liquor lovers: ಮದ್ಯ ಪ್ರಿಯರ ಸಮಸ್ಯೆಯ ಬಗ್ಗೆ ಸದನದಲ್ಲಿ ಗಂಭೀರ ಚರ್ಚೆ, ಏನಿದು ಹೊಸ ಆರೋಗ್ಯ ಸಮಸ್ಯೆ!
liquor lovers: ಕರ್ನಾಟಕದಲ್ಲಿ ಕಳೆದ ಎರಡೂವರೆ ವರ್ಷದ ಅವಧಿಯಲ್ಲಿ ಹಲವು ಬಾರಿ ಬಿಯರ್ ಸೇರಿದಂತೆ ವಿವಿಧ ಮದ್ಯಗಳ ಬೆಲೆ ಹೆಚ್ಚಳವಾಗಿದೆ. ಇದರಿಂದ ಮದ್ಯ ಮಾರಾಟದಲ್ಲಿ ಭಾರೀ ಕುಸಿತ ಕಂಡಿದೆ. ಆದರೆ, ಮದ್ಯ ಮಾರಾಟ ಇಳಿಕೆ ಹಾಗೂ ಮದ್ಯ ಬೆಲೆ ಏರಿಕೆಯ ನಡುವೆ ಇದೀಗ ಮದ್ಯ ಪ್ರಿಯರು ಗಂಭೀರವಾದ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುವ ಬಗ್ಗೆ ವಿಧಾನ ಮಂಡಲ ಅಧಿವೇಶನದಲ್ಲಿ ಗಂಭೀರವಾದ ಚರ್ಚೆಗಳು ನಡೆದಿವೆ.
ರಾಜ್ಯದಲ್ಲಿ ಮದ್ಯ ಪ್ರಿಯರು ಲಿವರ್ ಸಿರೋಸಿಸ್ ಎನ್ನುವ ಗಂಭೀರವಾದ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದು ತೀರ ಹೆಚ್ಚಾಗುತ್ತಿದ್ದು, ರಾಜ್ಯ ಸರ್ಕಾರವು ಮದ್ಯ ಪ್ರಿಯರ ಆರೋಗ್ಯದ ದೃಷ್ಟಿಯಿಂದ ಕೆಲವೊಂದು ತುರ್ತು ಹಾಗೂ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸದನದಲ್ಲಿ ವಿಷಯ ಪ್ರಸ್ತಾಪಿಸಲಾಗಿದೆ. ಕರ್ನಾಟಕದ ಮದ್ಯ ಪ್ರಿಯರು ಈ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ತುರ್ತು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಲಾಗಿದೆ.

ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಮದ್ಯ ಸೇವಿಸುವವರಲ್ಲಿ ಲಿವರ್ ಸಿರೋಸಿಸ್ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದ್ದು, ರಾಜ್ಯ ಸರ್ಕಾರವು ಅವರ ಚಿಕಿತ್ಸೆಗೆ ಅಬಕಾರಿ ತೆರಿಗೆಯ ಆದಾಯದಲ್ಲಿ ಶೇ 20ರಷ್ಟು ತೆರಿಗೆಯನ್ನು ತೆಗೆದಿರಿಸಬೇಕು. ಮದ್ಯ ಪ್ರಿಯರ ಆರೋಗ್ಯವನ್ನು ರಕ್ಷಿಸಬೇಕು ಎಂದು ವಿಧಾನ ಪರಿಷತ್‌ನಲ್ಲಿ ವಿರೋಧ ಪಕ್ಷದ ಸಚೇತಕ ಎನ್. ರವಿಕುಮಾರ್ ಅವರು ಒತ್ತಾಯಿಸಿದ್ದಾರೆ.
ಈ ವಿಷಯ ಗಂಭೀರ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಉತ್ತರಿಸಿರುವ ಸಭಾನಾಯಕ ಎನ್. ಎಸ್. ಬೋಸರಾಜು, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ, ಪ್ರತ್ಯೇಕ ನಿಧಿ ತೆಗೆದಿರಸಲು ಆಗುವುದಿಲ್ಲ ಎಂದಿದ್ದಾರೆ. ಅಲ್ಲದೇ ಮುಂದುವರಿದು ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರವೇ ಈ ಮಾದರಿಯ ನಿಧಿಯೊಂದನ್ನು ಸ್ಥಾಪಿಸಲಿ ಎಂದು ಹೇಳಿದ್ದಾರೆ.
ರಮೇಶ್ ಬಾಬು ಅವರು, ಕೇಂದ್ರ ಸರ್ಕಾರವೇ ನಮ್ಮಿಂದ ಸಂಗ್ರಹಿಸುವ ತೆರಿಗೆಯಲ್ಲಿ ಶೇ 25ರಷ್ಟುನ್ನು ವಾಪಸ್ ಕೊಡಲಿ. ಆಗ ಎಲ್ಲಾ ನಿಧಿಗಳನ್ನೂ ನಾವು ಸ್ಥಾಪಿಸಬಹುದು ಎಂದು ಕಿಚಾಯಿಸಿದ್ದಾರೆ.












Click it and Unblock the Notifications