Get Updates
Get notified of breaking news, exclusive insights, and must-see stories!

Good News: ಹಾಲು ಉತ್ಪಾದಕರ ಉತ್ತೇಜನಕ್ಕೆ 2 ಹಸು ಖರೀದಿಗೆ 2 ಲಕ್ಷ ವರೆಗೂ ಸಾಲ: ಸಂಪೂರ್ಣ ವಿವರ ತಿಳಿಯಿರಿ

ಬೆಂಗಳೂರು, ಜುಲೈ 14: ನಮ್ಮ ಒಕ್ಕೂಟದಲ್ಲಿ 1.28 ಲಕ್ಷ ರೈತರು ಹಾಲು ಉತ್ಪಾದನೆ ಮಾಡುತ್ತಿದ್ದಾರೆ. ಮಾಗಡಿಯಲ್ಲಿ 12 ಸಾವಿರ ರೈತರು ಹಾಲು ಉತ್ಪಾದನೆ ಮಾಡುತ್ತಿದ್ದು, ನೀವು ಹೆಚ್ಚು ಹಸುಗಳನ್ನು ಕಟ್ಟಿ ನಮಗೆ ಸಹಕಾರ ನೀಡಬೇಕು. ನಿಮಗೆ ಅಗತ್ಯವಿರುವ ಆರ್ಥಿಕ ನೆರವಿಗಾಗಿ 3% ಬಡ್ಡಿದರದಲ್ಲಿ 2 ಹಸು ಖರೀದಿ ಮಾಡಲು 2 ಲಕ್ಷವರೆಗೂ ಸಾಲ ನೀಡಲಿ ಜಿಲ್ಲಾ ಸಹಕಾರಿ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಬಮುಲ್ ಅಧ್ಯಕ್ಷರಾದ ಡಿ.ಕೆ. ಸುರೇಶ್ ತಿಳಿಸಿದರು.

ಹಾಲು ವಾಹನಗಳಿಗೆ ಜಿಪಿಎಸ್ ವ್ಯವಸ್ಥೆ, ರೈತರ ಹಾಲಿನ ಗುಣಮಟ್ಟ ಎಷ್ಟಿದೆ ಎಂದು ಸ್ಥಳದಲ್ಲೇ ತಿಳಿಸಲು ಅಗತ್ಯ ತಂತ್ರಜ್ಞಾನ ಅಳವಡಿಸಲಾಗುತ್ತದೆ. ಇದರ ಮಾಹಿತಿಯನ್ನು ಪ್ರತಿ ನಿತ್ಯ ನಿಮಗೆ ನೀಡಲಾಗುವುದು. ಹಾಲು ಮಾರುಕಟ್ಟೆ ಸರಿಪಡಿಸಲು ಚರ್ಚೆ ನಡೆಸಲಾಗುತ್ತಿದೆ. ರಾಜ್ಯದಲ್ಲಿ 2995 ಹಾಲು ಸಹಕಾರಿ ಸಂಘಗಳಿವೆ. ಈ ಸಂಘಗಳ ಕಾರ್ಯದರ್ಶಿಗಳು ತಮ್ಮ ಊರಿನಲ್ಲಿ ನಡೆಯುವ ಶುಭ ಸಮಾರಂಭಗಳಲ್ಲಿ ನಂದಿನಿ ಹಾಲು ಬಳಸುವ ಕಾರ್ಯಕ್ರಮ ರೂಪಿಸಿದರೆ. ನಾವು ನಮ್ಮ ಹಾಲನ್ನು ಹೊರ ರಾಜ್ಯದಲ್ಲಿ ಹಾಲನ್ನು ಮಾರುವ ಅಗತ್ಯವಿಲ್ಲ. ನಮ್ಮಲ್ಲೇ ಮಾರುಕಟ್ಟೆ ಕಂಡುಕೊಳ್ಳಬಹುದು ಎಂದರು.

Loan Facility Of Up To Rs 2 Lakh For Purchase Of 2 Cows To Boost Milk Production

ನಾವು ನಿಮ್ಮ ನಿರೀಕ್ಷೆಗೆ ತಕ್ಕಂತೆ ಉತ್ತಮ ಕೆಲಸ ಮಾಡಿದಾಗ ಮಾತ್ರ ಈ ಅಭಿನಂದನೆಗೆ ನಾವು ಅರ್ಹ ಎಂದು ಸಾಬೀತಾಗುತ್ತದೆ. ನನಗೆ ಹಾಲು ಸಹಕಾರ ಕ್ಷೇತ್ರದಲ್ಲಿ ಹೆಚ್ಚು ಅನುಭವವಿಲ್ಲ. ಈ ಕ್ಷೇತ್ರದ ಪ್ರಕ್ರಿಯೆ, ಅದರ ಆಡಳಿತ ಬಗ್ಗೆ ನಾನು ಈಗಷ್ಟೇ ಪ್ರಾಮಾಣಿಕವಾಗಿ ಕಲಿಯುತ್ತಿದ್ದೇನೆ. ನಾನು ಕೆಟ್ಟವನಾಗಬೇಕಾ, ಒಳ್ಳೆಯವನಾಗಬೇಕಾ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ. ಕೆಟ್ಟವನಾಗದೆ ನನಗೆ ಬೇರೆ ವಿಧಿ ಇಲ್ಲ ಎಂದರು.

ಅಧಿಕಾರಿಗಳು, ನಿರ್ದೇಶಕರ ಜೊತೆ ಪ್ರತ್ಯೇಕವಾಗಿ ಅನೇಕ ಸಭೆ ಮಾಡಿದ್ದೇನೆ. ರೈತರನ್ನು ಉದ್ಧಾರ ಮಾಡಿ, ಸಂಸ್ಥೆ ಉಳಿಸಲು ನೀವು ಏನೇ ನಿರ್ಧಾರ ಕೈಗೊಂಡರೂ ನಾವು ಬದ್ಧ ಎಂದು ಹೇಳಿದ್ದಾರೆ. ಇದು ನನ್ನ ಸಂಸ್ಥೆ, ನಿರ್ದೇಶಕರ ಸಂಸ್ಥೆ, ಸರ್ಕಾರಿ ಸಂಸ್ಥೆ ಅಲ್ಲ. ಇದು ರೈತರ ಬೆವರಿನಿಂದ ಕಟ್ಟಿರುವ ಸಂಸ್ಥೆ. ಹಾಲು ಸಂಗ್ರಹಿಸುವವರ ಸಂಸ್ಥೆ, ಹಾಲು ಮಾರುವವರ ಸಂಸ್ಥೆ. ಈ ಪ್ರತಿ ವಿಭಾಗದಲ್ಲೂ ಸಮಸ್ಯೆಗಳಿದ್ದು, ಎಲ್ಲವನ್ನು ಬಗೆಹರಿಸಬೇಕು. ರೈತರು, ಮಾರಾಟಗಾರರು, ಗ್ರಾಹಕರು ಎಲ್ಲರೂ ಚೆನ್ನಾಗಿರಬೇಕು ಎಂದು ಹೇಳಿದರು.

ಇಲ್ಲಿ ಕೆಲವರು ₹5 ಪ್ರೋತ್ಸಾಹ ಧನ ನೀಡಬೇಕು ಎಂದು ಹೇಳಿದರು, ಮೇವು ಪೂರೈಕೆದಾರರು ತಮ್ಮದೇ ಸಮಸ್ಯೆ ಹೇಳಿಕೊಂಡರು. ಇದನ್ನು ಖಾಸಗಿ ಅವರಿಗೆ ಕೊಟ್ಟಿರುವ ಕಾರಣ ಅವರು ಲಾಭ ನೋಡುತ್ತಿದ್ದಾರೆ. ನಾವು ಕನಕಪುರದಲ್ಲಿ ಸ್ಥಾಪಿಸಿರುವ ಹಾಲು ಕೇಂದ್ರ ಇಡೀ ಏಷ್ಯಾದಲ್ಲೇ ಅತ್ಯುತ್ತಮ ಘಟಕ. ನಾವು ಹೊಸ ಮಾರುಕಟ್ಟೆ ಹುಡುಕಬೇಕು. ಅದಕ್ಕೆ ಗುಣಮಟ್ಟದ ಅವಶ್ಯಕತೆ ಇದೆ. ಹಾಲು ಹಾಕುವವರಿಂದ ಕೊನೆಯದಾಗಿ ಮಾರುವವನವರೆಗೆ ಎಲ್ಲರೂ ಗುಣಮಟ್ಟ ನೋಡುತ್ತಾರೆ ಎಂದು ಹೇಳಿದರು.

ಖಾಸಗಿ ಹಾಲು ಸಂಸ್ಥೆಗಳು ರೈತರಿಂದ ಸಂಗ್ರಹಿಸುತ್ತಿರುವ ಹಾಲಿನಲ್ಲಿ ಕೊಬ್ಬಿನಾಂಶದ ಗುಣಮಟ್ಟ ಶೇ.4.5ರಷ್ಟಿದೆ. ನಾವು ಸಂಗ್ರಹಿಸುತ್ತಿರುವ ಹಾಲಿನ ಕೊಬ್ಬಿನಾಂಶದ ಗುಣಮಟ್ಟ ಶೇ.4.1ರಷ್ಟಿದೆ. ಇದನ್ನು ಸರಿಪಡಿಸಲು ನಾನು 1 ತಿಂಗಳು ಸಮಯಾವಕಾಶ ನೀಡಿದ್ದೇನೆ. ಇದಕ್ಕೆ ಸಹಕಾರ ನೀಡುವುದಾಗಿ ಎಲ್ಲರೂ ಹೇಳಿದ್ದಾರೆ. ವ್ಯವಸ್ಥೆಗೆ ತಕ್ಕ ಹಾಲಿನ ಉತ್ಪಾದನೆ ಇಲ್ಲ. ನಮ್ಮಲ್ಲಿ 25 ಲಕ್ಷ ಲೀಟರ್ ಹಾಲು ಪರಿಷ್ಕರಣೆ ಸಾಮರ್ಥ್ಯ ಹೊಂದಿದ್ದು, ನಾವು ಮಾಡುತ್ತಿರುವುದು ಸರಾಸರಿ 15 ಲಕ್ಷ ಲೀಟರ್ ಮಾತ್ರ. ಇನ್ನು 10 ಲಕ್ಷ ಲೀಟರ್ ಹಾಲು ಪರಿಷ್ಕರಿಸುವ ಸಾಮರ್ಥ್ಯ ನಮ್ಮಲ್ಲಿದೆ. ಮುಂದಿನ ಒಂದು ವರ್ಷದಲ್ಲಿ ಬಮೂಲ್ ಸಂಸ್ಥೆಯಲ್ಲಿ 25 ಲಕ್ಷ ಹಾಲು ಉತ್ಪಾದನೆ ಮಾಡಬೇಕು ಎಂದು ಅಧಿಕಾರಿಗಳಿಗೆ ಗುರಿ ನೀಡಿದ್ದೇನೆ ಎಂದು ತಿಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+