ಚಿನ್ನದ ನಾಡು ಕೋಲಾರ ಮತ್ತೆ ಕೈವಶ
ಬೆಂಗಳೂರು, ಮೇ 19 : ಚಿನ್ನದ ನಾಡು ಕೋಲಾರ ಮತ್ತೊಮ್ಮೆ ಕೈವಶವಾಗಿದೆ. 2014ರ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಸತತವಾಗಿ ಏಳು ಬಾರಿ ಕೋಲಾರದಿಂದ ಆಯ್ಕೆ ಆಗಿ ಸಂಸತ್ ಪ್ರವೇಶಿಸಿದ ಕೀರ್ತಿಗೆ ಮುನಿಯಪ್ಪ ಪಾತ್ರರಾಗಿದ್ದಾರೆ.
1991, 1998, 1999 2004, 2009 ಮತ್ತು 2014ರ ಚುನಾವಣೆಯಲ್ಲಿ ಕೆ.ಎಚ್.ಮುನಿಯಪ್ಪ ಕೋಲಾರ ಕ್ಷೇತ್ರದಿಂದ ಜಯಗಳಿಸಿದ್ದಾರೆ. ಶುಕ್ರವಾರ ನಡೆದ ಮತ ಎಣಿಕೆಯಲ್ಲಿ 4,18,926 ಮತಗಳನ್ನು ಪಡೆಯುವ ಮೂಲಕ ಮುನಿಯಪ್ಪ ಅವರು, ಜೆಡಿಎಸ್ ಅಭ್ಯರ್ಥಿ ಕೇಶವ ಅವರನ್ನು ಸೋಲಿಸಿದ್ದಾರೆ. [ಕರ್ನಾಟಕದಲ್ಲಿ ಸೋತು ಗೆದ್ದವರು]

ಶುಕ್ರವಾರ ನಡೆದ ಮತ ಎಣಿಕೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕೇಶವ ಅವರು ಮೊದಲ ಮೂರು ಸುತ್ತುಗಳಲ್ಲಿ ಮುನ್ನಡೆ ಸಾಧಿಸಿದ್ದರು. ಅಂತಿಮವಾಗಿ ಕೆ.ಎಚ್.ಮುನಿಯಪ್ಪ ಗೆಲುವು ಸಾಧಿಸುವ ಮೂಲಕ ಏಳನೇ ಬಾರಿ ಸಂಸತ್ ಪ್ರವೇಶಿಸಿದರು. ಏ.17ರಂದು ನಡೆದ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಲ್ಲಿ ಶೇ 75.50ರಷ್ಟು ಮತದಾನವಾಗಿತ್ತು.
| ಕೋಲಾರ | ಪಡೆದ ಸ್ಥಾನ | ಪಕ್ಷ | ಪಡೆದ ಮತಗಳು |
| ಕೆ.ಎಚ್.ಮುನಿಯಪ್ಪ | 1 | ಕಾಂಗ್ರೆಸ್ | 4,18,926 |
| ಕೋಲಾರ ಕೇಶವ | 2 | ಜೆಡಿಎಸ್ | 3,71,076 |
| ನಾರಾಯಣಸ್ವಾಮಿ | 3 | ಬಿಜೆಪಿ | 2,67,322 |
| ಕೊತ್ತಗಾನಹಳ್ಳಿ ರಾಮಯ್ಯ | 4 | ಎಎಪಿ | 17,563 |












Click it and Unblock the Notifications