ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋರ್ಟ್‌ ಕಟೆಕಟೆಯಲ್ಲಿ ನಿಂತ ಲೋಕಾಯುಕ್ತ ನ್ಯಾ. ವಿಶ್ವನಾಥ ಶೆಟ್ಟಿ!

|
Google Oneindia Kannada News

Recommended Video

ಇತಿಹಾಸದಲ್ಲೇ ಮೊದಲ ಬಾರಿಗೆ ಕಟಕಟೆಯಲ್ಲಿ ಲೋಕಾಯುಕ್ತರು

ಬೆಂಗಳೂರು, ಫೆ. 15: ಬಹುಶಃ ಇತಿಹಾಸದಲ್ಲೇ ಮೊದಲ ಬಾರಿ ಲೋಕಾಯುಕ್ತ ನ್ಯಾಯಮೂರ್ತಿ ಒಬ್ಬರು ಕೋರ್ಟ್ ಕಟಕಟೆಯಲ್ಲಿ ವಿಚಾರಣೆ ಎದುರಿಸಿದ್ದಾರೆ.

ಲೋಕಾಯುಕ್ತ ನ್ಯಾಯಾಮೂರ್ತಿ ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕು ಇರಿತ ಪ್ರಕರಣದ ವಿಚಾರಣೆ ನಗರದ ಸಿಟಿ ಸಿವಿಲ್ ಕೋರ್ಟ್ ನಲ್ಲಿ ನಡೆಯಿತು. ಸಾಕ್ಷಿ ನುಡಿಯಲು ಸೆಷನ್ಸ್ ಕೋರ್ಟ್ ಗೆ ಆಗಮಿಸಿದ ಲೋಕಾಯುಕ್ತ .ನ್ಯಾ. ವಿಶ್ವನಾಥ್ ಶೆಟ್ಟಿ ಸಾಕ್ಷಿ ಹೇಳಿದ್ದಾರೆ. ಕರ್ನಾಟಕ ನ್ಯಾಯಾಂಗ ಇತಿಹಾಸದಲ್ಲಿ ಇದೇ ಮೊದಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸೆಷನ್ಸ್ ಕೋರ್ಟ್ ಕಟಕಟೆಯಲ್ಲಿ ನಿಂತು ಸಾಕ್ಷಿ ಹೇಳಿದ್ದಾರೆ. ಸೆಷನ್ಸ್ ಕೋರ್ಟ್ ಹಾಲ್ ನಂಬರ್ 56ರಲ್ಲಿ ವಿಚಾರಣೆ ನಡೆದಿದೆ.

ಆರೋಪಿ ತೇಜ್ ರಾಜ್ ಶರ್ಮಾ ಎಂಬಾತ ಮಾರ್ಚ್ 7, 2018 ರಲ್ಲಿ ಚಾಕು ಸಮೇತ ಲೋಕಾಯುಕ್ತ ಕೊಠಡಿಗೆ ನುಗ್ಗಿ, ನ್ಯಾ. ವಿಶ್ವನಾಥ್ ಶೆಟ್ಟಿ ಅವರ ಹತ್ಯಾಯತ್ನ ಮಾಡಿದ್ದ. ಪ್ರಕರಣದ ವಿಚಾರಣೆ ಸೆಷನ್ ಕೋರ್ಟ್ ನಲ್ಲಿ ನಡೆಯುತ್ತಿದೆ.

Lokayukta Vishwanath Shetty has testified at the Session Court hearing.

ನ್ಯಾ. ವಿಶ್ವನಾಥ್ ಶೆಟ್ಟಿ ಅವರು ಸಾಕ್ಷಿ ಹೇಳುವಾಗ, ಪರಪ್ಪನ ಅಗ್ರಹಾರ ಜೈಲಿನಿಂದ ಆರೋಪಿ ತೇಜ್ ರಾಜ್ ಶರ್ಮಾ ವಿಡಿಯೊ ಕಾನ್ಫರನ್ಸ್ ಮೂಲಕ ವುಚಾರಣೆಯಲ್ಲಿ ಹಾಜರಿದ್ದ.

ಆರೋಪಿ ತೇಜ್ ರಾಜ್ ಶರ್ಮಾಗೆ ಕಳೆದ ವರ್ಷಗಳಿಂದ ಪರಪ್ಪನ ಆಗ್ರಹಾರ ಜೈಲಿನಲ್ಲಿದ್ದಾನೆ. ಅರೋಪಿ ಪರ ಹಿರಿಯ ನ್ಯಾಯವಾದಿ ನಟರಾಜ್ ಶರ್ಮಾ ವಕಾಲತ್ತು ವಹಿಸಿದ್ದರು. ನ್ಯಾ. ವಿಶ್ವನಾಥ ಶೆಟ್ಟಿ ಅವರನ್ನು ಪಾಟಿ ಸವಾಲು ಮಾಡಲು ಆರೋಪಿ ಪರ ವಕೀಲ ನಟರಾಜ್ ಶರ್ಮಾ ಅವರು ಸಮಯಾವಕಾಶ ಕೇಳಿ ಮೆಮೊ ಹಾಕಿದ್ದಾರೆ.

English summary
Karnataka Lokayukta Vishwanath Shetty has testified at the Session Court hearing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X