Congress Candidate List: ಮಾರ್ಚ್ 10ರೊಳಗೆ ಕಾಂಗ್ರೆಸ್ ಮೊದಲ ಪಟ್ಟಿ? ಕರ್ನಾಟಕದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ
ಬೆಂಗಳೂರು, ಮಾರ್ಚ್ 01: ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳಲ್ಲಿ ಗೆಲುವು ಸಾಧಿಸಿದ ಕರ್ನಾಟಕ ಕಾಂಗ್ರೆಸ್ ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದೆ. ಲೋಕಸಮರದಲ್ಲೂ ಕಾಂಗ್ರೆಸ್ ಹೈಕಮಾಂಡ್ ಕೊಟ್ಟ ಟಾರ್ಗೆಟ್ ಗೆ ಸಕಲ ಸಿದ್ದತೆ ನಡೆಸುತ್ತಿದ್ದು, ಅಭ್ಯರ್ಥಿಗಳ ಆಯ್ಕೆಯೇ ಕಾಂಗ್ರೆಸ್ ನಾಯಕರಿಗೆ ತಲೆನೋವಾಗಿದೆ.
ಈಗಾಗಲೇ ಬಿಜೆಪಿ ಹೈಕಮಾಂಡ್ 195 ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡಿದ್ದು, ಕಾಂಗ್ರೆಸ್ ಹೈಕಮಾಂಡ್ ಮಾರ್ಚ್ 10 ರ ಒಳಗೆ ಮೊದಲ ಪಟ್ಟಿ ಬಿಡುಗಡೆಗೆ ಸಿದ್ದತೆ ನಡೆಸಿದೆ. ಇನ್ನೂ ಈ ವಾರ ಕಾಂಗ್ರೆಸ್ ಹೈಕಮಾಂಡ್ ನಾಯಕರು ಸಭೆ ನಡೆಸಲಿದ್ದು, ಈ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಇಬ್ಬರೂ ಹೈಕಮಾಂಡ್‌ರನ್ನ ಭೇಟಿಯಾಗಲಿದ್ದು, ಕೆಪಿಸಿಸಿಯಿಂದ ಫೈನಲ್ ಮಾಡಿರುವ ಪಟ್ಟಿ ಸಲ್ಲಿಕೆ ಮಾಡಲಿದ್ದಾರೆ.

ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ
ಬೆಂಗಳೂರು ಗ್ರಾಮಾಂತರ - ಡಿ.ಕೆ.ಸುರೇಶ್
ಮೈಸೂರು - ಎನ್.ಲಕ್ಷ್ಮಣ್, ಡಾಲಿ ಧನಂಜಯ್
ಮಂಡ್ಯ - ಸ್ಟಾರ್ ಚಂದ್ರು
ತುಮಕೂರು - ಎಸ್.ಪಿ.ಮುದ್ದಹನುಮೇಗೌಡ, ಡಿ.ಸಿ.ಗೌರಿಶಂಕರ್
ಚಿಕ್ಕಬಳ್ಳಾಪುರ- ರಕ್ಷಾ ರಾಮಯ್ಯ
ಕೋಲಾರ - ಕೆ.ಎಚ್.ಮುನಿಯಪ್ಪ
ಉಡುಪಿ-ಚಿಕ್ಕಮಗಳೂರು - ಜಯಪ್ರಕಾಶ್ ಹೆಗ್ಡೆ
ಬೆಂಗಳೂರು ಸೆಂಟ್ರಲ್ - ರಿಜ್ವಾನ್ ಹರ್ಷದ್, ಟಬೂ ಗುಂಡೂರಾವ್
ಬೆಂಗಳೂರು ಉತ್ತರ - ಕುಸುಮಾ ಹನುಮಂತರಾಯಪ್ಪ
ಬೆಂಗಳೂರು ದಕ್ಷಿಣ - ಸೌಮ್ಯ ರೆಡ್ಡಿ
ಉತ್ತರ ಕನ್ನಡ - ಅಂಜಲಿ ನಿಂಬಾಳ್ಕರ್
ಚಾಮರಾಜನಗರ: ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಥವಾ ಪುತ್ರ ಸುನೀಲ್ ಬೋಸ್
ಹಾಸನ : ಮಾಜಿ ಸಚಿವ ಬಿ.ಶಿವರಾಂ, ಗೋಪಾಲ ಕೃಷ್ಣ
ಮಂಗಳೂರು : ಮಿಥುನ್ ರೈ
ಉಡುಪಿ-ಚಿಕ್ಕಮಗಳೂರು : ಜಯಪ್ರಕಾಶ ಶೆಟ್ಟಿ
ಶಿವಮೊಗ್ಗ : ನಟ ಶಿವರಾಜಕುಮಾರ್ ಪತ್ನಿ ಗೀತಾ ಶಿವರಾಜಕುಮಾರ್
ದಾವಣಗೆರೆ: ಸಚಿವ ಮಲ್ಲಿಕಾರ್ಜುನ್ ಪತ್ನಿ ಪ್ರಭಾ ಮಲ್ಲಿಕಾರ್ಜುನ, ವಿನಯ್ ಕುಮಾರ್
ಚಿತ್ರದುರ್ಗ: ಎಚ್.ಆಂಜನೇಯ, ಬಿ.ಎನ್.ಚಂದ್ರಪ್ಪ
ಹಾವೇರಿ : ಮಾಜಿ ಶಾಸಕ ಡಿ.ಆರ್.ಪಾಟೀಲ್, ಸಲ್ಲಿಂ ಅಹಮದ್
ಚಿಕ್ಕೋಡಿ: ಮಾಜಿ ಶಾಸಕ ವಿವೇಕ ಪಾಟೀಲ್
ವಿಜಯಪುರ: ಮಾಜಿ ಶಾಸಕ ರಾಜು ಆಲಗೂರ
ಬೀದರ್: ಮಾಜಿ ಶಾಸಕ ರಾಜಶೇಖರ ಪಾಟೀಲ್
ಬಳ್ಳಾರಿ: ವಿ.ಎಸ್.ಉಗ್ರಪ್ಪ
ಬಾಗಲಕೋಟೆ: ವೀಣಾ ಕಾಶಪ್ಪನವರ್
ಕೋಲಾರ: ಕೆ.ಎಚ್ ಮುನಿಯಪ್ಪ
ರಾಯಚೂರು : ಬಿವಿ ನಾಯಕ್
ದಕ್ಷಿಣ ಕನ್ನಡ: ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ
ಚಿಕ್ಕೋಡಿ: ಗಣೇಶ್ ಹುಕ್ಕೇರಿ












Click it and Unblock the Notifications