ಹುಚ್ಚು ನಾಯಿ ಕಡಿತಕ್ಕೆ ಬೆಚ್ಚಿಬಿದ್ದ ಮಂಡ್ಯದ ಕೆ.ಆರ್ ಪೇಟೆ ಜನತೆ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮಂಡ್ಯ,ಮಾರ್ಚ್,02: ಹುಚ್ಚು ನಾಯಿಯೊಂದು ಗ್ರಾಮದ ಸುಮಾರು 25ಕ್ಕೂ ಹೆಚ್ಚು ಮಂದಿಯನ್ನು ಕಚ್ಚಿ ಗಾಯಗೊಳಿಸಿದ್ದು, ಜನರು ಆತಂಕದಲ್ಲಿ ನಡೆದಾಡುವ ಸ್ಥಿತಿ ಕೆ.ಆರ್.ಪೇಟೆ ತಾಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮದ ಜನತೆಗೆ ಒದಗಿದೆ.

ಅಗ್ರಹಾರಬಾಚಹಳ್ಳಿ ಗ್ರಾಮದ ಕಾಳಮ್ಮ, ಸುಂದ್ರಮ್ಮ, ಚಿಕ್ಕಲಿಂಗಾಚಾರ್, ಪುಟ್ಟಸ್ವಾಮಯ್ಯ, ರಮೇಶ್, ಈಶ್ವರ, ತಮ್ಮಯ್ಯ, ವಿಶ್ವೇಶ್ವರ, ದೇವರಾಜು ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ಮಂದಿ ಹುಚ್ಚುನಾಯಿಯಿಂದ ಕಚ್ಚಿಸಿಕೊಂಡು ನೋವು ಅನುಭವಿಸುತ್ತಿದ್ದಾರೆ.[ನಾಯಿಯ ಮೇಲೆ ಅತ್ಯಾಚಾರ ಮಾಡಿದ ವಿಕೃತಕಾಮಿ]

Mad dogs numbers increases in KR Pete, Mandya

ನಾಯಿ ಮನುಷ್ಯರಿಗೆ ಮಾತ್ರವಲ್ಲದೆ, ಸಾಕು ಪ್ರಾಣಿಗಳಾದ ಎಮ್ಮೆ, ಕುರಿ, ಮೇಕೆ, ಹಸುಗಳ ಮೇಲೂ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿದೆ. ಆ ನಂತರ ಪಕ್ಕದ ಗ್ರಾಮ ಚಿಲ್ಲದಹಳ್ಳಿಗೂ ತೆರಳಿ ಅಲ್ಲಿನ ನಾಲ್ಕು ಜನರಿಗೆ ಹಾಗೂ ಜಾನುವಾರುಗಳಿಗೆ ತೊಂದರೆ ಕೊಡುತ್ತಿವೆ.

ಮಂಗಳವಾರ ಸಂಜೆ 7ಗಂಟೆಯಿಂದ ರಾತ್ರಿ 10ಗಂಟೆಯವರೆಗೂ ಗ್ರಾಮದ ಬೀದಿಗಳಲ್ಲಿ ಓಡುತ್ತಿದ್ದ ನಾಯಿಗಳು ಗ್ರಾಮದ ಸಮೀಪದ ಕಬ್ಬಿನ ಗದ್ದೆಯಲ್ಲಿ ಅವಿತುಕೊಂಡಿತ್ತು. ಮರು ದಿನ ಕೆರೆ ಬೀದಿ, ರಂಗದ ಬೀದಿಗಳಲ್ಲಿ ಓಡಾಡುತ್ತಿದ್ದ ಜನರ ಮೇಲೆ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿ ಗ್ರಾಮಸ್ಥರನ್ನು ಗಾಬರಿಗೆ ತಳ್ಳಿದೆ. ಇದರಿಂದ ಜನರು ಮನೆಯ ಹೊರಗೆ ಬರಲು ಹೆದರುತ್ತಿದ್ದಾರೆ.[ಬೆಂಗಳೂರಲ್ಲಿ ಮನೆಗೊಂದೇ ಸಾಕು ನಾಯಿ ನಿಯಮ ಜಾರಿಗೆ!]

Mad dogs numbers increases in KR Pete, Mandya

ಹುಚ್ಚು ನಾಯಿ ದಾಳಿಯ ವಿಷಯ ತಿಳಿದು ಗ್ರಾಮಕ್ಕೆ ಆಗಮಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್‍ ಗೌಡ, ಅಭಿವೃದ್ಧಿ ಅಧಿಕಾರಿ ದೇವೇಗೌಡ, ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಶ್ರೀನಿವಾಸ್, ಅವರು ತಮ್ಮ ಪಂಚಾಯಿತಿ ನೌಕರರು, ಗ್ರಾಮಸ್ಥರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ಮಧ್ಯಾಹ್ನ 12ಗಂಟೆಯ ಸಮಯದಲ್ಲಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸಮೀಪ ಬೆನ್ನಟ್ಟಿ ದೊಣ್ಣೆಗಳಿಂದ ಹೊಡೆದು ಹುಚ್ಚು ನಾಯಿಯನ್ನು ಕೊಂದಿದ್ದಾರೆ.[ಬಿಲಿಯನೇರ್ ಗಳ ಕಣ್ಣಿಗೆ ಬೀದಿನಾಯಿಗಳು ಬೀಳಂಗಿಲ್ಲ!]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Mad dogs numbers increased in KR Pete, Mandya. More than 25 people injured from mad dogs. So people very scared about walk on road.
Please Wait while comments are loading...