Get Updates
Get notified of breaking news, exclusive insights, and must-see stories!

ಕೋಟ್ಯಂತರ ರೂ. ಮೌಲ್ಯದ ಒಡೆಯ JDS 'ಸಾಮಾನ್ಯ ಕಾರ್ಯಕರ್ತ' ಅಭ್ಯರ್ಥಿ

ಬೆಂಗಳೂರು, ಜೂ. 19: ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ಪ್ರಭಾವಿಗಳ ಬದಲಿಗೆ ಸಾಮಾನ್ಯ ಕಾರ್ಯಕರ್ತನಿಗೆ ವಿಧಾನ ಪರಿಷತ್ ಚುನಾವಣೆ ಟಿಕೆಟ್ ಕೊಟ್ಟಿದ್ದೇವೆಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿಕೆ ಕೊಟ್ಟಿದ್ದರು. ಕೋಲಾರ ಭಾಗದಲ್ಲಿ ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ಖಡಕ್ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜೆಡಿಎಸ್ ಕಾರ್ಯಕರ್ತರು ಕೂಡ ಬೀಗಿದ್ದರು. ಆದರೆ ಜೆಡಿಎಸ್ ಸಾಮಾನ್ಯ ಕಾರ್ಯಕರ್ತ, ವಿಧಾನ ಪರಿಷತ್ ಅಭ್ಯರ್ಥಿ ಇಂಚರ ಗೋವಿಂದರಾಜು ಅವರು ಘೋಷಣೆ ಮಾಡಿಕೊಂಡಿರುವ ಆಸ್ತಿ ವಿವರ ನೋಡಿ ಜೆಡಿಎಸ್ ಕಾರ್ಯಕರ್ತರೇ ಹುಬ್ಬೇರಿಸುವಂತಾಗಿದೆ.

ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಜೆಡಿಎಸ್ ಅಭ್ಯರ್ಥಿ ಇಂಚರ ಗೋವಿಂದರಾಜು ಅವರು ಆಸ್ತಿ ವಿವರ ಘೋಷಣೆ ಮಾಡಿಕೊಂಡಿದ್ದಾರೆ. ಜೆಡಿಎಸ್ ಸಾಮಾನ್ಯ ಕಾರ್ಯಕರ್ತ ಗೋವಿಂದರಾಜು ಹಾಗೂ ಅವರ ಅವಿಭಕ್ತ ಕುಟುಂಬದ ಒಟ್ಟು ಆಸ್ತಿ 80 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಣೆ ಮಾಡಿಕೊಂಡಿದ್ದಾರೆ. ಗೋವಿಂದರಾಜು ಅವರ ಆಸ್ತಿಯ ಸಂಪೂರ್ಣ ವಿವರ ಮುಂದಿದೆ.

ಗೋವಿಂದರಾಜು ಅವರು 41 ಲಕ್ಷ ರು. ನಗದು, ಬ್ಯಾಂಕಿನಲ್ಲಿ 5.78 ಲಕ್ಷ ರು. ಠೇವಣಿ, 11.32 ಕೋಟಿ ರು. ಸಾಲ ನೀಡಿದ್ದಾರೆ. 46.23 ಲಕ್ಷ ರು. ಮೌಲ್ಯದ ಚಿನ್ನಾಭರಣ ಸೇರಿ ಒಟ್ಟು 11.89 ಕೋಟಿ ರು. ಮೌಲ್ಯದ ಚರಾಸ್ತಿ ಹೊಂದಿರುವುದಾಗಿ ಮಾಹಿತಿ ಕೊಟ್ಟಿದ್ದಾರೆ.

Legislative Council Election: JDS Candidate Inchara Govidnaraju Declares Assets

ಪತ್ನಿಯ ಬಳಿ 1.46 ಲಕ್ಷ ರು. ನಗದು, 54 ಸಾವಿರ ರು. ಠೇವಣಿ, 1.94 ಕೋಟಿ ರು. ಸಾಲ ನೀಡಿಕೆ, 31.84 ಲಕ್ಷ ರು. ಮೌಲ್ಯದ ಒಡವೆ ಸೇರಿ ಒಟ್ಟು 2.28 ಕೋಟಿ ರು. ಮೌಲ್ಯದ ಚರಾಸ್ತಿ, ಹಿಂದು ಅವಿಭಕ್ತ ಕುಟುಂಬದ ಹೆಸರಿನಲ್ಲಿ 5.27 ನಗದು, 92 ಸಾವಿರ ರು. ಠೇವಣಿ, 10.67 ಕೋಟಿ ರು. ಸಾಲ, 2.13 ಕೋಟಿ ರು. ಮೌಲ್ಯದ ವಾಹನ, 47 ಲಕ್ಷ ರು ಮೌಲ್ಯದ ಒಡವೆ ಸೇರಿ ಒಟ್ಟು 13.34 ಕೋಟಿ ರು. ಚರಾಸ್ತಿ ಹೊಂದಿರುವುದಾಗಿ ಹೇಳಿದ್ದಾರೆ.

ಜೊತೆಗೆ ತಮ್ಮ ಹೆಸರಿನಲ್ಲಿಲ್ಲಿ 2.86 ಕೋಟಿ ರು. ಮೌಲ್ಯದ 34.24 ಎಕರೆ ಕೃಷಿ ಜಮೀನು, 6 ಕೋಟಿ ರು. ಮೌಲ್ಯದ ಕೃಷಿಯೇತರ ಜಮೀನು, 6.61 ಕೋಟಿ ರು. ಮೌಲ್ಯದ ವಾಣಿಜ್ಯ ಕಟ್ಟಡ, 15 ಲಕ್ಷ ರು. ಮೌಲ್ಯದ ವಾಸದ ಮನೆಯಿದೆ.

Legislative Council Election: JDS Candidate Inchara Govidnaraju Declares Assets

ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಅವರು ತಮ್ಮ ಮತ್ತು ತಮ್ಮ ಪತ್ನಿ ಹೆಸರಲ್ಲಿ 14.17 ಕೋಟಿ ರು. ಮೌಲ್ಯದ ಚರಾಸ್ತಿ, 29 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಹಾಗೂ ಅವಿಭಕ್ತ ಕುಟುಂಬದ ಹೆಸರಲ್ಲಿ 13.34 ಕೋಟಿ ರು. ಚರಾಸ್ತಿ ಮತ್ತು 23.11 ಕೋಟಿ ರು.ಮೌಲ್ಯದ ಸ್ಥಿರಾಸ್ತಿ ಹೊಂದಿರುವುದಾಗಿ ಘೋಷಣೆ ಮಾಡಿಕೊಂಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+