Get Updates
Get notified of breaking news, exclusive insights, and must-see stories!

M.T.B.Nagaraj: ಮತ್ತೆ ದುಬಾರಿ BMW ಕಾರು ಖರೀದಿ, ಇದರ ದರ ಮತ್ತು ವಿಶೇಷತೆ ತಿಳಿಯಿರಿ

ಬೆಂಗಳೂರು, ಡಿಸೆಂಬರ್‌, 19: ರಾಜ್ಯ ರಾಜಕಾರಣಿಗಳಲ್ಲಿ ಅತೀ ಹೆಚ್ಚು ಅತ್ಯಂತ ಐಷಾರಾಮಿ ಕಾರುಗಳನ್ನು ಹೊಂದಿರುವವರಲ್ಲಿ ಮಾಜಿ ಸಚಿವ ಎಂಟಿಬಿ ನಾಗರಾಜ್‌ ಒಬ್ಬರಾಗಿದ್ದಾರೆ. ಇದೀಗ ಮತ್ತೆ ದುಬಾರಿ ಬೆಲೆಯ BMW ಕಾರೊಂದನ್ನು ಖರೀದಿಸಿ ಮತ್ತೆ ಎಂಟಿಬಿ ನಾಗರಾಜ್‌ ಸುದ್ದಿಯಲ್ಲಿದ್ದಾರೆ. ಹಾಗಾದರೆ ಈ ಐ‍ಷಾರಾಮಿ ಕಾರಿನ ದರ ಹಾಗೂ ವಿಶೇಷತೆಗಳನ್ನು ಇಲ್ಲಿ ತಿಳಿಯಿರಿ.

M.T.B.Nagaraj purchased expensive BMW car, Know the price and specials

ರಾಜ್ಯದ ಶ್ರೀಮಂತ ರಾಜಕಾರಣಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಎಂಟಿಬಿ ನಾಗರಾಜ್ ಆಗಾಗಾ ಹೊಸ ಐಷಾರಾಮಿ ಕಾರುಗಳನ್ನು ಖರೀದಿಸುತ್ತಲೇ ಇರುತ್ತಾರೆ. ಹಾಗೆಯೇ ಇದೀಗ ಐಷಾರಾಮಿ ಬಿಎಂಡಬ್ಲ್ಯು ಹೊಸ ಕಾರು ಖರೀದಿಸುವ ಮೂಲಕ ಭಾರೀ ಸೌಂಡ್‌ ಮಾಡುತ್ತಿದ್ದಾರೆ.

ದುಬಾರಿ ಬೆಲೆಯ ಹಲವಾರು ಐಷಾರಾಮಿ ಕಾರುಗಳ ಮಾಲೀಕತ್ವ ಹೊಂದಿರುವ ಹೊಸಕೋಟೆ ಬಿಜೆಪಿ ನಾಯಕ, ಮಾಜಿ ಸಚಿವರಾಗಿರುವ ಎಂಟಿಬಿ ನಾಗರಾಜ್ ಅವರು ಹೊಸ ಬಿಎಂಡಬ್ಲ್ಯು ಎಕ್ಸ್ಎಂ ಕಾರು ಖರೀದಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಕಾರಿನ ಬೆಲೆ ತಿಳಿಯಿರಿ

ಎಂಟಿಬಿ ನಾಗರಾಜ್ ಬಳಿ ಈಗಾಗಲೇ ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಫ್ಯಾಂಟಮ್ ಸೇರಿದಂತೆ ಪೋರ್ಷೆ ಕಯೆನ, ಫೆರಾರಿ ಎಫ್8, ಲ್ಯಾಂಡ್ ರೋವರ್ ಮತ್ತು ಮರ್ಸಿಡಿಸ್ ಬೆಂಜ್‌ನಂತಹ ಹಲವಾರು ಕಾರುಗಳನ್ನು ಹೊಂದಿದ್ದಾರೆ. ಇದೀಗ ಈ ಕಾರುಗಳು ಸಾಲಿಗೆ ಹೊಸ ಬಿಎಂಡಬ್ಲ್ಯು ಎಕ್ಸ್ಎಂ ಎಸ್ ಯುವಿ ಸೇರ್ಪಡೆಯಾಗಿದೆ.

ಈ ಹೊಸ ಬಿಎಂಡಬ್ಲ್ಯು ಎಕ್ಸ್ಎಂ ಎಸ್‌ಯುವಿ ಕಾರು ಮಾದರಿಯು ಎಕ್ಸ್ ಡ್ರೈವ್ ಎನ್ನುವ ವೆರಿಯೆಂಟ್‌ನಲ್ಲಿ ಖರೀದಿಗೆ ಲಭ್ಯವಿದ್ದು, ಇದು ಎಕ್ಸ್ ಶೋರೂಂ ಪ್ರಕಾರ 2.60 ಕೋಟಿ ರೂಪಾಯಿ ದರ ಇದೆ. ಇದು ಬೆಂಗಳೂರಿನಲ್ಲಿ ಸದ್ಯ ಇನ್ಸುರೆನ್ಸ್ ಮತ್ತು ಆರ್‌ಟಿಒ ಶುಲ್ಕಗಳನ್ನು ಸೇರಿ ಆನ್ ರೋಡ್ ಪ್ರಕಾರ 3.24 ಕೋಟಿ ರೂಪಾಯಿ ದರ ಹೊಂದಿದ್ದು, ಇದು ಬಿಎಂಡಬ್ಲ್ಯು ನಿರ್ಮಾಣದ ಪವರ್ ಫುಲ್ ಎಸ್‌ಯುವಿ ಆವೃತ್ತಿ ಆಗಿದೆ.

ಕಾರಿನ ವಿಶೇಷತೆಗಳೇನು?

ಪ್ಲಗ್ ಇನ್ ಹೈಬ್ರಿಡ್ ವೈಶಿಷ್ಟ್ಯತೆ ಹೊಂದಿರುವ ಈ ಕಾರಿನಲ್ಲಿ 4.4 ಲೀಟರ್ (4395 ಸಿಸಿ) ವಿ8 ಪೆಟ್ರೋಲ್ ಹೈಬ್ರಿಡ್ ಎಂಜಿನ್ ನೀಡಲಾಗಿದ್ದು, ಇದು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್‌ನೊಂದಿಗೆ ಕೇವಲ ಪೆಟ್ರೋಲ್ ಮೂಲಕ 498 ಹಾರ್ಸ್ ಪವರ್ ಉತ್ಪಾದಿಸುತ್ತದೆ. ಇದು ಎಲೆಕ್ಟ್ರಿಕ್ ಮೋಟಾರ್ ಮತ್ತು ಪೆಟ್ರೋಲ್ ಸಹಯೋಗದೊಂದಿಗೆ ಒಟ್ಟಾರೆ 653 ಹಾರ್ಸ್ ಪವರ್ ಮತ್ತು 800 ಎನ್ಎಂ ಟಾರ್ಕ್ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು, ಆಫ್‌ರೋಡ್ ಕೌಶಲ್ಯಕ್ಕಾಗಿ ಎಂ ಎಕ್ಸ್ ಡ್ರೈವ್ ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಹೊಂದಿದೆ.

ಪವರ್ ಫುಲ್ ಎಂಜಿನ್‌ನೊಂದಿಗೆ ಹೊಸ ಕಾರು ಕೇವಲ 4.3 ಸೆಕೆಂಡುಗಳಲ್ಲಿ 0-100 ಕಿಲೋ ಮೀಟರ್‌ ವೇಗ ಪಡೆದುಕೊಳ್ಳಲಿದ್ದು, ಇದು ಪ್ರತಿ ಗಂಟೆಗೆ ಗರಿಷ್ಠ 249 ಕಿಲೋ ಮೀಟರ್‌ ಟಾಪ್ ಸ್ಪೀಡ್‌ನೊಂದಿಗೆ ಆಕರ್ಷಕ ಇಂಧನ ದಕ್ಷತೆ ಹೊಂದಿದೆ. ಈ ಕಾರನ್ನು ಸಂಪೂರ್ಣವಾಗಿ ಪೆಟ್ರೋಲ್‌ನೊಂದಿಗೆ ಚಾಲನೆ ಮಾಡಿದ್ದಲ್ಲಿ 11.8 ಕಿಲೋ ಮೀಟರ್‌ ಮೈಲೇಜ್ ನೀಡಿದ್ದಲ್ಲಿ ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಸಂಯೋಜನೆಯೊಂದಿಗೆ ಪ್ರತಿ ಲೀಟರ್‌ಗೆ 61.9 ಕಿಲೋ ಮೀಟರ್‌ ಮೈಲೇಜ್ ಕೊಡುತ್ತದೆ ಎನ್ನಲಾಗಿದೆ.

ಈ ಕಾರಿನಲ್ಲಿ ಯಾವೆಲ್ಲ ಸೌಲಭ್ಯಗಳಿವೆ?

ಈ ಕಾರಿನಲ್ಲಿ 7 ಸೀಟರ್ ಸೌಲಭ್ಯದೊಂದಿಗೆ ಹಲವಾರು ಅತ್ಯಾಧುನಿಕ ತಾಂತ್ರಿಕ ಸೌಲಭ್ಯಗಳನ್ನು ಜೋಡಣೆ ಮಾಡಲಾಗದೆ. ಇದು 5,110 ಎಂಎಂ ಉದ್ದಳತೆ, 2,210 ಎಂಎಂ ಅಗಲ ಮತ್ತು 1755 ಎಂಎಂ ಎತ್ತರದೊಂದಿಗೆ ಹಲವಾರು ಸುರಕ್ಷಾ ಸೌಲಭ್ಯಗಳನ್ನು ಹೊಂದಿದೆ. ಇದರಲ್ಲಿ ಅಡ್ವಾನ್ಸ್ ಡ್ರೈವಿಂಗ್ ಅಸಿಸ್ಟ್ ಸಿಸ್ಟಂನೊಂದಿಗೆ 6 ಏರ್ ಬ್ಯಾಗ್‌ಗಳು, ಫೋರ್ ಜೋನ್ ಕ್ಲೈಮೆಟ್ ಕಂಟ್ರೋಲ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಹೊಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+