District In-charge Ministers: ಸಂಪುಟ ಸೇರಾಯ್ತು, ಈಗ ಜಿಲ್ಲಾ ಉಸ್ತುವಾರಿ ಸಚಿವರ ಸ್ಥಾನಕ್ಕೆ ಲಾಬಿ! ಇಲ್ಲಿದೆ ಸಂಭಾವ್ಯ ಪಟ್ಟಿ
ಬೆಂಗಳೂರು, ಜೂನ್ 07: ಐತಿಹಾಸಿಕ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಸರ್ಕಾರ ರಚನೆಯಲ್ಲಿಯ ಆರಂಭದಲ್ಲೇ ಮುಖ್ಯಮಂತ್ರಿ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಹೈಕಮಾಂಡ್ ನಾಯಕರ ಸಮ್ಮುಖದಲ್ಲಿ ಎಲ್ಲಾ ಗೊಂದಲಗಳಿಗೂ ತೆರೆ ಬಿದ್ದಿದೆ. ಆದರೆ, ಇದೀಗ ಸಿದ್ದರಾಮಯ್ಯ ಸರ್ಕಾರಕ್ಕೆ ಸದ್ಯ ಮತ್ತೊಂದು ಸವಾಲು ಎದುರಾಗಿದೆ.
ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕದ ತಲೆನೋವಾಗಿದೆ. ಈ ನಡುವೆ ಜಿಲ್ಲೆಗಳ ಉಸ್ತುವಾರಿ ಸ್ಥಾನಕ್ಕೆ ಕಾಂಗ್ರೆಸ್ನಲ್ಲಿ ಭರ್ಜರಿ ಪೈಪೋಟಿ ಶುರುವಾಗಿದ್ದು, ಸಚಿವರು ಕೂಡ ಭರ್ಜರಿ ಲಾಬಿ ನಡೆಸಿದ್ದಾರೆ ಎನ್ನಲಾಗಿದೆ.

ಈ ನಡುವೆ ಸಂಭಾವ್ಯ 'ಉಸ್ತುವಾರಿ' ಸಚಿವ ಪಟ್ಟಿ ಒನ್ ಇಂಡಿಯಾ ಕನ್ನಡಕ್ಕೆ ಲಭ್ಯವಾಗಿದ್ದು, ಮುಂಬರುವ ಲೋಕಸಭಾ ಚುನಾವಣೆ ಹಿನ್ನಲೆ ಅತಿ ಹೆಚ್ಚು ಸ್ಥಾನಗಳನ್ನ ಗೆಲ್ಲುವ ನಿಟ್ಟಿನಲ್ಲಿ ಪಣತೊಟ್ಟಿದ್ದು, ಹಲವು ಸಚಿವರು ತಮ್ಮ ತಮ್ಮ ಜಿಲ್ಲೆಯ ಮೇಲೆ ಕಣ್ಣೀಟ್ಟಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಲಾಬಿ ನಡೆಸಿದ್ದಾರೆ ಎನ್ನಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರ ಸಂಭಾವ್ಯ ಪಟ್ಟಿ ಇಲ್ಲಿದೆ !
ಬೆಂಗಳೂರು ನಗರ: ಕೆ.ಜೆ ಜಾರ್ಜ್
ಬೆಂಗಳೂರು ಗ್ರಾಮಾಂತರ: ರಾಮಲಿಂಗಾರೆಡ್ಡಿ
ಕೋಲಾರ: ಕೆ.ಹೆಚ್ ಮುನಿಯಪ್ಪ
ಚಿಕ್ಕಬಳ್ಳಾಪುರ: ಎಂ.ಸಿ ಸುಧಾಕರ್
ರಾಮನಗರ: ಡಿ.ಕೆ ಶಿವಕುಮಾರ್
ಮಂಡ್ಯ: ಎನ್.ಚಲುವರಾಯಸ್ವಾಮಿ
ಮೈಸೂರು: ಹೆಚ್.ಸಿ ಮಹದೇವಪ್ಪ
ಚಾಮರಾಜನಗರ: ದಿನೇಶ್ ಗುಂಡೂರಾವ್
ಕೊಡಗು: ಕೆ.ವೆಂಕಟೇಶ್

ದಕ್ಷಿಣ ಕನ್ನಡ: ಕೃಷ್ಣ ಬೈರೇಗೌಡ
ಉಡುಪಿ: ಡಾ.ಜಿ ಪರಮೇಶ್ವರ್
ಉತ್ತರ ಕನ್ನಡ: ಮಂಕಾಳ ವೈದ್ಯ
ತುಮಕೂರು: ಕೆ.ಎನ್ ರಾಜಣ್ಣ
ಚಿತ್ರದುರ್ಗ: ಡಿ.ಸುಧಾಕರ್
ಶಿವಮೊಗ್ಗ: ಮಧು ಬಂಗಾರಪ್ಪ
ಹಾಸನ: ಈಶ್ವರ್ ಖಂಡ್ರೆ
ಚಿಕ್ಕಮಗಳೂರು: ಪ್ರಿಯಾಂಕ್ ಖರ್ಗೆ
ದಾವಣಗೆರೆ: ಎಸ್.ಎಸ್ ಮಲ್ಲಿಕಾರ್ಜುನ
ಧಾರವಾಡ: ಸಂತೋಷ್ ಲಾಡ್
ಬೆಳಗಾವಿ: ಸತೀಶ್ ಜಾರಕಿಹೊಳಿ
ಬೀದರ್: ರಹೀಂ ಖಾನ್
ಕಲಬುರಗಿ: ಶರಣಪ್ರಕಾಶ್ ಪಾಟೀಲ್
ವಿಜಯಪುರ: ಎಂ.ಬಿ ಪಾಟೀಲ್
ಬಳ್ಳಾರಿ: ಬಿ.ನಾಗೇಂದ್ರ
ಗದಗ: ಹೆಚ್.ಕೆ ಪಾಟೀಲ್
ಹಾವೇರಿ: ಜಮೀರ್ ಅಹ್ಮದ್ ಖಾನ್
ಕೊಪ್ಪಳ: ಶಿವರಾಜ್ ತಂಗಡಗಿ
ಯಾದಗಿರಿ: ಶರಣಬಸಪ್ಪ ದರ್ಶನಾಪುರ
ಬಾಗಲಕೋಟೆ: ಶಿವಾನಂದ ಪಾಟೀಲ್
ವಿಜಯನಗರ: ಲಕ್ಷ್ಮಿ ಹೆಬ್ಬಾಳ್ಕರ್
ರಾಯಚೂರು: ಎನ್.ಎಸ್ ಬೋಸರಾಜು












Click it and Unblock the Notifications