Lok Sabha Election: ಕರ್ನಾಟಕದಲ್ಲಿ ಇದುವರೆಗೂ ಒಂದೇ ಸಲ ಕ್ಲೀನ್‌ ಸ್ವೀಪ್‌! ಯಾವ ಪಕ್ಷ? ಯಾವ ವರ್ಷ?

ದೇಶದಲ್ಲಿ ಲೋಕಸಭಾ ಚುನಾವಣೆಯ ಕಾವು ದಿನೇ ದಿನೇ ಏರುತ್ತಿದೆ. ಎಲ್ಲ ಪಕ್ಷಗಳು ಈಗಾಗಲೇ ಭರದ ಪ್ರಚಾರವನ್ನು ನಡೆಸುತ್ತಿವೆ. ಇನ್ನು ಪ್ರಮುಖ ನಾಯಕರ ಈಗಾಗಲೇ ನಾಮ ಪತ್ರಗಳನ್ನು ಸಲ್ಲಿಸುವ ಕಾರ್ಯವನ್ನು ನಡೆಸಿದ್ದಾರೆ. ಕರ್ನಾಟಕದಲ್ಲಿ ಈಗ ಚುನಾವಣಾ ಕಾವು ಏರುತ್ತಲೇ ಇದೆ. ಎಲ್ಲ ಪಕ್ಷಗಳ ನಾಯಕರು ಈಗ ಪ್ರಚಾರದಲ್ಲಿ ಫುಲ್ ಬ್ಯೂಸಿ ಆಗಿದ್ದಾರೆ.

17ನೇ ಲೋಕಸಭಾ ಚುನಾವಣೆಗೆ ಪಕ್ಷಗಳು ಹಲವು ಮಾನದಂಡಗಳನ್ನು ಬಳಸಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿವೆ. ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಿದ್ದು, ಕಾಂಗ್ರೆಸ್‌ ಎಲ್ಲ ಪಕ್ಷಗಳಲ್ಲೂ ಸ್ಪರ್ಧಿಸುತ್ತಿದೆ. ಇನ್ನು ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಯೊಂದಿಗೆ ಚುನಾವಣೆಯ ಕಣಕ್ಕೆ ಇಳಿದಿವೆ. ಈ ಚುನಾವಣೆ ನಿಜಕ್ಕೂ ಎಲ್ಲರ ಚಿತ್ತವನ್ನು ಕದ್ದಿರುವುದಂತೂ ಸುಳ್ಳಲ್ಲ.

Lok Sabha Elections The Only Clean Sweep in Karnataka So Far Which Party and in What Year

ದೇಶದಲ್ಲಿ ಈಗ 17ನೇ ಚುನಾವಣೆ ನಡೆಯುತ್ತಿದೆ. ಕರ್ನಾಟಕದಲ್ಲೂ ಪಕ್ಷಗಳ ಸಿದ್ಧತೆ ಜೋರಾಗಿದೆ. ಕರ್ನಾಟಕದ ಚುನಾವಣಾ ಇತಿಹಾಸವನ್ನು ಕೆದಕಿದಾಗ ಒಂದು ಅಚ್ಚರಿಯ ಅಂಕಿ ಅಂಶ ಬೆಳಕಿಗೆ ಬರುತ್ತದೆ. 17 ಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕೇವಲ ಒಮ್ಮೆ ಮಾತ್ರ ಒಂದು ಪಾರ್ಟಿ ಕ್ಲೀನ್‌ ಸ್ವೀಪ್ ಸಾಧನೆ ಮಾಡಿದೆ.

ಕರ್ನಾಟಕದಲ್ಲಿ ಕ್ಲೀಸ್‌ ಸ್ವೀಪ್ ಸಾಧನೆ ಆಗಿದ್ದು ಯಾವಾಗ?

ಭಾರತಕ್ಕೆ ಸ್ವಾಂತಂತ್ರ್ಯ ಬಂದಾಗಿನಿಂದಲೂ ಕಳೆದ ಎರಡು ದಶಕಗಳವರೆಗೂ ಕರ್ನಾಟಕ ಕಾಂಗ್ರೆಸ್‌ ಭಧ್ರ ಕೋಟೆಯಾಗಿತ್ತು. ಆದರೆ ಮೋದಿ ಅಲೆ ಹಾಗೂ ಅಭಿವೃದ್ಧಿ ರಾಜಕೀಯ ಈ ಚಿತ್ರಣವನ್ನೇ ಬುಡಮೇಲು ಮಾಡಿದೆ. ಕರ್ನಾಟಕದಲ್ಲಿ ಸಾಮಾನ್ಯವಾಗಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಸ್ವಂತಂತ್ರವಾಗಿಯೇ ಕಣಕ್ಕೆ ಇಳಿಯುತ್ತಿದ್ದವು. ಆದರೆ ಇತ್ತಿಚಿನ ವರ್ಷಗಳಲ್ಲಿ ಇದರ ಚಿತ್ರಣ ಬದಲಾಗಿದೆ. ಜೆಡಿಎಸ್‌ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ರಾಷ್ಟ್ರೀಯ ಪಕ್ಷಗಳ ಜೊತೆ ಕೈ ಜೋಡಿಸುವುದು ಅನಿವಾರ್ಯವಾಗಿದೆ. ಈ ಬಾರಿಯೂ ಜೆಡಿಎಸ್‌, ಬಿಜೆಪಿ ಜೊತೆ ಕೈ ಜೋಡಿಸಿದೆ.

17 ಲೋಕಸಭಾ ಚುನಾವಣೆಯಲ್ಲಿ ಒಮ್ಮೆ ಮಾತ್ರ ಕರ್ನಾಟಕದ ಮತದಾರ ಒಂದೇ ಪಕ್ಷಕ್ಕೆ ಜೈ ಎಂದಿದ್ದಾನೆ. ಚುನಾವಣೆಗಳು ಅಂದ್ರೆ ಹಾಗೆ, ಒಂದು ಚುನಾವಣೆ ಆದ ಮೇಲೆ ಇನ್ನೊಂದುಕ್ಕೆ ತಯಾರಿ ನಡೆಯುತ್ತಲೇ ಇರುತ್ತದೆ. 1971ರ ಚುನಾವಣೆಗೆ ಕಾಂಗ್ರೆಸ್‌ ಬಂಡಾಯ ನಾಯಕರು 1969ರ ಲಾಲ್ ಬಾಗ್‌ನಲ್ಲಿ ಸಭೆ ನಡೆಸಿದರು. ಆಗ ಪ್ರಧಾನಿ ಇಂದಿರಾ ಗಾಂಧಿ ಗರಿಬಿ ಹಠಾವೋ ಎಂದು ಘೋಷಣೆ ಕೂಗಿದರು. ಈ ಒಂದು ಘೋಷವಾಕ್ಯವೇ ದಕ್ಷಿಣದಲ್ಲಿ ಕಾಂಗ್ರೆಸ್‌ತನ್ನ ನೆಲೆಗಳನ್ನು ಕಂಡು ಕೊಳ್ಳಲು ಸಾಧ್ಯವಾಯಿತು.

Lok Sabha Elections The Only Clean Sweep in Karnataka So Far Which Party and in What Year

1971ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಕರ್ನಾಟಕದಲ್ಲಿ ಎಲ್ಲ 27 ಕ್ಷೇತ್ರಗಳನ್ನು ಗೆದ್ದ ಐತಿಹಾಸಿಕ ಸಾಧನೆಯನ್ನು ಮಾಡಿತು. ಅಲ್ಲಿಂದ ಈ ಸಾಧನೆಯನ್ನು ಬೇರೆ ಪಕ್ಷಗಳು ಮಾಡಲು ಆಗಲೇ ಇಲ್ಲ. ಕಳೆದ ಚುನಾವಣೆಯಲ್ಲಿ ಬಿಜೆಪಿ ಈ ಸಾಧನೆಯ ಹತ್ತಿರಕ್ಕೆ ಬಂದಿತ್ತು. ಆದರೆ ಈ ದಾಖಲೆ ಅಳಿಸಲು ಆಗಲಿಲ್ಲ.

ಹೇಗಿದೆ ಕರ್ನಾಟಕದಲ್ಲಿ ಬೇರೆ ಪಕ್ಷಗಳ ಸಾಧನೆ

ಕರ್ನಾಟಕದಲ್ಲಿ ನಡೆದ 1999 ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 18, ಬಿಜೆಪಿ 7, ಜೆಡಿಯು 3 ಸ್ಥಾನಗಳನ್ನು ಕಬ್ಜಾ ಮಾಡಿಕೊಂಡಿದ್ದವು. 2004ರಲ್ಲಿ ನಡೆದ ಕೇಂದ್ರ ಚುನಾವಣೆಯಲ್ಲಿ ಕರ್ನಾಟಕದ ಮತದಾರ ಎನ್‌ಡಿಎ ಮೈತ್ರಿ ಕೂಟಕ್ಕೆ ಹೆಚ್ಚು ಸ್ಥಾನ ಗೆಲ್ಲಿಸಿಕೊಟ್ಟಿದ್ದಾನೆ. ಕಾಂಗ್ರೆಸ್‌ ಕೇವಲ 8, ಜೆಡಿಎಸ್‌ 2 ಎರಡು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿವೆ.

2009ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 19 ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್‌ 6, ಜೆಡಿಎಸ್‌ 3 ಸ್ಥಾನ ತಮ್ಮದಾಗಿಸಿಕೊಂಡಿದ್ದವು. 2014ರಲ್ಲಿ ಕಾಂಗ್ರೆಸ್‌ ಡಬಲ್‌ ಡಿಜಿಟ್‌ ಸನಿಹಕ್ಕೆ ಬಂದು ನಿಂತಿದ್ದೇ ದೊಡ್ಡ ಸಾಧನೆ. ಬಿಜೆಪಿ ಈ ಚುನಾವಣೆಯಲ್ಲಿ 17 ಸ್ಥಾನ ಪಡೆದಿತ್ತು. ಜೆಡಿಎಸ್‌ ಸಂಖ್ಯೆ 2ಕ್ಕೆ ಕುಸಿಯಿತು. 2019ರಲ್ಲಂತೂ ಬಿಜೆಪಿ 25 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್‌ 1, ಜೆಡಿಎಸ್‌ 1, ಪಕ್ಷೇತರ ಒಂದು ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷ ಎಷ್ಟು ಸ್ಥಾನ ಗೆಲ್ಲುತ್ತದೆ ಎಂಬುದು ಕುತೂಹಲ ಮೂಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+