಕಗೊಂಡ ತಜ್ಞರ ಸಮಿತಿಯು ಎಂಇಎಸ್ ಮುಖಂಡರನ್ನು ಭೇಟಿ ಮಾಡಿ ಮರಾಠಿ ಮಾತನಾಡುವ ಪ್ರದೇಶಗಳನ್ನು ರಾಜ್ಯದೊಂದಿಗೆ ವಿಲೀನಗೊಳಿಸುವ ಹೋರಾಟಕ್ಕೆ ರಾಜ್ಯದಿಂದ ಎಲ್ಲಾ ಬೆಂಬಲವನ್ನು ನೀಡುವ ಭರವಸೆ ನೀಡಿತು ಎಂದು ವರದಿಯಾಗಿದೆ. ಸಂಸದ ಧೈರ್ಯಶೀಲ್ ಮಾನೆ ನೇತೃತ್ವದ ಸಮಿತಿಯು ಮಹಾತ್ಮ ಫುಲೆ ಜನ್ ಆರೋಗ್ಯ ವಿಮಾ ಯೋಜನೆಗೆ ಅರ್ಜಿ ಸಲ್ಲಿಸುವ ಜನರಿಗೆ ಎಂಇಎಸ್ ಕಚೇರಿಯಿಂದ ಸೌಕರ್ಯ ಒದಗಿಸಲು ನಿರ್ಧರಿಸಿದೆ ಎಂದು ಹೇಳಲಾಗಿದೆ.

ಸಭೆಯಲ್ಲಿ ಗಡಿ ಭಾಗದಲ್ಲಿರುವ ಮರಾಠಿ ಭಾಷಿಕ ಜನರ ಸಮಸ್ಯೆಗಳನ್ನು ಪರಿಹರಿಸಲು ಕೊಲ್ಲಾಪುರ ಜಿಲ್ಲೆಯ ಗಡಿ ಪಟ್ಟಣವಾದ ಚಂದ್‌ಗಡದಲ್ಲಿ ಪ್ರಾದೇಶಿಕ ಆಯುಕ್ತರ ಮಟ್ಟದ ಕಚೇರಿಯನ್ನು ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಗಡಿ ಜಿಲ್ಲೆ ಬೆಳಗಾವಿಯಲ್ಲಿ ಒಂದು ಕಾಲದಲ್ಲಿ ಪ್ರಬಲ ಸಂಘಟನೆಯಾಗಿದ್ದ ಎಂಇಎಸ್ ಮಹಾರಾಷ್ಟ್ರ ಸರ್ಕಾರದ ನೆರವಿನೊಂದಿಗೆ ಮತ್ತೆ ಗುಂಪುಗೂಡಲು ಮುಂದಾಗಿದೆ ಎನ್ನಲಾಗಿದೆ. ಎಂಇಎಸ್‌ಗೆ ಅಧಿಕಾರ ನೀಡಲು ವಿಮಾ ಯೋಜನೆಯು ಅಂತಹ ಒಂದು ಯೋಜನೆಯಾಗಿದೆ.

ಕನ್ನಡ ಪರ ಸಂಘಟನೆಗಳ ಆಕ್ರೋಶ:

ಮುಂಬೈನಲ್ಲಿ ನಡೆದ ಸಭೆಗೆ ಹಲವಾರು ಕನ್ನಡ ಪರ ಗುಂಪುಗಳು ತಮ್ಮ ಆಕ್ಷೇಪಣೆಯನ್ನು ವ್ಯಕ್ತಪಡಿಸಿದವು. ಈ ವಿಷಯದ ಬಗ್ಗೆ ಮೌನವಾಗಿರುವ ಕರ್ನಾಟಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡವು. ಗಡಿ ವಿವಾದಕ್ಕೆ ಸಂಬಂಧಿಸಿದಂತೆ ನೆರೆ ರಾಜ್ಯಕ್ಕೆ ಬಲವಾದ ಸಂದೇಶ ರವಾನಿಸಬೇಕು ಎಂದು ಕನ್ನಡ ಪರ ಸಂಘಟನೆ ಒತ್ತಾಯಿಸಿದೆ.

ಮಹಾರಾಷ್ಟ್ರವು ಕರ್ನಾಟಕದ 865 ಹಳ್ಳಿಗಳನ್ನು ಭಾಷೆಯ ಆಧಾರದ ಮೇಲೆ ತಮ್ಮದೇ ಎಂದು ಹೇಳಿಕೊಳ್ಳುತ್ತಿದೆ. ಆದರೆ ಕನ್ನಡಿಗರು ಅದನ್ನು ಪದೇ ಪದೇ ನಿರಾಕರಿಸಿದ್ದಾರೆ. ಸದ್ಯ ಈ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಕಳೆದ ವರ್ಷ ಗಡಿಯ ಎರಡೂ ಕಡೆಯಿಂದ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎರಡೂ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ್ದರು. ಸುಪ್ರೀಂ ಕೋರ್ಟ್ ಈ ವಿಷಯದ ಬಗ್ಗೆ ನಿರ್ಧರಿಸುವವರೆಗೆ ಶಾಂತಿಯನ್ನು ಕಾಪಾಡಿಕೊಳ್ಳಲು ಕೆಲವು ಮಧ್ಯಂತರ ಸಲಹೆಗಳನ್ನು ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+