ಮೋದಿ ಹೆಲಿಕಾಪ್ಟರ್ ತಪಾಸಣೆ: ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ ಅಮಾನತಿಗೆ ತಡೆ

ಬೆಂಗಳೂರು, ಏಪ್ರಿಲ್ 25: ಒಡಿಶಾದ ಸಂಬಲ್‌ಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್‌ಅನ್ನು ತಪಾಸಣೆ ಮಾಡಿದ್ದ ಕರ್ನಾಟಕ ಕೇಡರ್‌ನ ಐಎಎಸ್ ಅಧಿಕಾರಿಯ ಅಮಾನತು ಆದೇಶವನ್ನು ತಡೆಹಿಡಿಯಲಾಗಿದೆ.

ಲೋಕಸಭಾ ಚುನಾವಣೆ ವಿಶೇಷ ಪುಟ

ಕಳೆದ ವಾರ ಸಂಬಲ್‌ಪುರದಲ್ಲಿ ಮೋದಿ ಅವರ ಹೆಲಿಕಾಪ್ಟರ್ ಅನ್ನು ತಪಾಸಣೆ ಮಾಡಿದ್ದ ಕರ್ನಾಟಕ ಕೇಡರ್‌ನ ಐಎಎಸ್ ಅಧಿಕಾರಿ ಮೊಹಮ್ಮದ್ ಮೊಹ್ಸಿನ್ ವಿಶೇಷ ರಕ್ಷಣಾ ಸಮೂಹದ (ಎಸ್‌ಪಿಜಿ) ನಿಯಮಾವಳಿಗಳಿಗೆ ಅನುಗುಣವಾಗಿ ವರ್ತಿಸಿಲ್ಲ ಎಂಬ ಕಾರಣಕ್ಕೆ ಚುನಾವಣಾ ಆಯೋಗ ಅವರನ್ನು ಅಮಾನತು ಮಾಡಿತ್ತು. ಬಳಿಕ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿತ್ತು.

ಇದರ ವಿರುದ್ಧ ವಿರೋಧಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಚುನಾವಣೆಯ ಸಂದರ್ಭದಲ್ಲಿ ಇಂತಹ ತಪಾಸಣೆಗಳಿಂದ ಯಾವುದೇ ಗಣ್ಯ ವ್ಯಕ್ತಿಗಳನ್ನು ಹೊರತಾಗಿಸುವಂತೆ ನಿಯಮವಿಲ್ಲ ಎಂದು ಹೇಳಿದ್ದರು.

Lok Sabha elections 2019 CAT hold suspension Karnataka cadre IAS office checked PM Modi chopper

ಚುನಾವಣಾ ಆಯೋಗದ ಅಮಾನತು ಆದೇಶಕ್ಕೆ ತಡೆ ನೀಡಿರುವ ಕೇಂದ್ರ ಆಡಳಿತ ನ್ಯಾಯಮಂಡಳಿ (ಸಿಎಟಿ), 'ಎಸ್‌ಪಿಜಿ ರಕ್ಷಣೆಯನ್ನು ಪಡೆದವರು ಯಾವುದಕ್ಕೂ ಮತ್ತು ಎಲ್ಲದಕ್ಕೂ ಅರ್ಹರಾಗಿದ್ದಾರೆ ಎನ್ನಲಾಗದು. ಚುನಾವಣಾ ಅಧಿಕಾರಿಗಳು ಕರ್ನಾಟಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಖಾಸಗಿ ವಾಹನಗಳನ್ನು ಒಂದಕ್ಕಿಂತಲೂ ಹೆಚ್ಚು ಬಾರಿ ತಪಾಸಣೆ ನಡೆಸಿದ್ದಾರೆ. ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ಒಡಿಶಾ ಮುಖ್ಯಮಂತ್ರಿಯ ವಾಹನಗಳನ್ನೂ ತಪಾಸಣೆ ಮಾಡಲಾಗಿತ್ತು' ಎಂದು ಹೇಳಿತು.

ಚಿತ್ರದುರ್ಗದಲ್ಲಿ ಪ್ರಧಾನಿ ಮೋದಿ ಅವರು ಬಂದಿದ್ದ ಹೆಲಿಕಾಪ್ಟರ್‌ನಿಂದ ಕಪ್ಪು ಟ್ರಂಕ್ ಕೊಂಡೊಯ್ದಿದ್ದು ಭಾರಿ ವಿವಾದ ಸೃಷ್ಟಿಸಿತ್ತು. 'ಅದರ ಕುರಿತು ಪ್ರಶ್ನೆಗಳು ಉದ್ಭವವಾಗಿದ್ದವು. ಆದರೆ, ಯಾವುದೇ ಕ್ರಮ ತೆಗೆದುಕೊಂಡಿಲ್ಲ' ಎಂದಿತು.

ಮೂರು ವಾರಗಳ ಒಳಗೆ ತಮ್ಮ ವಾದಗಳನ್ನು ಸಲ್ಲಿಸುವಂತೆ ಎರಡೂ ಕಡೆಗಳಿಗೆ ಸಿಎಟಿ ಸೂಚಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+