ಯಡಿಯೂರಪ್ಪ ಮಾತೇ ಫೈನಲ್? ಲೋಕಸಭೆಗೆ ಕರ್ನಾಟಕದ ಬಿಜೆಪಿ ಅಭ್ಯರ್ಥಿಗಳು ಇವರೇನಾ?

ಲೋಕಸಭೆ ಚುನಾವಣೆ 2024ಕ್ಕೆ ಕ್ಷಣಗಣನೆ ಶುರುವಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಭಾರತೀಯ ಚುನಾವಣಾ ಆಯೋಗ ಕೂಡ ಎಲೆಕ್ಷನ್ ಡೇಟ್ ಘೋಷಣೆ ಮಾಡುವ ನಿರೀಕ್ಷೆ ಇದೆ. ಹೀಗಿದ್ದಾಗ ಕಾಂಗ್ರೆಸ್ ಇಂದು ಕರ್ನಾಟಕದ ಲೋಕಸಭಾ ಅಭ್ಯರ್ಥಿಗಳ ಮೊದಲನೇ ಪಟ್ಟಿಯನ್ನು ರಿಲೀಸ್ ಮಾಡಿದೆ. ಹಾಗಾದರೆ ಬಿಜೆಪಿ ಮಾತ್ರ ಯಾಕೆ ಇನ್ನೂ ಘೋಷಿಸಿಲ್ಲ? ಬಿಜೆಪಿಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಾತೇ ಫೈನಲ್ ಆಗುತ್ತಾ..? ಬನ್ನಿ ಸಂಪೂರ್ಣ ಮಾಹಿತಿ ತಿಳಿಯೋಣ.

ಕರ್ನಾಟಕ ಬಿಜೆಪಿಯಲ್ಲಿ ಬಿ.ಎಸ್. ಯಡಿಯೂರಪ್ಪ ಪ್ರಶ್ನಾತೀತ ನಾಯಕ ಅನ್ನೋದರಲ್ಲಿ ಯಾವುದೇ ಅನುಮಾನ ಇಲ್ಲ ಅಂತಾರೆ ಅವರ ಬೆಂಬಲಿಗರು. ಇನ್ನು ಬಿಎಸ್‌ವೈ ಬೆಂಬಲಿಗರ ಮಾತಿಗೆ ಪುಷ್ಠಿ ನೀಡುವಂತೆ 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಕೇಂದ್ರದ ನಾಯಕರು, ಯಡಿಯೂರಪ್ಪ ಅವರನ್ನು ದೂರ ಇಟ್ಟು ಹೀನಾಯ ಸೋಲನ್ನು ಕಾಣಬೇಕಾಗಿ ಬಂತು. ಹೀಗಾಗಿ ಈಗ ಲೋಕಸಭೆ ಚುನಾವಣೆಗೆ ಮೊದಲೇ ಯಡಿಯೂರಪ್ಪ ಅವರನ್ನ ವಿಶ್ವಾಸಕ್ಕೆ ತೆಗೆದುಕೊಂಡ ಬಿಜೆಪಿ ಕೇಂದ್ರ ನಾಯಕರು ಹೊಸ ನಡೆ ಇಟ್ಟಿದ್ದಾರೆ. ಹಾಗಾದರೆ ಇದೀಗ ಕರ್ನಾಟಕದಲ್ಲಿ ಬಿಜೆಪಿ ಲೋಕಸಭಾ ಅಭ್ಯರ್ಥಿಗಳ ಆಯ್ಕೆಯಲ್ಲಿ ಕೂಡ ಯಡಿಯೂರಪ್ಪ ಅವರ ಮಾತೇ ಫೈನಲ್ ಆಗಿರುತ್ತಾ? ಮುಂದೆ ಓದಿ.

Lok Sabha Election 2024 BS Yediyurappa May Take Major Role In Selecting The Candidates For Karnataka

ಯಡಿಯೂರಪ್ಪ ಮಾತಿಗೆ ಗ್ರೀನ್ ಸಿಗ್ನಲ್?

ಕರ್ನಾಟಕ ಬಿಜೆಪಿಯಲ್ಲಿ ಗುಂಪುಗಾರಿಕೆ ಇದೆ, ಹೀಗಾಗಿಯೇ 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಾಣಬೇಕಾಗಿ ಬಂತು ಅನ್ನೋ ಆರೋಪ ಇದೆ. ಈ ಆರೋಪಕ್ಕೆ ಬಲ ನೀಡುವಂತೆ ಬಿಜೆಪಿ ಸರ್ಕಾರದ ಸಚಿವರೆಲ್ಲರೂ ಸೋತು ಸುಣ್ಣವಾಗಿದ್ದರು. ಹೀಗಿದ್ದಾಗ ಇದೀಗ ಲೋಕಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಅವರ ಮಾತಿಗೆ ಮನ್ನಣೆ ನೀಡಲು & ಈ ಮೂಲಕ ಯಡಿಯೂರಪ್ಪ ಅವರ ಆಯ್ಕೆಯ ಅಭ್ಯರ್ಥಿಗಳಿಗೆ ಟಿಕೆಟ್‌ನ ನೀಡೋದಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಬಿಜೆಪಿ ಪಟ್ಟಿ ಯಾವಾಗ ರಿಲೀಸ್?

ಇನ್ನೇನು 2ರಿಂದ 3 ದಿನದಲ್ಲಿ ಬಿಜೆಪಿ ಪಕ್ಷದ ಕರ್ನಾಟಕದ ಲೋಕಸಭಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗುವ ನಿರೀಕ್ಷೆ ಇದೆ. ಅದರಲ್ಲೂ ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರ ಸಲಹೆಗಳನ್ನು ಪಡೆದು ಅಭ್ಯರ್ಥಿಗಳನ್ನು ಫೈನಲ್ ಮಾಡಲು ಇದೀಗ ಬಿಜೆಪಿ ಕೇಂದ್ರ ನಾಯಕರು ಹೆಜ್ಜೆ ಇಟ್ಟಂತೆ ಕಾಣುತ್ತಿದೆ. ಈ ಮೂಲಕವೇ ಯಡಿಯೂರಪ್ಪ ಅವರು ತಮ್ಮ ವಿರೋಧಿ ಬಣಕ್ಕೆ ಮತ್ತೆ ಆಘಾತ ನೀಡುತ್ತಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ.

ಪ್ರಬಲವಾಗಿ ಬೆಳೆದಿದೆ ಬಿಜೆಪಿ

ಬಿಜೆಪಿ 2014ರಲ್ಲಿ ಮೊದಲನೆಯ ಬಾರಿಗೆ ಕೇಂದ್ರದಲ್ಲಿ ಅಧಿಕಾರ ಹಿಡಿಯಿತು ಅಲ್ಲಿಂದ ಈವರೆಗೆ ಒಟ್ಟಾರೆ 10 ವರ್ಷ ಆಡಳಿತದಲ್ಲಿ ಮತ್ತಷ್ಟು ಪ್ರಬಲವಾಗಿ ಬೆಳೆದಿದೆ. ಅದರಲ್ಲೂ ಈಗಿನ ಪರಿಸ್ಥಿತಿ ನೋಡುತ್ತಿದ್ದರೆ, ಬಿಜೆಪಿ ಭರ್ಜರಿ ಗೆಲುವುನ್ನ ದಾಖಲಿಸುತ್ತದೆ ಎನ್ನಲಾಗುತ್ತಿದೆ. ಕರ್ನಾಟಕದಲ್ಲಿ ಈಗ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟಕ್ಕೆ ಭರ್ಜರಿ ದಿಗ್ವಿಜಯ ಸಿಗುವುದು ಗ್ಯಾರಂಟಿ, ಅಂತಾ ಹೇಳಲಾಗುತ್ತಿದೆ. ಸಮೀಕ್ಷೆಗಳು ಈ ರೀತಿಯಾಗಿ ಭವಿಷ್ಯ ನುಡಿಯುತ್ತಿವೆ. ಹೀಗಾಗಿ ಬಿಜೆಪಿಯ ಕೇಂದ್ರದ ನಾಯಕರಿಗೆ ಕೂಡ ಮತ್ತಷ್ಟು ಹುಮ್ಮಸ್ಸು ಬಂದಂತಾಗಿದೆ.

Lok Sabha Election 2024 BS Yediyurappa May Take Major Role In Selecting The Candidates For Karnataka

ಸಮೀಕ್ಷೆಗಳ ಭವಿಷ್ಯ ನಿಜವಾಗುತ್ತಾ?

ಲೋಕಸಭೆ ಚುನಾವಣೆ ಅಖಾಡ ರಂಗು ರಂಗಾಗಿದೆ ಜಯ ಒಂದೇ ಮಂತ್ರ ಅಂತ, ಈಗ ಕಾಂಗ್ರೆಸ್ & ಬಿಜೆಪಿ ನಾಯಕರು ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅದರಲ್ಲೂ, ಬಿಜೆಪಿ ಜೊತೆಗೆ ಜೆಡಿಎಸ್ ಪಕ್ಷ ಕೈಜೋಡಿಸಿ ಎನ್‌ಡಿಎ ಒಕ್ಕೂಟಕ್ಕೆ ಸೇರಿದೆ. ಈ ಕಾರಣ ವಾತಾವರಣ ಬಹುತೇಕ ಬದಲಾಗಿ ಹೋಗಿದೆ. ಇದೀಗ ಹೊರಬಿದ್ದಿರುವ ಕೆಲವು ಸಮೀಕ್ಷೆಗಳ ಪ್ರಕಾರ, ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ ಕರ್ನಾಟಕದಲ್ಲಿ 2024ರ ಲೋಕಸಭೆ ಚುನಾವಣೆಯಲ್ಲಿ 22-28 ಸ್ಥಾನಗಳ ಗೆಲ್ಲಬಹುದು ಎನ್ನಲಾಗುತ್ತಿದೆ. ಹೀಗಾಗಿ ಚುನಾವಣೆಗೆ ಮೊದಲೇ ಕುತೂಹಲ ಡಬಲ್ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+