ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ನಂದನ್, ರಮ್ಯಾ

By Prasad
|
Google Oneindia Kannada News

ನವದೆಹಲಿ, ಮಾ. 8 : ಬಿಜೆಪಿಯ ಅನಂತ್ ಕುಮಾರ್ ಅವರ 6ನೇ ಗೆಲುವನ್ನು ಕಸಿದುಕೊಳ್ಳುವ ಸಂಕಲ್ಪ ತೊಟ್ಟಿರುವ ಕಾಂಗ್ರೆಸ್ ನಿರೀಕ್ಷೆಯಂತೆ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ನಂದನ್ ನಿಲೇಕಣಿ ಅವರಿಗೆ ಟಿಕೆಟ್ ನೀಡಿದೆ. ಮತ್ತು ನಟಿ ರಮ್ಯಾಗೆ ಮತ್ತೆ ಟಿಕೆಟ್ ನೀಡುವ ಮುಖಾಂತರ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದೆ.

ಏಪ್ರಿಲ್ 17ರಂದು ನಡೆಯುವ ಲೋಕಸಭೆ ಚುನಾವಣೆಗೆ ಕರ್ನಾಟಕದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಶನಿವಾರ ಸಂಜೆ ಬಿಡುಗಡೆಗೊಳಿಸಿತು. ಒಟ್ಟಾರೆಯಾಗಿ ದೇಶದಾದ್ಯಂತ 194 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದು, ರಾಜ್ಯದ 14 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ರಾಯ್ ಬರೇಲಿಯಿಂದ, ರಾಹುಲ್ ಗಾಂಧಿ ಬರೇಲಿಯಿಂದ ಕಣಕ್ಕಿಳಿಯಲಿದ್ದಾರೆ.

ಅಚ್ಚರಿಯ ಬೆಳವಣಿಗೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಹೆಸರು ಮೊದಲ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಆದರೆ, ಹಳೆತಲೆಗಳು ಮತ್ತು ಹಾಲಿ ಸಂಸದರಾದ ಮಲ್ಲಿಕಾರ್ಜುನ ಖರ್ಗೆ, ಧರಂಸಿಂಗ್, ಕೆಎಚ್ ಮುನಿಯಪ್ಪ, ಜಯಪ್ರಕಾಶ್ ಹೆಗ್ಡೆ, ರಮ್ಯಾ, ವಿಶ್ವನಾಥ್, ಧ್ರುವನಾರಾಯಣ ಅವರ ಹೆಸರುಗಳು ಕಾಣಿಸಿಕೊಂಡಿವೆ. [ಬಿಜೆಪಿ ಮೊದಲ ಪಟ್ಟಿ ಬಿಡುಗಡೆ]

Lok Sabha election : Karnataka Congress first list

ಕರ್ನಾಟಕದ ಅಭ್ಯರ್ಥಿಗಳ ಹೆಸರುಗಳು ಕೆಳಗಿನಂತಿವೆ

ಬಿಜಾಪುರ (ಎಸ್‌ಸಿ) - ಪ್ರಕಾಶ್ ರಾಥೋಡ್
ಗುಲ್ಬರ್ಗ (ಎಸ್‌ಸಿ) - ಮಲ್ಲಿಕಾರ್ಜುನ ಖರ್ಗೆ
ಬೀದರ್ - ಧರಂ ಸಿಂಗ್
ಬಳ್ಳಾರಿ (ಎಸ್‌ಟಿ) - ಎನ್.ವೈ.ಹನುಮಂತಪ್ಪ
ತುಮಕೂರು - ಮುದ್ದಹನುಮೇಗೌಡ
ದಾವಣಗೆರೆ - ಎಸ್.ಎಸ್.ಮಲ್ಲಿಕಾರ್ಜುನ್
ಉಡುಪಿ - ಚಿಕ್ಕಮಗಳೂರು - ಜಯಪ್ರಕಾಶ್ ಹೆಗ್ಡೆ
ಹಾಸನ - ಎ.ಮಂಜು
ಮಂಡ್ಯ - ರಮ್ಯಾ
ಮೈಸೂರು - ಎ.ಎಚ್.ವಿಶ್ವನಾಥ್
ಚಾಮರಾಜನಗರ (ಎಸ್‌ಸಿ) - ಧ್ರುವನಾರಾಯಣ್
ಬೆಂಗಳೂರು ಗ್ರಾಮಾಂತರ - ಡಿ.ಕೆ.ಸುರೇಶ್
ಬೆಂಗಳೂರು ದಕ್ಷಿಣ - ನಂದನ್ ನಿಲೇಕಣಿ [ಭಾನುವಾರ ಕಾಂಗ್ರೆಸ್ಸಿಗೆ ನಂದನ್]
ಕೋಲಾರ (ಎಸ್‌ಸಿ) - ಕೆ.ಎಚ್.ಮುನಿಯಪ್ಪ

English summary
AICC has released first list of candidates in Karnataka for Lok Sabha Election to be held on April 17. As expected Nandan Nilekani, Ramya, Kharge, Dharam have found their names in the list. Veerappa Moily does not figure in the first list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X