ಕೃಷ್ಣಪ್ಪನವರ ಶುಭಾಶಯ ಬ್ಯಾನರ್ ತಂದ ಅವಾಂತರ!
ಬೆಂಗಳೂರು, ಡಿಸೆಂಬರ್ 12 : ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ 47 ವರುಷಗಳ ನಾಯಕ ರಾಹುಲ್ ಗಾಂಧಿಯವರು ಡಿಸೆಂಬರ್ 16ರಂದು ವಿಧ್ಯುಕ್ತವಾಗಿ ಪದಗ್ರಹಣ ಮಾಡಲಿದ್ದಾರೆ.
ಅವರ ಆಯ್ಕೆಗೆ ಕಾಂಗ್ರೆಸ್ ಪಕ್ಷದಲ್ಲಿಯೇ ಕೆಲ ಪ್ರತಿರೋಧಗಳು ವ್ಯಕ್ತವಾಗಿವೆಯಾದರೂ, ಬಹುತೇಕರು ಶುಭಾಶಯಗಳು ಸುರಿಮಳೆ ಸುರಿಸುತ್ತಿದ್ದಾರೆ, ಆ ಕ್ಷಣಕ್ಕಾಗಿ ಕಾಯುತ್ತಿದ್ದಾರೆ. ಕರ್ನಾಟಕದಲ್ಲಿ ಕೂಡ ಕಾಂಗ್ರೆಸ್ ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ.
ತಮ್ಮ ಪ್ರೀತಿಯನ್ನು, ಗೌರವವನ್ನು, ಸ್ವಾಮಿನಿಷ್ಠೆಯನ್ನು ತೋರಿಸುವ ಭರದಲ್ಲಿ ಅಚಾತುರ್ಯವಾಗಿರುವುದು ಟ್ವಿಟ್ಟರಿನಲ್ಲಿ ಹಾಸ್ಯಕ್ಕೆ ಗ್ರಾಸವಾಗಿದೆ. ಕರ್ನಾಟಕ ಸರಕಾರದಲ್ಲಿ ವಸತಿ ಸಚಿವರಾಗಿರುವ ಎಂ ಕೃಷ್ಣಪ್ಪ ಅವರಿಗೆ ಶುಭ ಕೋರಿರುವ ಬ್ಯಾನರನ್ನು ರಾಹುಲ್ ಗಾಂಧಿಯವರಿಗೆ ಸಮೀಕರಿಸಿ ಟ್ರೋಲ್ ಮಾಡಲಾಗುತ್ತಿದೆ.

'ಲಾಂಗ್ ಲಿವ್ ದಿ ಕಿಂಗ್' ಎಂಬುದು ತಮ್ಮ ಪ್ರೀತಿಯ ರಾಜ ನೂರು ಕಾಲ ಬಾಳಲಿ ಎಂದು ಊರಿನ ನಾಗರಿಕರು ಹಾರೈಸುವ ಪರಿ. ಪಾಶ್ಚಾತ್ಯರು ಬಳಸುತ್ತಿದ್ದ ಈ ಸಂಸ್ಕೃತಿಯನ್ನು ಆಂಗ್ಲ ಭಾಷೆಯಲ್ಲಿಯೇ ಅಭಿವ್ಯಕ್ತಿಸುವ ಭರದಲ್ಲಿ ಅಚಾತುರ್ಯವಾಗಿದೆ.
"Long Live Our Beloved Leader" ಅಂತ ಆ ಬ್ಯಾನರ್ ನಲ್ಲಿ ಬರೆಯುವ ಬದಲು "Long Leave Our Be Love Leader" ಎಂದು ಬರೆಯಲಾಗಿದ್ದು, ಕೆಳಗೆ ಎಂ ಕೃಷ್ಣಪ್ಪನವರ ಹೆಸರು ರಾರಾಜಿಸುತ್ತಿದೆ. ತಪ್ಪುಒಪ್ಪುಗಳು ಏನೇ ಇರಲಿ, ರಾಜನ ಬಗ್ಗೆ ಪ್ರಜೆಗಳಿಗಿರುವ ಪ್ರೀತಿ, ಗೌರವ ಮುಖ್ಯ.
ಇದೇ ವಸ್ತು ಟ್ವಿಟ್ಟರಿನಲ್ಲಿ ಟ್ರೋಲ್ ಗೆ ಆಹಾರವಾಗಿದೆ. ಅವರ ಇಂಗ್ಲೀಷು ಸೋನಿಯಾ ಗಾಂಧಿಯವರ ಹಿಂದಿಯಷ್ಟೇ ಪರ್ಫೆಕ್ಟ್ ಆಗಿದೆ ಎಂದು ಈಟರ್ನಲ್ ಆಪ್ಟಿಮಿಸ್ಟ್ ಎಂಬುವವರು ಟ್ವೀಟ್ ಮಾಡಿ ತಮ್ಮ ಹಾಸ್ಯಪ್ರಜ್ಞೆ ಮೆರೆದಿದ್ದಾರೆ.
Not every Congi is a liar... This one speaks his heart... Asking Sonia @INCIndia & @OfficeOfRG to go on "Long leave"... Which Pappu will do anyway after Gujarat results... @Timesnow @Republic @NDTV @Indiatoday pic.twitter.com/xrV5r7Eky9
— MediaCrooks (@mediacrooks) December 12, 2017
ಸುಕುಮಾರ್ ರಂಗಾಚಾರಿ ಎಂಬುವವರು, ಕೃಷ್ಣಪ್ಪ ಅವರ ಈ ಸಂದೇಶದ ಉದ್ದೇಶವೇನೆಂದರೆ, ರಾಹುಲ್ ಗಾಂಧಿಯವರು ಅಧ್ಯಕ್ಷ ಪಟ್ಟಕ್ಕೇರಿದ ನಂತರ ರಾಹುಲ್ ಅವರು ಸುದೀರ್ಘ ಕಾಲಕ್ಕೆ (Long Leave) ಇಟಲಿಗೆ ತೆರಳಬೇಕು ಎಂದು ಬರೆದಿದ್ದಾರೆ ಎಂದು ಮತ್ತೊಂದು ಹಾಸ್ಯದ ಚಟಾಕಿ ಹಾರಿಸಿದ್ದಾರೆ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications