Get Updates
Get notified of breaking news, exclusive insights, and must-see stories!

Chikodi Lok Sabha Election 2024: ಚಿಕ್ಕೋಡಿ ಲೋಕಸಮರದಲ್ಲಿ ಗೆಲ್ಲುವವರ್ಯಾರು? ಹೇಗಿದೆ ಮತ ಎಣಿಕೆಗೆ ಸಿದ್ದತೆ!

ಚಿಕ್ಕೋಡಿ, ಜೂನ್‌ 03 : ಚಿಕ್ಕೋಡಿ ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಬೆಳಗಾವಿಯ ತಾಲೂಕು ಕೇಂದ್ರ. ಸದ್ಯ ಕಳೆದುಕೊಂಡ ಕ್ಷೇತ್ರದ ಅಧಿಕಾರವನ್ನು ಪಡೆಯಲು ಕಾಂಗ್ರೆಸ್ ನಾನಾ ತಂತ್ರಗಳನ್ನು ರೂಪಿಸುತ್ತಿದೆ. ಈ ಬಾರಿ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕ ಜಾರಕಿಹೊಳಿಯನ್ನು ರಾಜ್ಯ ಕಾಂಗ್ರೆಸ್ ನಾಯಕರು ಕಣಕ್ಕಿಳಿಸಿದ್ದು, ಕ್ಷೇತ್ರವನ್ನ ಈ ಬಾರಿ ವಶಪಡಿಸಿಕೊಳ್ಳುವುದಾಗಿ ಕೈ -ಕಮಲ ತಂತ್ರಗಾರಿಕೆ ನಡೆಸಿದ್ದು, ಗೆಲವು ಯಾರಿಗೆ ಎನ್ನುವ ಕುತೂಹಲ ಮೂಡಿದೆ.

ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ ಒಟ್ಟು 08 ವಿಧಾನಸಭಾ ಕ್ಷೇತ್ರಗಳಿದ್ದು ಕಳೆದ ಚುನಾವಣೆಯಲ್ಲಿ 05 ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿದ್ದವು, ಹಾಗೂ 03 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. 2019ರ ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿಯ ಅಣ್ಣಾ ಸಾಹೇಬ್ ಜೊಲ್ಲೆ ಜಯಗಳಿಸಿದ್ದರು. ಈ ಬಾರಿ ಮಗಳ ರಾಜಕೀಯವನ್ನ ರೂಪಿಸಿರುವ ನಿಟ್ಟಿನಲ್ಲಿ ಜಾರಕಿಹೊಳಿ ಕುಟುಂಬಸ್ಥರು ಪಣತೊಟ್ಟಿದ್ದು, ಚಿಕ್ಕೋಡಿ ಕ್ಷೇತ್ರದಲ್ಲಿ ಅಣ್ಣಾ ಸಾಹೇಬ್‌ ಜೊಲ್ಲೆ ಅವರು ತಮ್ಮದೇ ಆದ ವೈಯಕ್ತಿಕ ವರ್ಚಸ್ಸನ್ನ ಹೊಂದಿದ್ದು, ಬಹುತೇಕ ಅಣ್ಣಾ ಸಾಹೇಬ್‌ ಜೊಲ್ಲೆ ಅವರೇ ಗೆಲ್ಲುವ ಸಾಧ್ಯತೆ ಇದೆ.

Lok Sabha Poll Who Will Win Chikkodi Lok Sabha Constituency

ಚಿಕ್ಕೋಡಿ ಲೋಕಸಭಾ ಕ್ಷೇತ್ರ: ಮತ ಎಣಿಕೆಗೆ ಸಿದ್ಧತೆ

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆಯು ಜೂನ್ 4ರಂದು ನಡೆಯಲಿದ್ದು, ಇದಕ್ಕಾಗಿ ಕಟ್ಟುನಿಟ್ಟಿನ ಭದ್ರತಾ ಕ್ರಮಗಳೊಂದಿಗೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ರಾಹುಲ ಶಿಂಧೆ ತಿಳಿಸಿದರು

ಮತ ಎಣಿಕೆ ಕೇಂದ್ರವಾದ ಪಟ್ಟಣದ ಆರ್.ಡಿ.ಕಾಲೇಜಿನಲ್ಲಿ ಸ್ಥಾಪಿಸಲಾದ ಮಾಧ್ಯಮ ಕೇಂದ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕೋಡಿ ಲೋಕಸಭಾ ಮತಕ್ಷೇತ್ರಕ್ಕೆ ಮೇ 7 ರಂದು ಜರುಗಿದ ಮತದಾನದ ವೇಳೆ ಚಲಾವಣೆಯಾದ ಒಟ್ಟು 1385688 ಮತಗಳನ್ನು, ಹಾಗೂ 4722 ಅಂಚೆ ಮತಗಳ ಎಣಿಕೆ ನಡೆಯಲಿದೆ. ಜೊತೆಗೆ ಇಟಿಪಿಬಿಎಸ್ ಮತಗಳ ಎಣಿಕೆಯೂ ನಡೆಯಲಿದೆ ಎಂದರು.

8 ಇವಿಎಂ ಕೌಂಟಿಂಗ್ ಕೇಂದ್ರ ಸ್ಥಾಪಿಸಲಾಗಿರುತ್ತದೆ. ಪ್ರತಿ ಮತ ಎಣಿಕ ಕೇಂದ್ರದಲ್ಲಿ 12 ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಅಂಚೆ ಮತಗಳ ಎಣಿಕೆಗೆ 16 ಟೇಬಲ್ ಹಾಗೂ ಇಟಿಪಿಬಿಎಸ್ ಮತಗಳ ಎಣಿಕೆಗೆ 2 ಕೇಂದ್ರ ಸ್ಥಾಪಿಸಲಾಗಿದೆ ಎಂದರು. ಮತ ಎಣಿಕೆಗೆ ಹೆಚ್ಚುವರಿ ಸಿಬ್ಬಂದಿ ಸೇರಿದಂತೆ ಒಟ್ಟು 139 ಜನ ಕೌಂಟಿಂಗ್ ಸೂಪರವೈಸರ್, 158 ಜನ ಕೌಂಟಿಗ್ ಅಸಿಸ್ಟಂಟ್ ಹಾಗೂ 139 ಜನ ಮೈಕ್ರೋ ಅಬ್ಬರ್ವರಗಳನ್ನು ಹಾಗೂ 40 ಜನ ಇಟಿಪಿಬಿಎಸ್ ಮತಗಳ ಸ್ಕ್ಯಾನಿಂಗ್ ಪ್ರಕ್ರಿಯೆಗೆ ಸಿಬ್ಬಂದಿ ನಿಯೋಜಿಸಲಾಗಿದೆ ಎಂದರು.

8 ಗಂಟೆಗೆ ಅಂಚೆ ಮತಗಳ ಎಣಿಕೆ ನಡೆಯಲಿದೆ. 8.30ಕ್ಕೆ ವಿದ್ಯುನ್ಮಾನ ಮತಯಂತ್ರಗಳ ಮತ ಎಣಿಕೆ. ನಂತರ ಪ್ರತಿ ಮತಕ್ಷೇತ್ರದ 5 ವಿ.ವಿ.ಪ್ಯಾಟ್‌ ಗಳನ್ನು ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಿ ಎಣಿಕ ಕಾರ್ಯ ಪ್ರಾರಂಬಿಸಲಾಗುವುದು. ಮತ ಎಣಿಕೆ ಮುಗಿದ ನಂತರ ವಿದ್ಯುನ್ಮಾನ ಯಂತ್ರಗಳನ್ನು ಬೆಳಗಾವಿ ನಗರದ ಹಿಂಡಲಗಾದಲ್ಲಿನ ವೇರಹೌಸ್‌ಗೆ ಕಳುಹಿಸಲಾಗುವದು. ಮತ ಎಣಿಕ ಏಜೆಂಟರು ಮೊಬೈಲ್‌ಗಳನ್ನು ಮತ ಎಣಿಕಾ ಕೇಂದ್ರದೊಳಗೆ ತರಲು ಅವಕಾಶವಿರುವುದಿಲ್ಲ ಎಂದು ತಿಳಿಸಿದರು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಮಾತನಾಡಿ, 'ಮತ ಎಣಿಕಾ ಕಾರ್ಯವು ಶಾಂತಿಯುತ ಹಾಗೂ ನ್ಯಾಯಸಮ್ಮತವಾಗಿ ಜರುಗಿಸಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಪೊಲೀಸ್ ಸಿಬ್ಬಂದಿ ನೀಯೋಜಿಸಲಾಗಿದೆ' ಎಂದು ತಿಳಿಸಿದರು. ಜೂನ್‌ 1 ರಿಂದ ಮತ ಎಣಿಕೆ ಕೇಂದ್ರದ ಸುತ್ತಲಿನ 200 ಮೀಟರ್ ಪ್ರದೇಶಕ್ಕೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ಮತ ಎಣಿಕೆ ದಿನದಂದು ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ನಿಪ್ಪಾಣಿ ಮಾರ್ಗದಿಂದ ಬರುವ ವಾಹನಗಳಿಗೆ ಐಟಿಐ ಕಾಲೇಜು ಮೈದಾನದಲ್ಲಿ. ಯಕ್ಸಂಬಾ ಮಾರ್ಗದಿಂದ ಬರುವ ವಾಹನಗಳಿಗೆ ಭೀಮ ನಗರದ ಹತ್ತಿರದ ಮುನ್ಸಿಪಾಲಿಟಿ ಖಾಲಿ ಜಾಗೆಯಲ್ಲಿ, ಅಂಕಲಿ ಮಾರ್ಗದಿಂದ ಬರುವ ವಾಹನಗಳನ್ನು ಪರಟಿ ನಾಗಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಹಾಗೂ ಮುಲ್ಲಾ ಪ್ಲಾಟ ಖಾಲಿ ಸ್ಥಳದಲ್ಲಿ, ಹುಕ್ಕೇರಿ ಮಾರ್ಗದಿಂದ ಬರುವ ವಾಹನಗಳನ್ನು ಪದ್ಮಾ ಮಂಗಲ ಕಾರ್ಯಾಲಯದ ಹತ್ತಿರ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+