ಬಂಧನ ಭೀತಿಯಿಂದ ಕೋರ್ಟಿಗೆ ಶರಣಾದ ಶಾಸಕ ಬಾಲಕೃಷ್ಣ
ಮಾಗಡಿ ತಾಲೂಕಿನ ಕುದೂರು ಪೊಲೀಸ್ ಠಾಣೆಗೆ ನುಗ್ಗಿ ಗೂಂಡಾಗಿರಿ ಪ್ರದರ್ಶಿಸಿದ್ದ ಶಾಸಕ ಬಾಲಕೃಷ್ಣ ಅವರು ಬಂಧನ ಭೀತಿಯಿಂದ ಶುಕ್ರವಾರ ಬೆಳಗ್ಗೆ ಕೋರ್ಟಿಗೆ ಶರಣಾಗಿದ್ದಾರೆ
ರಾಮನಗರ, ಜನವರಿ 20: ಮಾಗಡಿ ತಾಲೂಕಿನ ಕುದೂರು ಪೊಲೀಸ್ ಠಾಣೆಗೆ ನುಗ್ಗಿ ಗೂಂಡಾಗಿರಿ ಪ್ರದರ್ಶಿಸಿದ್ದ ಶಾಸಕ ಬಾಲಕೃಷ್ಣ ಅವರು ಬಂಧನ ಭೀತಿಯಿಂದ ಶುಕ್ರವಾರ ಬೆಳಗ್ಗೆ ಕೋರ್ಟಿಗೆ ಶರಣಾಗಿದ್ದಾರೆ. ಗುರುವಾರದಂದು ಶಾಸಕರ ವಿರುದ್ಧ ಎಫ್ ಐಆರ್ ದಾಖಲಾಗಿತ್ತು.
ಶುಕ್ರವಾರ ಬೆಳಗ್ಗೆ 1ನೇ ಜೆಎಂಎಫ್ ಸಿ ಕೋರ್ಟಿಗೆ ಹಾಜರಾಗಿ, ಶರಣಾಗಿದ್ದಾರೆ. ಜನವರಿ 15ರಂದು ಕುದೂರು ಠಾಣೆಗೆ ಬಂದಿದ್ದ ಬಾಲಕೃಷ್ಣ ಅವರು ಎಸ್ಐ ಹರೀಶ್ ಮತ್ತು ಇನ್ಸಪೆಕ್ಟರ್ ನಂದೀಶ್ ಅವರ ವಿರುದ್ಧ ಅವಾಚ್ಯ ಪದಗಳನ್ನು ಬಳಸಿ, ಧಮಕಿ ಹಾಕಿದ್ದರು.

ಪೊಲೀಸರ ಮೇಲೆ ಗೂಂಡಾ ವರ್ತನೆ ಮಾಡಿದ ಶಾಸಕರ ವಿರುದ್ಧ ಎಸ್ಪಿ ರಮೇಶ್ ಬಾನೊತ್ ಅವರಿಗೆ ದೂರು ನೀಡಲಾಗಿತ್ತು. ಈ ಸಂಬಂಧ ಮಾಗಡಿ ಶಾಸಕ ಬಾಲಕೃಷ್ಣ ಸೇರಿದಂತೆ 17 ಮಂದಿಯ ಮೇಲೆ ಐಪಿಸಿ ಸೆಕ್ಷನ್ 341, 352, 353, 504, 506 ಜೊತೆಗೆ 141 ಐಪಿಸಿ ಸೆಕ್ಷನ್ ಅಡಿ ಕೇಸ್ ದಾಖಲಾಗಿತ್ತು.












Click it and Unblock the Notifications