ಪರಿಷತ್ ಚುನಾವಣೆ : ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಬೆಂಗಳೂರು, ನವೆಂಬರ್ 30 : ಕರ್ನಾಟಕ ಬಿಜೆಪಿ ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 25 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ 16 ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ.

ಕರ್ನಾಟಕ ಬಿಜೆಪಿ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಿದ್ದ ಪಟ್ಟಿಗೆ ಭಾನುವಾರ ಒಪ್ಪಿಗೆ ಸಿಕ್ಕಿದೆ. 12 ಸ್ಥಳೀಯ ಸಂಸ್ಥೆಗಳು ಮತ್ತು 4 ಶಿಕ್ಷಕರ, ಪದವೀಧರರ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದ್ದು, ಪಟ್ಟಿಯನ್ನು ಪಕ್ಷ ಬಿಡುಗಡೆ ಮಾಡಿದೆ. [ಪರಿಷತ್ ಚುನಾವಣೆ ವೇಳಾಪಟ್ಟಿ]

bjp

ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್ ಅವರಿಗೆ ಧಾರವಾಡ ಸ್ಥಳೀಯ ಸಂಸ್ಥೆ ಕ್ಷೇತ್ರದಲ್ಲಿ ಮತ್ತು ಮಾಜಿ ಸಚಿವ ಮುರುಗೇಶ ನಿರಾಣಿ ಸಹೋದರ ಹನುಮಂತ ನಿರಾಣಿ ಅವರಿಗೆ ವಾಯುವ್ಯ ಪದವೀಧರ ಕ್ಷೇತ್ರದಲ್ಲಿ ಟಿಕೆಟ್ ನೀಡಲಾಗಿದೆ.

ಶಿಕ್ಷಕರ, ಪದವೀಧರರ ಕ್ಷೇತ್ರಗಳು ಹಾಗೂ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ಸದಸ್ಯರ ಆಯ್ಕೆಗೆ ಡಿಸೆಂಬರ್ 27ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 30ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ಅಭ್ಯರ್ಥಿಗಳ ಪಟ್ಟಿ

* ವಾಯುವ್ಯ ಶಿಕ್ಷಕರ ಕ್ಷೇತ್ರ - ಅರುಣ್ ಶಹಾಪುರ
* ಪಶ್ಚಿಮ ಶಿಕ್ಷಕರ ಕ್ಷೇತ್ರ - ಪ್ರೊ.ಎಂ.ನಾಗರಾಜ
* ದಕ್ಷಿಣ ಪದವೀಧರ ಕ್ಷೇತ್ರ - ಮೈ.ವಿ.ರವಿಶಂಕರ
* ವಾಯುವ್ಯ ಪದವೀಧರ ಕ್ಷೇತ್ರ - ಹನುಮಂತ ನಿರಾಣಿ

ಸ್ಥಳೀಯ ಸಂಸ್ಥೆಗಳು
* ಮೈಸೂರು - ಎಸ್. ರಘು
* ಕೊಡಗು - ಎಂ.ಪಿ.ಕುಶಾಲಪ್ಪ
* ದಕ್ಷಿಣ ಕನ್ನಡ - ಕೋಟಾ ಶ್ರೀನಿವಾಸ ಪೂಜಾರಿ
* ಚಿಕ್ಕಮಗಳೂರು - ಎಂ.ಕೆ.ಪ್ರಾಣೇಶ್
* ಶಿವಮೊಗ್ಗ - ಆರ್‌.ಕೆ.ಸಿದ್ಧರಾಮಣ್ಣ
* ಉತ್ತರ ಕನ್ನಡ - ಗಣಪತಿ ಡಿ.ಉಳ್ವೇಕರ್
* ಧಾರವಾಡ - ಪ್ರದೀಪ್ ಶೆಟ್ಟರ್
* ಬೆಳಗಾವಿ - ಮಹಾಂತೇಶ ಕವಟಗಿಮಠ
* ವಿಜಯಪುರ - ಜಿ.ಎಸ್.ನ್ಯಾಮಗೌಡ
* ಕಲಬುರಗಿ - ಬಿ.ಜಿ.ಪಾಟೀಲ್
* ರಾಯಚೂರು - ಸಿ.ವಿ.ಚಂದ್ರಶೇಖರ
* ಚಿತ್ರದುರ್ಗ - ಕೆ.ಎಸ್.ನವೀನ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+