ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ಡಿಕೆ 'ಕಾಂಗ್ರೆಸ್ ಏಜೆಂಟ್' ಹೇಳಿಕೆ ವಿರೋಧಿಸಿದ ಬಾಲಕೃಷ್ಣ

|
Google Oneindia Kannada News

ರಾಮನಗರ, ನವೆಂಬರ್ 30 : ಜೆಡಿಎಸ್ ಪಕ್ಷದಲ್ಲಿನ ಅಸಮಾಧಾನ ಮತ್ತೊಮ್ಮೆ ಬಹಿರಂಗಗೊಂಡಿದೆ. ಮಾಗಡಿ ಕ್ಷೇತ್ರದ ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರ 'ಕಾಂಗ್ರೆಸ್ ಏಜೆಂಟ್' ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಸೋಮವಾರ ಮಾಗಡಿಯಲ್ಲಿ ಮಾತನಾಡಿದ ಬಾಲಕೃಷ್ಣ ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ವಾಗ್ಧಾಳಿ ನಡೆಸಿದರು. 'ಕುಮಾರಸ್ವಾಮಿಯವರು ತಾವು ನೀಡಿರುವ ಹೇಳಿಕೆ ಬಗ್ಗೆ ಸ್ವಷ್ಟೀಕರಣ ನೀಡಬೇಕು ಮತ್ತು ಅದನ್ನು ವಾಪಸ್ ಪಡೆಯಬೇಕು' ಎಂದು ಒತ್ತಾಯಿಸಿದರು. [ಐ ಯಾಮ್ ಸಾರಿ ಎಂದ ಜಮೀರ್ ಅಹಮದ್ ಖಾನ್!]

balakrishna

ಹೊರಹಾಕಿ : 'ಶಾಸಕರು ಕಾಂಗ್ರೆಸ್ ಏಜೆಂಟ್‌ಗಳೆಂದು' ಹೇಳಿದ ಕುಮಾರಸ್ವಾಮಿ ಅವರ ಮಾತಿಗೆ ವಿರೋಧ ವ್ಯಕ್ತಪಡಿಸಿದ ಬಾಲಕೃಷ್ಣ ಅವರು, 'ನಾವು ಕಾಂಗ್ರೆಸ್ ಏಜೆಂಟ್‌ಗಳಾಗಿದ್ದರೆ ನಮ್ಮನ್ನು ಪಕ್ಷದಿಂದ ಹೊರಗೆ ಹಾಕಲಿ' ಎಂದು ಸವಾಲು ಹಾಕಿದರು. [ಮೈತ್ರಿ ಬಗ್ಗೆ ಮಾತಾಡಿದ್ದಕ್ಕೆ ಮುನಿಸು, ಎಚ್ಚರಿಕೆ ಕೊಟ್ಟ ಎಚ್ಡಿಕೆ]

'ವರಿಷ್ಠರ ಮಾತಿನ ನಂತರವೇ ಮೈತ್ರಿ ಮಾತುಕತೆಗೆ ನಾವು ಹೋಗಿದ್ದು, ಯಾರದ್ದೋ ಹಿತದೃಷ್ಟಿಯಿಂದ ಪಕ್ಷ ಕಟ್ಟುವುದು ಬೇಡ. ಪಕ್ಷದ ಕಾರ್ಯಕರ್ತರ ಹಿತದೃಷ್ಟಿಯಿಂದ ಅವರು ಪಕ್ಷ ಕಟ್ಟಲಿ' ಎಂದು ಕುಮಾರಸ್ವಾಮಿ ಅವರ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು. [ಕುಮಾರಸ್ವಾಮಿ ರಾಜೀನಾಮೆ ಮಾತಾಡಿದ್ದು ಏಕೆ?]

ಎಚ್ಡಿಕೆ ಏನು ಹೇಳಿದ್ದರು? : ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಕೆಲವು ಶಾಸಕರು ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಪಕ್ಷದ ನಾಯಕರ ಒಪ್ಪಿಗೆ ಇಲ್ಲದೇ ಮಾತುಕತೆಗೆ ಮುಂದಾಗಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದರು.

ಈ ಕುರಿತು ಶಾಸಕರು ಮತ್ತು ಕುಮಾರಸ್ವಾಮಿ ಅವರ ನಡುವೆ ಮಾತಿನ ಚಕಮಕಿ ನಡೆದಿತ್ತು. 'ಪಕ್ಷದ ಕೆಲವು ಶಾಸಕರು ಕಾಂಗ್ರೆಸ್ ಏಜೆಂಟ್‌ಗಳೆಂದು' ಕುಮಾರಸ್ವಾಮಿ ಹೇಳಿದ್ದರು. ಶಾಸಕರು ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಸಭೆ ಕರೆಯುವೆ ಅಂದ್ರು ದೇವೇಗೌಡ್ರು : 'ಪಕ್ಷದಲ್ಲಿನ ಭಿನ್ನಮತದ ಹಿನ್ನೆಲೆಯಲ್ಲಿ ಶಾಸಕರ ಸಭೆ ಕರೆಯುತ್ತೇನೆ, ಎಲ್ಲಾ ಶಾಸಕರು ಅಲ್ಲಿ ತಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು. ನಂತರ ಮುಂದಿನ ನಿರ್ಧಾರಗಳನ್ನು ಕೈಗೊಳ್ಳುವುದಾಗಿ' ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಸೋಮವಾರ ಹೇಳಿದರು.

English summary
Magadi JDS MLA H.C.Balakrishna opposed party state president H.D.Kumaraswamy statement of calling some party MLAs as Congress agents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X