‘ಮಲೆನಾಡು, ಕರಾವಳಿ ಭಾಗದ ರೈತರ ಮೇಲೆ ಕೇಂದ್ರ ಬಿಜೆಪಿ ಸರ್ಕಾರದ ಪ್ರಹಾರ..’
ಲೋಕಸಭೆ ಚುನಾವಣೆಗೆ ಕೌಂಟ್‌ಡೌನ್ ಶುರುವಾಗಿರುವ ಸಮಯದಲ್ಲೇ ಬಿಜೆಪಿ & ಕಾಂಗ್ರೆಸ್ ನಾಯಕರ ನಡುವೆ ಫೈಟಿಂಗ್ ಕೂಡ ಬಲು ಜೋರಾಗಿದೆ. ಒಂದು ಕಡೆ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಸಾಧನೆ ನೋಡಿ, 2024 ರಲ್ಲಿ ಮತ್ತೊಮ್ಮೆ ಬಿಜೆಪಿಗೆ ಓಟ್ ಹಾಕಬೇಕೆಂಬ ಮನವಿ ಮುಂದಿಡುತ್ತಿದ್ದಾರೆ. ಆದ್ರೆ ಇದೇ ಸಮಯದಲ್ಲಿ ಕಾಂಗ್ರೆಸ್ ಬೇರೆಯದ್ದೇ ಅಸ್ತ್ರವನ್ನು ಪ್ರಯೋಗ ಮಾಡಿದೆ.
ಕೇಂದ್ರ ಸರ್ಕಾರ ಅಡಕೆ, ಕಾಳು ಮೆಣಸು ಸೇರಿದಂತೆ ಹಲವು ಕೃಷಿ ಉತ್ಪನ್ನಗಳನ್ನ ಆಮದು ಮಾಡಿಕೊಳ್ಳಲು ಅನುಮತಿ ನೀಡುತ್ತಿದೆ. ಹೀಗಾಗಿ ಕರ್ನಾಟಕದ ರೈತರು ಸೇರಿದಂತೆ ಭಾರತದ ಕೃಷಿಕರಿಗೆ ಅನ್ಯಾಯ ಆಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಹೀಗಿದ್ದಾಗಲೇ ಕರ್ನಾಟಕ ಕಾಂಗ್ರೆಸ್ ಕೂಡ ಬಿಜೆಪಿ ನಾಯಕರು & ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ಹೊಸ ಅಸ್ತ್ರ ಪ್ರಯೋಗ ಮಾಡಿದೆ. ಅಲ್ಲದೆ ಈ ಮೂಲಕ 2024ರ ಲೋಕಸಭೆಗೂ ಮೊದಲು ಭರ್ಜರಿ ಆರೋಪದ ಬಾಂಬ್ ಸಿಡಿಸಿದೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರವನ್ನ & ಕರ್ನಾಟಕ ಬಿಜೆಪಿ ನಾಯಕರನ್ನೂ ಹೀಗೆ ಕಾಂಗ್ರೆಸ್ ಟೀಕೆ ಮಾಡಿದೆ! ಹಾಗಾದರೆ ಇದೀಗ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮಾಡಿದ ಆರೋಪ ಏನು?

ಅಡಕೆ, ಕಾಳು ಮೆಣಸು..
ಈ ಕುರಿತು ಇದೀಗ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, 'ಮಲೆನಾಡು, ಕರಾವಳಿ ಭಾಗದ ರೈತರ ಮೇಲೆ ಕೇಂದ್ರ ಬಿಜೆಪಿ ಸರ್ಕಾರದ ಪ್ರಹಾರ. ಕಾಳು ಮೆಣಸು ಬೆಳೆಗಾರರ ಹಿತ ಕಡೆಗಣಿಸಿ ಆಮದು ಮಾಡಿಕೊಳ್ಳಲು ಅನುವು ಮಾಡಿಕೊಟ್ಟ ಕೇಂದ್ರ ಸರ್ಕಾರ ಈಗ ದೊಡ್ಡ ಪ್ರಮಾಣದಲ್ಲಿ ಅಡಿಕೆ ಅಮದಿಗೂ ಅವಕಾಶ ಮಾಡಿಕೊಟ್ಟಿದೆ. ಅಡಿಕೆ ಬೆಳೆಯ ಪ್ರದೇಶದಿಂದ ಆಯ್ಕೆಯಾದ ಬಿಜೆಪಿ ಸಂಸದರು ಬೆಳೆಗಾರರ ಪರ ನಿಲ್ಲದೆ ಕಂಪೆನಿಗಳ ಲಾಭಿಗೆ ಮಣಿದು ಮೌನ ವಹಿಸಿದ್ದಾರೆ.' ಎಂದು ಕರ್ನಾಟಕ ಬಿಜೆಪಿ ನಾಯಕರ ವಿರುದ್ಧ ಈಗ ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.
ಹಾಗೇ ಇದೇ ಟ್ವೀಟ್‌ನಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಆರೋಪವನ್ನು ಮುಂದುವರಿಸುತ್ತಾ, 'ರಾಜ್ಯದ ಅಡಿಕೆ ಬೆಲೆ ಕುಸಿತವಾದರೆ ಅಡಿಕೆ ಬೆಳೆಯನ್ನು ಅವಲಂಬಿಸಿರುವ ಮಲೆನಾಡು, ಅರೆ ಮಲೆನಾಡು ಪ್ರದೇಶದ ಬಹುಪಾಲು ಆರ್ಥಿಕತೆ ಕುಸಿಯಲಿದೆ. ಅಡಿಕೆ ಬೆಳೆಯುವುದನ್ನೇ ಕಡಿಮೆ ಮಾಡಿ ಎಂಬ ಬೇಕಾಬಿಟ್ಟಿ ಸಲಹೆ ಕೊಡುವ @JnanendraAraga ತರದ @BJP4Karnataka ನಾಯಕರು ಅಡಿಕೆ ಅಮದಿಗೆ ಕಡಿವಾಣ ಹಾಕಿ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಧೈರ್ಯ ತೋರುವುದಿಲ್ಲವೇಕೆ?' ಎಂದು ಸವಾಲು ಎಸೆದಿದೆ ಕರ್ನಾಟಕ ಕಾಂಗ್ರೆಸ್.
ಮಲೆನಾಡು, ಕರಾವಳಿ ಭಾಗದ ರೈತರ ಮೇಲೆ ಕೇಂದ್ರ ಬಿಜೆಪಿ ಸರ್ಕಾರದ ಪ್ರಹಾರ.
— Karnataka Congress (@INCKarnataka) March 9, 2024
ಕಾಳು ಮೆಣಸು ಬೆಳೆಗಾರರ ಹಿತ ಕಡೆಗಣಿಸಿ ಆಮದು ಮಾಡಿಕೊಳ್ಳಲು ಅನುವು ಮಾಡಿಕೊಟ್ಟ ಕೇಂದ್ರ ಸರ್ಕಾರ ಈಗ ದೊಡ್ಡ ಪ್ರಮಾಣದಲ್ಲಿ ಅಡಿಕೆ ಅಮದಿಗೂ ಅವಕಾಶ ಮಾಡಿಕೊಟ್ಟಿದೆ.
ಅಡಿಕೆ ಬೆಳೆಯ ಪ್ರದೇಶದಿಂದ ಆಯ್ಕೆಯಾದ ಬಿಜೆಪಿ ಸಂಸದರು ಬೆಳೆಗಾರರ ಪರ ನಿಲ್ಲದೆ ಕಂಪೆನಿಗಳ ಲಾಭಿಗೆ… pic.twitter.com/Z5bAhx1AWk
ಕರ್ನಾಟಕದಲ್ಲಿ ಗೆಲುವು ಯಾರಿಗೆ?
ಬಿಜೆಪಿ 2014ರಲ್ಲಿ ಮೊದಲನೆಯ ಬಾರಿಗೆ ಕೇಂದ್ರದಲ್ಲಿ ಅಧಿಕಾರ ಹಿಡಿಯಿತು ಅಲ್ಲಿಂದ ಈವರೆಗೆ 10 ವರ್ಷಗಳ ಆಡಳಿತದಲ್ಲಿ ಮತ್ತಷ್ಟು ಪ್ರಬಲವಾಗಿ ಬೆಳೆದಿದೆ. ಈಗಿನ ಪರಿಸ್ಥಿತಿ ನೋಡುತ್ತಿದ್ದರೆ, ಬಿಜೆಪಿ ಭರ್ಜರಿ ಗೆಲುವುನ್ನ ದಾಖಲಿಸುತ್ತೆ ಎನ್ನಲಾಗುತ್ತಿದೆ. ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟಕ್ಕೆ ಭರ್ಜರಿ ದಿಗ್ವಿಜಯ ಸಿಗುವುದು ಗ್ಯಾರಂಟಿ ಅಂತಾ ಸಮೀಕ್ಷೆಗಳು ಇದೀಗ ಹೇಳುತ್ತಿವೆ.

ಸಮೀಕ್ಷೆಗಳ ಭವಿಷ್ಯ ನಿಜವಾಗುತ್ತಾ?
ಲೋಕಸಭೆ ಚುನಾವಣೆ ಅಖಾಡ ರಂಗಾಗಿದ್ದು, ಜಯ ಒಂದೇ ಮಂತ್ರ ಅಂತಾ ಈಗ ಕಾಂಗ್ರೆಸ್ & ಬಿಜೆಪಿ ನಾಯಕರು ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅದರಲ್ಲೂ, ಬಿಜೆಪಿ ಜೊತೆಗೆ ಜೆಡಿಎಸ್ ಪಕ್ಷ ಕೈಜೋಡಿಸಿ ಎನ್‌ಡಿಎ ಒಕ್ಕೂಟಕ್ಕೆ ಸೇರಿದೆ. ಈ ಕಾರಣಕ್ಕೆ ಇದೀಗ ಹೊರಬಿದ್ದಿರುವ ಕೆಲವು ಸಮೀಕ್ಷೆ ಪ್ರಕಾರ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ ಕರ್ನಾಟಕದಲ್ಲಿ 2024 ರ ಲೋಕಸಭೆ ಚುನಾವಣೆಯಲ್ಲಿ 22-28 ಸ್ಥಾನಗಳ ಗೆಲ್ಲಬಹುದು ಎನ್ನಲಾಗುತ್ತಿದೆ.












Click it and Unblock the Notifications