Breaking: ದೆಹಲಿಯತ್ತ ರಾಜ್ಯದ 28 ಸಚಿವರು, 'ರಾಗಾ' ಜತೆ ಮಹತ್ವದ ಸಭೆ

ಬೆಂಗಳೂರು, ಜನವರಿ 11: ಲೋಕಸಭಾ ಚುನಾವಣೆ ಪ್ರಯುಕ್ತ ಕಾಂಗ್ರೆಸ್ ಪಾಳೆಯಲ್ಲಿ ಸಿದ್ಧತಾ ಚಟುವಟಿಕೆಗಳು ಗರಿಗೆದರಿವೆ. ಇಂದು ಗುರುವಾರ ಕರ್ನಾಟಕದ 28 ಸಚಿವರು ದೆಹಲಿಗೆ ತೆರಳಲಿದ್ದು, ಅಲ್ಲಿ ನಡೆಯಲಿರುವ ಮಹತ್ವದ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಮತಗಳು ಹಾಗೂ ಸ್ಥಾನ ಗೆಲ್ಲುವ ದೃಷ್ಟಿ ಗಮನದಲ್ಲಿಟ್ಟುಕೊಂಡು ರಾಜ್ಯದ ಎಲ್ಲ 28 ಕ್ಷೇತ್ರಗಳಿಗೆ ಸಚಿವರನ್ನು ನಿಯೋಜಕರಾಗಿ ನೇಮಕ ಮಾಡಲಾಗಿದೆ. ಅವರನ್ನು ದೆಹಲಿಗೆ ಕರೆಸಿರುವ ಕಾಂಗ್ರೆಸ್ ಹೈಕಮಾಂಡ್ ಇಂದು ಚರ್ಚೆ ನಡೆಸಲಿದೆ. ಲೋಕಸಭಾ ಚುನಾವಣೆ ಸಿದ್ಧತೆ, ರೂಪರೇಷೆ, ತಂತ್ರಗಳ ಕುರಿತು ರಾಹುಲ್ ಗಾಂಧಿಯವರ ಸಮ್ಮುಖದಲ್ಲಿ ಮಹತ್ವದ ಚರ್ಚೆಗಳು ಆಗಲಿವೆ.

 Lok Sabha Election 2024: Karnatakas 28 Ministers Visit Delhi For Important Meeting

ಈ ಸಭೆಯಲ್ಲಿ ಕಾಂಗ್ರೆಸ್‌ ಹೈಕಮಾಂಡ್ ನಾಯಕರಾದ ವೇಣುಗೋಪಾಲ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರು, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮತ್ತಿತರರು ಭಾಗವಹಿಸಿ ಸಚಿವರ ಜತೆಗೆ ಸಮಾಲೋಚಣೆ ನಡೆಸಲಿದ್ದಾರೆ. ಸುರ್ಜೇವಾಲ ಅವರು ಈಗಾಗಲೇ ಕರ್ನಾಟಕದಲ್ಲಿ ಪೂರ್ವಭಾವಿ ಸಭೆ ನಡೆಸಿದ್ದಾರೆ.

ಪಾಲ್ಗೊಳ್ಳುವ ನಾಯಕರು ಯಾರು?

ಕರ್ನಾಟಕದ ಸಚಿವರಾದ ಡಾ. ಜಿ.ಪರಮೇಶ್ವರ್, ರಾಮಲಿಂಗಾ ರೆಡ್ಡಿ, ಜಮೀರ್ ಅಹ್ಮದ್, ಚೆಲುವರಾಯ ಸ್ವಾಮಿ, ಈಶ್ವರ್ ಖಂಡ್ರೆ, ಆರ್.ಬಿ.ತಿಮ್ಮಾಪುರ, ಎಂಬಿ ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್, ಮಹಾದೇವಪ್ಪ, ಡಾ.ಎಂ.ಸಿ ಸುಧಾಕರ್, ಎಸ್‌ಎಸ್ ಮಲ್ಲಿಕಾರ್ಜುನ್, ಕೆಜೆ ಜಾರ್ಜ್‌, ಡಿ.ಸುಧಾಕರ್, ಮಧು ಬಂಗಾರಪ್ಪ, ಕೆ.ಎನ್. ರಾಜಣ್ಣ, ದಿನೇಶ್ ಗುಂಡೂರಾವ್, ಮಾಂಕಾಳ್ ವೈದ್ಯ, ಶಿವರಾಜ ತಂಗಡಗಿ, ಸಂತೋಷ್ ಲಾಡ್, ನಾಗೇಂದ್ರ, ಪ್ರಿಯಾಂಕ್ ಖರ್ಗೆ, ಬೈರತಿ ಸುರೇಶ್, ಕೆ.ವೆಂಕಟೇಶ್, ಸತೀಶ್ ಜಾರಕಿಹೊಳಿ ಸೇರಿದಂತೆ ಒಟ್ಟು 28 ಮಂದಿ ಇಂದು ದೆಹಲಿಗೆ ತೆರಳಲಿದ್ದಾರೆ.

ಇತ್ತೀಚೆಗೆ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಬೇಕು ಎಂಬ ವಿಚಾರ ಬಹಳ ಚರ್ಚೆಗೆ ಬಂದಿತ್ತು. ಈ ಬಗ್ಗೆ ಎಂಟು ಸಚಿವರು ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರ ಮೇಲೆ ಒತ್ತಡ ಹೇರಿದ್ದರು. ಸದ್ಯ ಆ ಬಗ್ಗೆ ಯಾವ ನಿರ್ಧಾರ ಹೊರ ಬಿದ್ದಿಲ್ಲ ಎನ್ನಲಾಗಿದೆ. ಡಿಸಿಎಂ ಪೋಸ್ಟ್‌ಗೆ ಒತ್ತಡ ಹೇರಿದ್ದರು ಈ ದೆಹಲಿ ಸಭೆಯಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+