ಮಹದಾಯಿ: ಬಿಜೆಪಿ ಡ್ರಾಮಾ ಕಂಪನಿ, ಇದಕ್ಕೆ ಅಮಿತ್ ಶಾ, ಮೋದಿ ಹೆಡ್

Posted By:
Subscribe to Oneindia Kannada

ಚಿಕ್ಕಬಳ್ಳಾಪುರ, ಡಿಸೆಂಬರ್ 26 : ಮಹದಾಯಿ ಸಮಸ್ಯೆ ಇತ್ಯರ್ಥಕ್ಕೆ ಸಂಬಂಧಿಸಿದಂತೆ ನಾಳೆ ಅಂದರೆ ಡಿಸೆಂಬರ್ 27ರಂದು ವಿವಿಧ ಸಂಘಟನೆಗಳು ನೀಡಿರುವ ಉತ್ತರ ಕರ್ನಾಟಕ ಬಂದ್ ಕರೆಗೆ ರಾಜ್ಯ ಗೃಹ ಸಚಿವ ರಾಮಲಿಂಗಾ ರೆಡ್ಡಿ ಒಪ್ಪಿಗೆ ಸೂಚಿಸಿದ್ದಾರೆ.

ಮಾತು ಕೊಟ್ಟು ಪೇಚೆಗೆ ಸಿಲುಕಿದ ಬಿಎಸ್ ವೈ, ಮಹದಾಯಿ ಅಖಾಡಕ್ಕೆ ಯಶ್

ಈ ಬಗ್ಗೆ ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮಹದಾಯಿ ವಿಚಾರದಲ್ಲಿ ಬಿಜೆಪಿಯವರು ನಾಟಕ ಮಾಡುತ್ತಿದ್ದು, ಅವರದ್ದು ಡ್ರಾಮಾ ಕಂಪನಿ ಇದ್ದಂತೆ. ರಾಜ್ಯದ ನಾಯಕರು ಕೇವಲ ಪಾತ್ರಧಾರಿಗಳು. ಡ್ರಾಮಾ ಕಂಪನಿಯ ಹೆಡ್ ಅಮಿತ್ ಶಾ ಮತ್ತು ಮೋದಿ" ಎಂದು ವ್ಯಂಗ್ಯವಾಡಿದರು.

Mahadayi issue: BJP theatre company and it's leaders as actors says Ramalinga Reddy

ಮಹದಾಯಿ ವಿಚಾರದಲ್ಲಿ ಬಿಜೆಪಿಯವರು ನಾಟಕ ಮಾಡುತ್ತಿದ್ದಾರೆ. ಮಹದಾಯಿ ವಿಚಾರದಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರಿಗೆ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದು, ಇದುವರೆಗೂ ಪ್ರತ್ಯುತ್ತರ ಇಲ್ಲ.

ತೀವ್ರ ರಾಜಕೀಯ ಸ್ವರೂಪ ಪಡೆಯುತ್ತಿರುವ ಮಹದಾಯಿ

ಆದರೆ, ಯಡಿಯೂರಪ್ಪ ಪತ್ರ ಬರೆದ ಮಾರನೇ ದಿನವೇ ಪತ್ರ ಬರುತ್ತೆ. ಇದೆಲ್ಲಾ ಅಮಿತ್ ಶಾ ಹಾಗೂ ರಾಜ್ಯದ ಬಿಜೆಪಿ ನಾಯಕರು ನಡೆಸಿರೋ ಚುನಾವಣಾ ಗಿಮಿಕ್ ಎಂದು ವಾಗ್ದಾಳಿ ನಡೆಸಿದರು.

ಮಹದಾಯಿ ಹೋರಾಟಗಾರರು ಬುಧವಾರ ಉತ್ತರ ಕರ್ನಾಟಕ ಬಂದ್ ಅನ್ನು ಶಾಂತಿಯುತವಾಗಿ ಮಾಡಬೇಕು. ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಪ್ರತಿಭಟನೆ ಮಾಡಿ ಎಂದು ಅವರು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mahadayi issue: Home Minister Ramalinga Reddy took a dig at the BJP calling them as a theatre company and it's leaders as actors. The home minister also said that Amit Shah and Narendra Modi are the owners of this theatre company.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ