ವಿಧಾನಪರಿಷತ್ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಗಳು ಪ್ರಕಟ
ಬೆಂಗಳೂರು, ಮೇ 30 : ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಜೂನ್ 11ರಂದು ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಯಲಿದೆ.
ಕಾಂಗ್ರೆಸ್ ಬುಧವಾರ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಜೂನ್ 17ರಂದು 11 ಸದಸ್ಯರು ನಿವೃತ್ತರಾಗಲಿದ್ದು, ಅವರ ಸ್ಥಾನವನ್ನು ಭರ್ತಿ ಮಾಡಲು ಜೂನ್ 11ರಂದು ಚುನಾವಣೆ ನಡೆಯಲಿದೆ.
ಕಾಂಗ್ರೆಸ್ ಅಭ್ಯರ್ಥಿಗಳು
* ಕೆ.ಗೋವಿಂದರಾಜು
* ಕೆ.ಹರೀಶ್ ಕುಮಾರ್
* ಅರವಿಂದ ಕುಮಾರ್ ಎಸ್.ಅರಳಿ

ನಿವೃತ್ತಿಯಾಗುವ ಸದಸ್ಯರು : ಜೂನ್ 17ರಂದು ಬಿಜೆಪಿಯ ಬಿ.ಜೆ.ಪುಟ್ಟಸ್ವಾಮಿ, ಡಿ.ಎಸ್.ವೀರಯ್ಯ, ಸೋಮಣ್ಣ ಬೇವಿನಮದರ್, ರಘುನಾಥ ರಾವ್ ಮಲ್ಕಾಪುರೆ, ಭಾನುಪ್ರಕಾಶ್ ನಿವೃತ್ತರಾಗಲಿದ್ದಾರೆ. ಆದರೆ, ಬಿಜೆಪಿ ಇನ್ನು ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ.
ಕಾಂಗ್ರೆಸ್‌ನ ಸಿ.ಎಂ.ಇಬ್ರಾಹಿಂ, ಎಂ.ಆರ್.ಸೀತಾರಾಂ, ಮೋಟಮ್ಮ, ಕೆ.ಗೋವಿಂದರಾಜು, ಭೈರತಿ ಸುರೇಶ್ ಅವರು ನಿವೃತ್ತರಾಗಲಿದ್ದಾರೆ. ಇಂದು ಕಾಂಗ್ರೆಸ್ 4 ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಸಿ.ಎಂ.ಇಬ್ರಾಹಿಂ ಮತ್ತು ಕೆ.ಗೋವಿಂದರಾಜು ಅವರಿಗೆ ಪುನಃ ಅವಕಾಶ ನೀಡಿದೆ.
INC COMMUNIQUE
— INC Sandesh (@INCSandesh) May 30, 2018
Announcement of the candidates for the biennial elections to the Legislative Council of Karnataka. pic.twitter.com/1jZugePetG
ಜೆಡಿಎಸ್‌ನಿಂದ ಸೈಯದ್ ಮುದೀರ್ ಆಗಾ ಅವರು ನಿವೃತ್ತಿಯಾಗಲಿದ್ದಾರೆ. ವಿಧಾನಸಭೆಯಲ್ಲಿ ಕಾಂಗ್ರೆಸ್ 78, ಬಿಜೆಪಿ 104, ಜೆಡಿಎಸ್ 37 ಸದಸ್ಯ ಬಲವನ್ನು ಹೊಂದಿದೆ.












Click it and Unblock the Notifications