ಶ್ರೀರಾಮನ ಈ ಫೋಟೋ ಇಟ್ಟರೆ ನಿಮ್ಮ ಮನೆಗೆ ಅದೃಷ್ಟವೋ ಅದೃಷ್ಟ!

ಶತಕೋಟಿ ಹಿಂದೂಗಳ ಕನಸು ಇಂದು ಈಡೇರಿದೆ ಅಂತಾ ಇಡೀ ಭಾರತವೇ ಸಂಭ್ರಮಿಸಿದ್ದು, ಈಗ ಎಲ್ಲೆಲ್ಲೂ ಕೇಳಿ ಬರುತ್ತಿರುವ ಒಂದೇ ಒಂದು ಪದ ಎಂದರೆ ಅದು 'ಜೈ ಶ್ರೀರಾಮ್'. ಹೀಗೆ ಶ್ರೀರಾಮನ ನಾಮ ಜಪಿಸುತ್ತಾ ಹಿಂದೂಗಳು ಸಂಭ್ರಮಿಸಿದ್ದಾರೆ. ಇದೇ ಸಮಯದಲ್ಲಿ ನಿಮ್ಮ ಮನೆಯಲ್ಲಿ ಶ್ರೀರಾಮನ ಯಾವ ಫೋಟೋ ಇಟ್ಟರೆ ಉತ್ತಮ? ಅನ್ನೋ ಪ್ರಶ್ನೆಯೂ ಮೂಡಿದೆ. ಹಾಗಿದ್ದರೆ ನಿಮ್ಮ ಮನೆಯಲ್ಲಿ ಶ್ರೀರಾಮನ ಇದೊಂದು ಫೋಟೋ ಇದ್ರೆ ಸಾಕು ಅದೃಷ್ಟವೋ ಅದೃಷ್ಟವಂತೆ!

ಹೌದು ಎಲ್ಲಿ ಕೇಳಿದರೂ ಶ್ರೀರಾಮನ ಹೆಸರೇ ಕಿವಿಗೆ ಬೀಳುತ್ತಿದೆ. ಈ ವೇಳೆ ದೇಶಕ್ಕೆ ದೇಶವೆ ರಾಮನ ಹೆಸರಿನಲ್ಲಿ ಮಿಂದು ಹೋಗಿದೆ. ರಾಮ ಬಂದರೆ ದೀಪಾವಳಿ ಅಂತಾ, ಇಂದು ದೀಪ ಬೆಳಗಿಸಿ ಸಂಭ್ರಮಿಸಲು ಜನ ಕೂಡ ಸಿದ್ಧತೆ ನಡೆಸಿದ್ದಾರೆ. ಹೀಗಾಗಿ ಕೇವಲ 3 ತಿಂಗಳ ಅಂತರ ಅಷ್ಟೇ, ಎರಡೆರಡು ಬಾರಿ ದೀಪಾವಳಿ ಬಂದಿದೆ. ಅಯೋಧ್ಯೆಯಲ್ಲಿ ಮಾತ್ರವಲ್ಲ, ದೇಶದಲ್ಲಿ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಕಣ್ತುಂಬಿಕೊಳ್ಳಲು ಜನ ಕಾದಿದ್ದರು. ಇದೀಗ ಅದೆಲ್ಲ ಅದ್ಧೂರಿಯಾಗಿ ನಡೆದು ಹೋಗಿದ್ದು, ಇದೇ ಸಮಯದಲ್ಲಿ ನಿಮ್ಮ ಮನೆಯಲ್ಲಿ ಮರೆಯದೇ ಈ ಒಂದು ಫೋಟೋ ಇಡಬೇಕಿದೆ!

Lord Shri Ram Darbar Photo And Importance Of This Photo

ಶ್ರೀರಾಮನ ಇದೊಂದು ಫೋಟೋ ಇದ್ದರೆ...

ಅಷ್ಟಕ್ಕೂ ರಾಮಾಯಣ ವ್ಯಕ್ತಿಗೆ ಸನ್ಮಾರ್ಗ ತೋರಿಸುತ್ತದೆ ಎಂಬ ಪ್ರತೀತಿ ಇದೆ. ಈ ಕಾರಣಕ್ಕೆ ಪ್ರತಿದಿನ ರಾಮಾಯಣದ ಪಠ್ಯವನ್ನು ಓದಲು ಧಾರ್ಮಿಕ ಗುರುಗಳು ಸಲಹೆ ನೀಡುತ್ತಾರೆ. ಹೀಗೆ ಈ ಸಲಹೆ ನಡುವೆ ಆದರ್ಶ ಪುರುಷ ರಾಮನ ಬದುಕು ಎಲ್ಲರಿಗೂ ಪಾಠ, ಹೇಗೆ ನಡೆಯಬೇಕು ಎಂಬ ದಾರಿದೀಪ ಕೂಡ ಆಗಿದೆ. ಜೊತೆಗೆ ರಾಮಾಯಣದ ಪಠಣೆ ಮಾಡುವುದರಿಂದ ವ್ಯಕ್ತಿಯ ಆತ್ಮವಿಶ್ವಾಸ ಹೆಚ್ಚಾಗುತ್ತೆ. ನಿರ್ಧಾರಗಳನ್ನ ಸುಲಭವಾಗಿ ತೆಗೆದುಕೊಳ್ಳಲು ಸಾಧ್ಯವಾಗುವುದು. ಇದರ ಜೊತೆಗೆ ಶ್ರೀರಾಮನ ಇದೊಂದು ಫೋಟೋ ಇದ್ದರೆ ನಿಮ್ಮ ಅದೃಷ್ಟ ಹೆಚ್ಚಾಗುತ್ತದೆ ಎಂಬ ಪ್ರತೀತಿ ಇದೆ.

ಶ್ರೀರಾಮನ ಫೋಟೋ ಇರದ ಹಿಂದೂ ಮನೆ ಕಾಣಸಿಗುವುದು ಅತಿ ಕಡಿಮೆ ಎನ್ನಬಹುದು. ಅದರಲ್ಲೂ 'ರಾಮ ದರ್ಬಾರ್' ಫೋಟೋ ಬಹುತೇಕರ ಮನೆಯಲ್ಲಿ ಕಂಡುಬರುತ್ತದೆ. ಈ ಫೋಟೋ ಇದ್ದರೆ ಮನೆಗೆ ಅದೃಷ್ಟ ಎನ್ನುವ ಮಾತು ಇದೆ. ಹಾಗಾದ್ರೆ ಮನೆಯಲ್ಲಿ ಯಾವ ದಿಕ್ಕಿಗೆ ನೀವು 'ರಾಮ ದರ್ಬಾರ್' ಫೋಟೋ ಹಾಕಬೇಕು ಗೊತ್ತೆ? ಹೀಗೆ ಈ ಫೋಟೋವನ್ನು ಹಾಕಿದರೆ ಏನೆಲ್ಲಾ ಒಳ್ಳೆಯದು ಆಗುತ್ತೆ ಗೊತ್ತಾ? ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ.

Lord Shri Ram Darbar Photo And Importance Of This Photo

ಶ್ರೀರಾಮನ ಫೋಟೋ ಮಹತ್ವ ಇಲ್ಲಿದೆ

'ರಾಮ ದರ್ಬಾರ್' ಅನ್ನು ದೀಪಾವಳಿಯ ದಿನದಂದು ಪೂಜಿಸಲಾಗುವುದು. ಏಕೆಂದರೆ ಇದೇ ದಿನ ಭಗವಾನ್ ಶ್ರೀರಾಮರು 14 ವರ್ಷಗಳ ನಂತರ ಅಯೋಧ್ಯೆಗೆ ಮರಳಿದ್ದರು. ರಾಮಾಯಣ ಪಠಣೆ ಮಾಡುವ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ನೆಲೆಸುವುದಿಲ್ಲ ಎಂದು ಹೇಳಲಾಗುತ್ತದೆ. ಇದರಿಂದ ಮನೆಯಲ್ಲಿನ ಸಮಸ್ಯೆಗಳು ದೂರಾಗುವುದು ದುಃಖ ಕೂಡ ದೂರಾಗುವುದು ಎಂದು ಹೇಳಲಾಗುತ್ತದೆ. ಅದೇ ರೀತಿ 'ರಾಮ ದರ್ಬಾರ್' ಫೋಟೋ ಕೂಡ ನಿಮ್ಮ ಮನೆಯಲ್ಲಿನ ಅದೃಷ್ಟ ಹೆಚ್ಚಿಸುತ್ತದೆ. ಹಾಗಾದರೆ ಯಾವ ದಿಕ್ಕಿನಲ್ಲಿ ಈ ಫೋಟೋ ಇಡಬೇಕು?

ವಾಸ್ತು ಪ್ರಕಾರ, ಮನೆಯ ಪೂರ್ವ ದಿಕ್ಕಿನಲ್ಲಿ ರಾಮದರ್ಬಾರ್ ಚಿತ್ರವನ್ನು ಇರಿಸಬೇಕು. ಇದು ಮನೆಗೆ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ. ಇದನ್ನು ಸ್ಥಾಪಿಸುವುದರಿಂದ ಕುಟುಂಬ ಸದಸ್ಯರ ಆರೋಗ್ಯವು ಕೂಡ ಸುಧಾರಿಸುತ್ತದೆ ಮತ್ತು ಮನೆಯ ವಾಸ್ತು ದೋಷ ದೂರವಾಗುತ್ತವೆ. ಇದೇ ರೀತಿ ಮನೆಗೆ ಅದೃಷ್ಟವೂ ಸಿಗುತ್ತದೆ. ಸಂಸಾರದಲ್ಲಿ ಎಲ್ಲರೂ ಒಟ್ಟಿಗೇ ಬಾಳಿದಾಗ ಕೆಲವೊಮ್ಮೆ ಅವರ ನಡುವೆಯೇ ಕೆಲವು ಭಿನ್ನಾಭಿಪ್ರಾಯಗಳು ಅಥವಾ ವಿವಾದಗಳು ಉಂಟಾಗುವುದು ತೀರಾ ಸಾಮಾನ್ಯ. ರಾಮ ದರ್ಬಾರ್ ಮನೆಯಲ್ಲಿ ಇಡುವುದರಿಂದ ಈ ಸಮಸ್ಯೆನ ಪರಿಹರಿಸಬಹುದು.

Lord Shri Ram Darbar Photo And Importance Of This Photo

ಮನೆಯಲ್ಲಿ ಶ್ರೀರಾಮ ದರ್ಬಾರ್ ಸ್ಥಾಪಿಸುವುದು ಮನೆಯವರಲ್ಲಿನ ಒಗ್ಗಟ್ಟನ್ನ ಹೆಚ್ಚಿಸುತ್ತಲ್ಲದೆ, ಪರಸ್ಪರ ಗೌರವ & ಪ್ರೀತಿ ಕೂಡ ಹೆಚ್ಚಾಗುವುದು ಅಂತೆ. ಹೀಗಾಗಿ ನಿಮ್ಮ ಮನೆಯಲ್ಲೂ ಈ ದಿಕ್ಕಿಗೆ 'ರಾಮ ದರ್ಬಾರ್' ಫೋಟೋ ಇಡಿ ಎಂದು ಸಲಹೆ ನೀಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+