liquor Shops Shut: ಮದ್ಯ ಪ್ರಿಯರಿಗೆ ಬಿಗ್ ಶಾಕ್: ನಾಳೆ ಮದ್ಯ ಮಾರಾಟ ಸಂಪೂರ್ಣ ಬಂದ್!
liquor Shops Shut: ಮದ್ಯ ಪ್ರಿಯರಿಗೆ ಇಲ್ಲೊಂದು ಶಾಕಿಂಗ್ ನ್ಯೂಸ್ ಇದೆ. ಕಳೆದ ಎರಡು ವರ್ಷಗಳಿಂದ ಬಿಯರ್ ಹಾಗೂ ಮದ್ಯದ ಬೆಲೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರವು ನಿರಂತರವಾಗಿ ಏರಿಕೆ ಮಾಡುತ್ತಿದೆ. ಇದೀಗ ಬಾರ್, ರೆಸ್ಟೋರೆಂಟ್ ಹಾಗೂ ಕ್ಲಬ್‌ಗಳ ಲೈಸೆನ್ಸ್ ಶುಲ್ಕವನ್ನು ಸಹ ಹಲವು ಪಟ್ಟು ಹೆಚ್ಚಳ ಮಾಡಿದೆ. ಇದು ಮದ್ಯ ಮಾರಾಟ ಮಾಡುವ ಕಂಪನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಇದೀಗ ಮದ್ಯದ ಬೆಲೆ ಏರಿಕೆ ಹಾಗೂ ಲೆಸೈನ್ಸ್ ಶುಲ್ಕವನ್ನು ವಿರೋಧಿಸಿ ಮದ್ಯದ ಅಂಗಡಿಯನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು toi ವರದಿ ಮಾಡಿದೆ. ಹೌದು ಕಳೆದ ಎರಡು ವರ್ಷಗಳಿಂದಲೂ ಮದ್ಯದ ಮೇಲೆ ಶುಲ್ಕವನ್ನು ಹೆಚ್ಚಳ ಮಾಡಲಾಗುತ್ತಿದೆ. ಇದೀಗ ಲೈಸೆನ್ಸ್ ಟ್ಯಾಕ್ಸ್ ಸಹ ಜಾಸ್ತಿ ಮಾಡಲಾಗಿದ್ದು. ಹೋಟೆಲ್ ಹಾಗೂ ಉದ್ದಿಮೆಗಳಿಗೆ ಸಂಕಷ್ಟ ಎದುರಾಗಿದೆ.
ಕರ್ನಾಟಕ ಸರ್ಕಾರವು ಅಬಕಾರಿ ಶುಲ್ಕ ಹಾಗೂ ಪರವಾನಗಿ ಶುಲ್ಕವನ್ನು ಪದೇ ಪದೆ ಹೆಚ್ಚಳ ಮಾಡುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆ ಮಾಡುವುದಕ್ಕೆ ಮದ್ಯದ ಅಂಗಡಿ ಮಾಲೀಕರು ನಿರ್ಧರಿಸಿದ್ದಾರೆ. ಇದರ ಭಾಗವಾಗಿ ಮದ್ಯ ಮಾರಾಟ ಕಂಪನಿಗಳು, ಅಂಗಡಿಗಳು ಹಾಗೂ ತಯಾರಿಕ ಕಂಪನಿಗಳು ಬಂದ್‌ಗೆ ಕರೆ ನೀಡಿವೆ. ಹೀಗಾಗಿ, ಮದ್ಯ ಪ್ರಿಯರಿಗೆ ನಾಳೆ ಮದ್ಯ ಸಿಗುವುದು ಬಹುತೇಕ ಅನುಮಾನ. ಅಲ್ಲದೇ ಮದ್ಯದ ಅಂಗಡಿಗಳು ಸರ್ಕಾರಿ ಸಂಸ್ಥೆಗಳಿಂದ (ಡಿಪೋಗಳಿಂದ) ಸಂಕೇತಿಕವಾಗಿ ಮದ್ಯ ಖರೀದಿ ಮಾಡದೆ ಇರುವುದಕ್ಕೆ ನಿರ್ಧರಿಸಿವೆ. ಇದರಿಂದ ಮದ್ಯ ಮಾರಾಟದ ಮೇಲೆ ಪರಿಣಾಮ ಬೀರಲಿದ್ದು. ಮದ್ಯದ ಅಂಗಡಿಗಳು ಸಂಪೂರ್ಣ ಬಂದ್ ಆಗಲಿವೆ.

ರಾಜ್ಯ ಕಾಂಗ್ರೆಸ್ ಸರ್ಕಾರವು ಮೇ 15ರಂದು ಅಧಿಸೂಚನೆ ಹೊರಡಿಸಿದ್ದು. ಇದರ ಪ್ರಕಾರ ರಾಜ್ಯದಲ್ಲಿ ಮದ್ಯ ಮಾರಾಟದ ಪರವಾನಗಿ (ಲೈಸೆನ್ಸ್) ಹೆಚ್ಚಳ ಮಾಡಲಾಗಿದೆ. ಇದರಿಂದ ಬಾರ್ & ರೆಸ್ಟೋರೆಂಟ್ ಹಾಗೂ ಕ್ಲಬ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದುಪ್ಪಟ್ಟು ಲೈಸೆನ್ಸ್ ಶುಲ್ಕವನ್ನು ವಿರೋಧಿಸಿದ ಬಾರ್ ಬಂದ್‌ಗೆ ಕರೆ ನೀಡಲಾಗಿದೆ.
ಮೇ 21ಕ್ಕೆ ರಾಜ್ಯದಾದ್ಯಂತ ಬಾರ್ ಬಂದ್: ನಾಳೆ ಅಂದರೆ ಮೇ 21ರಂದು ರಾಜ್ಯದಾದ್ಯಂತ ಬಾರ್ ಬಂದ್ ಆಗಲಿವೆ ಎಂದು ಹೇಳಲಾಗಿದೆ. ನಿರಂತರ ಮದ್ಯ ಬೆಲೆ ಏರಿಕೆ ಹಾಗೂ ಲೈಸೆನ್ಸ್ ಶುಲ್ಕವನ್ನು ಹೆಚ್ಚಿಸಿರುವುದನ್ನು ವಿರೋಧಿಸಿ ಕರ್ನಾಟಕ ವೈನ್ ವ್ಯಾಪಾರಿಗಳ ಸಂಘ, ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್, ಕರ್ನಾಟಕ ಬ್ರೂವರಿ & ಡಿಸ್ಟಿಲರೀಸ್ ಸಂಘವು ಮದ್ಯ ಮಾರಾಟ ಬಂದ್‌ಗೆ ಮುಂದಾಗಿವೆ.

ಸರ್ಕಾರದ ಲೈಸೆನ್ಸ್ ನೀತಿ ಹಾಗೂ ಬೆಲೆ ಏರಿಕೆಯನ್ನು ವಿರೋಧಿಸಿ ರಾಜ್ಯದಲ್ಲಿ ಮದ್ಯ ಮಾರಟ ಬಂದ್ ಮಾಡುವುದಕ್ಕೆ ನಿರ್ಧರಿಸಲಾಗಿದೆ. ಕರ್ನಾಟಕದಲ್ಲಿ 12,000 ಸಾವಿರಕ್ಕೂ ಹೆಚ್ಚು ಮದ್ಯ ಮಾರಾಟ ಮಾಡುವ ಸರ್ಕಾರದಿಂದ ಮಾನ್ಯತೆ ಪಡೆದಿರುವ ಮದ್ಯದ ಶಾಪ್‌ಗಳು ಇವೆ. ಅದರಲ್ಲಿ 5,000 ಸಾವಿರಕ್ಕೂ ಹೆಚ್ಚು ಮದ್ಯದ ಶಾಪ್‌ಗಳ ಮಾಲೀಕರು ನಾಳೆ ಬಂದ್ (ಮೇ 21)ರಂದು ಬಂದ್‌ನಲ್ಲಿ ಭಾಗವಹಿಸಲಿದ್ದಾರೆ. ಹೀಗಾಗಿ, ರಾಜ್ಯದಾದ್ಯಂತ ಮದ್ಯ ಮಾರಾಟ ನಾಳೆ ಬಹುತೇಕ ಬಂದ್ ಇರಲಿದೆ ಎಂದು ಹೇಳಲಾಗಿದೆ.












Click it and Unblock the Notifications