ಮದ್ಯ ಮಾರಾಟ ಬಂದ್... ಆಗಸ್ಟ್ 31 ಭಾನುವಾರ ಎಣ್ಣೆ ಮಾರಾಟ ನಿಷೇಧ... Liquor Price
ಕನ್ನಡ ನಾಡಲ್ಲಿ ಎಣ್ಣೆ ಕುಡಿಯುವವರ ಸಂಖ್ಯೆ ಜಾಸ್ತಿ ಆಗಿದೆ ಅಂತಾ ಕೆಲವರು ಆರೋಪ ಮಾಡ್ತಾ ಇದ್ದರೆ, ಇನ್ನೂ ಕೆಲವರು ಎಣ್ಣೆ ಕುಡಿಯೋದು ತಪ್ಪಲ್ಲ ಅಂತಾ ವಾದ ಮಾಡುತ್ತಿದ್ದಾರೆ. ಅದರಲ್ಲೂ ಹೆಣ್ಣು ಮಕ್ಕಳು ಕೂಡ ಭಾರಿ ಪ್ರಮಾಣದಲ್ಲಿ ಮದ್ಯ ಸೇವನೆ ಮಾಡುತ್ತಿರುವ ವಿಚಾರ ಕೂಡ ಆಗಾಗ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಬರುತ್ತಾ ಇರುತ್ತದೆ. ಇನ್ನು ಶನಿವಾರ & ಭಾನುವಾರ ಬಂತು ಅಂದರೆ ಎಣ್ಣೆ ಬೇಕೆ ಬೇಕು ಅಂತಾ ಕೂರುತ್ತಾರೆ ಹುಡುಗ & ಹುಡುಗಿಯರು. ಆದರೆ ಇದೀಗ ಎಣ್ಣೆ ಕುಡಿಯುವ ಮದ್ಯಪ್ರಿಯ ಹುಡುಗ & ಹುಡುಗಿಯರಿಗೆ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ!
ಹೌದು, ಕರ್ನಾಟಕದಲ್ಲಿ ಎಣ್ಣೆ ರೇಟ್ ಜಾಸ್ತಿ ಅಂತ ಕೊರಗುತ್ತಿದ್ದ ಮದ್ಯ ಪ್ರಿಯರಿಗೆ ಶಾಕ್ ಸಿಕ್ಕಿದ್ದು ಮತ್ತೆ ಮತ್ತೆ ಬಜೆಟ್‌ನಲ್ಲಿ ಎಣ್ಣೆ ರೇಟ್ ರೈಸ್ ಮಾಡ್ತಾ ಇರೋದು ಬೇಸರ ತರಿಸಿದೆ. 'ಮದ್ಯ' ಪ್ರಿಯರಿಗೆ ಹೀಗೆ ಎಣ್ಣೆ ಬೆಲೆ ಜಾಸ್ತಿ ಆಗುತ್ತಿರುವ ಕಾರಣ ಪ್ರತಿ ತಿಂಗಳೂ 10,000 ರೂಪಾಯಿ ಅಥವಾ 20,000 ರೂಪಾಯಿ ಬರೀ ಎಣ್ಣೆ ಕುಡಿಯೋದಕ್ಕೆ ಅಂತಾನೇ ಎತ್ತಿ ಇಡಬೇಕು ಅನ್ನೋ ಪರಿಸ್ಥಿತಿ ಕೂಡ ಇದೆ. ಇಷ್ಟಾದರೂ ಎಣ್ಣೆ ರೇಟ್ ಎಷ್ಟು ಬೇಕಾದರೂ ಇರಲಿ, ನಾವು ಮಾತ್ರ ಕುಡಿಯೋದು ಗ್ಯಾರಂಟಿ ಅಂತಾರೆ ಕೋಟಿ ಕೋಟ್ಯಂತರ ಮದ್ಯ ಪ್ರಿಯರು. ಹೀಗಿದ್ದಾಗಲೇ, ಮದ್ಯ ಮಾರಾಟ ಬಂದ್... ಆಗಸ್ಟ್ 31 ಭಾನುವಾರ ಎಣ್ಣೆ ಮಾರಾಟ ನಿಷೇಧ...

ಆಗಸ್ಟ್ 31 ಭಾನುವಾರ ಎಣ್ಣೆ ನಿಷೇಧ...
ಎಣ್ಣೆ.. ಎಣ್ಣೆ.. ಎಣ್ಣೆ... ಹೀಗೆ ಶನಿವಾರ & ಭಾನುವಾರ ಬಂತು ಅಂದ್ರೆ ಸಾಕು ಒಬ್ಬೊಬ್ಬರಿಗೆ ಒಂದು ಕ್ವಾಟರ್, ಇನ್ನೂ ಕೆಲವರಿಗೆ 2 ಕ್ವಾಟರ್ ಕೊಟ್ಟರೂ ಸಾಲಲ್ಲ. ಈ ನಡುವೆ 90 ಹೊಡೆದು ಫುಲ್ ಟೈಟ್ ಆಗಿ ಬೀಳುವವರು ಕೂಡ ಇದ್ದಾರೆ. ಎಲ್ಲಾ ಅವರ ಕೆಪಾಸಿಟಿ ಮೇಲೆ ಡಿಪೆಂಡ್ ಅಂತಾನೇ ಹೇಳಬಹುದು. ಹೋಗಲಿ ಬಿಡಿ, ನಮಗ್ಯಾಕೆ ಬೇರೆಯವರ ವಿಚಾರ... ಹೀಗೆ ವೀಕೆಂಡ್ ಬಂತು ಫುಲ್ ಪಾರ್ಟಿ ಮಾಡಿ ಎಂಜಾಯ್ ಮಾಡಿ ಮತ್ತೆ ಸೋಮವಾರದಿಂದ ಆಫಿಸ್ ಕಡೆ ಹೋಗೋಣ ಅಂತಾ ಕಾಯುತ್ತಿದ್ದವರಿಗೆ ಇದೀಗ ದಿಢೀರ್ ದೊಡ್ಡ ಆಘಾತವೇ ಎದುರಾಗಿಬಿಟ್ಟಿದೆ. ಹೀಗಿದ್ದಾಗಲೇ, ಮದ್ಯ ಮಾರಾಟ ಬಂದ್... ಆಗಸ್ಟ್ 31 ಭಾನುವಾರ ಎಣ್ಣೆ ಮಾರಾಟ ನಿಷೇಧ...
ರಮ್, ಬ್ರಾಂದಿ & ವಿಸ್ಕಿ, ಬಿಯರ್ ನಿಷೇಧ!
ಹೌದು, ಕನ್ನಡಿಗರ ರಾಜಧಾನಿ ಬೆಂಗಳೂರಲ್ಲಿ ಸಾಮೂಹಿಕ ಗಣೇಶ ವಿಸರ್ಜನೆ ಹಿನ್ನೆಲೆ ಮುಂಜಾಗ್ರತೆಯ ಕ್ರಮ ಕೈಗೊಳ್ಳಲಾಗಿದೆ. ಇದೇ ಕಾರಣಕ್ಕೆ ಇದೀಗ ಆಗಸ್ಟ್ 31 ಭಾನುವಾರ ಬೆಂಗಳೂರು ನಗರದ ಹಲವು ಪ್ರದೇಶಗಳಲ್ಲಿ ಮದ್ಯ ಅಂದ್ರೆ ಲಿಕ್ಕರ್ ಅರ್ಥಾತ್ ಎಣ್ಣೆ ಮಾರಾಟಕ್ಕೆ ಬ್ರೇಕ್ ಹಾಕಲಾಗಿದೆ. ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ, ಹಲವು ಭಾಗಗಳಲ್ಲಿ ಸಾಮೂಹಿಕ ಗಣೇಶ ಮೂರ್ತಿಗಳ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ. ಇದೇ ಕಾರಣಕ್ಕೆ ಇದೀಗ ಬೆಂಗಳೂರಿನ ಹಲವು ಪೊಲೀಸ್ ಠಾಣೆ ವ್ಯಾಪ್ತಿಯ CL-4 & CL-6 ಹೊರತುಪಡಿಸಿ ಉಳಿದ ಎಣ್ಣೆ ಅಂಗಡಿಗಳಲ್ಲಿ ಮದ್ಯ ಮಾರಾಟಕ್ಕೆ ಬ್ರೇಕ್‌ನ ಹಾಕಿ ಬಂದ್ ಮಾಡಲು ಆದೇಶ ಹೊರಡಿಸಲಾಗಿದೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಪ್ರಕಟಣೆಯ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ. ಹಾಗಾದ್ರೆ ಯಾವೆಲ್ಲಾ ಏರಿಯಾದಲ್ಲಿ ಮದ್ಯ ಮಾರಾಟ ಬಂದ್ ಆಗಿ ನಿಷೇಧ ಹೇರಲಾಗಿದೆ? ಮುಂದೆ ಓದಿ.
ಭಾನುವಾರ & ಶನಿವಾರ ಬಂತು ಅಂದ್ರೆ ಸಾಕು ಬಹುತೇಕರಿಗೆ ಎಣ್ಣೆ ಹೊಡೆದು ಚನ್ನಾಗಿ ಕುಡಿಯದೇ ಇದ್ದರೆ ನಿದ್ದೆ ಬರೋದೆ ಇಲ್ಲ. ಆದರೆ ಇದೀಗ ಭಾನುವಾರದ ದಿನವೇ ಬೆಂಗಳೂರು ನಗರದಲ್ಲಿ ಎಣ್ಣೆ ಅಂದ್ರೆ ಲಿಕ್ಕರ್ ಮಾರಾಟ ಬಂದ್ ಮಾಡಿ ನಿಷೇಧ ಹೇರಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದ್ದು, ಕೆಜಿ ಹಳ್ಳಿ, ಡಿಜೆ ಹಳ್ಳಿ & ಗೋವಿಂದಪುರ, ಬಾಣಸವಾಡಿ, ರಾಮಮೂರ್ತಿ ನಗರ, ಹೆಣ್ಣೂರು, ಕಮರ್ಷಿಯಲ್ ಸ್ಟ್ರೀಟ್, ಶಿವಾಜಿ ನಗರ, ಭಾರತಿ ನಗರ, ಪುಲಿಕೇಶಿ ನಗರ ಭಾಗದಲ್ಲಿ ಎಣ್ಣೆ ಮಾರಾಟ ಬಂದ್ ಆಗಲಿದೆ. ಹಾಗೇ ಹಲಸೂರು, ಯಶವಂತಪುರ, ಸಂಜಯ ನಗರ, ಜಾಲಹಳ್ಳಿ & ಆರ್‌ಎಂಸಿ ಯಾರ್ಡ್ ಭಾಗದಲ್ಲೂ ಎಣ್ಣೆ ಸಿಗಲ್ಲ. ಇನ್ನು ಜೆಸಿ ನಗರ, ಆರ್‌ಟಿ ನಗರ ಮತ್ತು ಹೆಬ್ಬಾಳ ಹಾಗೂ ಸದಾಶಿವನಗರ, ತಲಘಟ್ಟಪುರ, ಸುಬ್ರಹ್ಮಣ್ಯಪುರ, ಕೆಂಗೇರಿ, ಜ್ಞಾನಭಾರತಿ, ಕುಂಬಳಗೋಡು ಸೇರಿದಂತೆ ಹಲವು ಸೂಕ್ಷ್ಮ ಪ್ರದೇಶದಲ್ಲಿ ಎಣ್ಣೆ ಮಾರಾಟ ಬಂದ್ ಆಗಲಿದೆ..












Click it and Unblock the Notifications