ಪ್ರತ್ಯೇಕ ರಾಜ್ಯ ಬೇಕೆಂಬ ಕತ್ತಿ ವಿರುದ್ಧ ನಾಯಕರು ಗರಂ
ಬೆಂಗಳೂರು, ಸೆ. 15 : ಮಾಜಿ ಸಚಿವ ಮತ್ತು ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಮತ್ತೊಮ್ಮೆ ಕರ್ನಾಟಕವನ್ನು ಒಡೆಯುವ ಮಾತನಾಡಿದ್ದಾರೆ. ಉತ್ತರ ಕರ್ನಾಟಕದ ಅಭಿವೃದ್ಧಿಯನ್ನು ಸರ್ಕಾರ ನಿರ್ಲಕ್ಷಿಸಿದೆ. ಆದ್ದರಿಂದ ಬೆಳಗಾವಿಯನ್ನು ರಾಜ್ಯದ ಎರಡನೇ ರಾಜಧಾನಿಯನ್ನಾಗಿ ಮಾಡಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕತ್ತಿ ಹೇಳಿಕೆಯನ್ನು ಹಲವಾರು ನಾಯಕರು ಖಂಡಿಸಿದ್ದಾರೆ.
ಸೋಮವಾರ ಬೆಳಗಾವಿಯಲ್ಲಿ ಮಾತನಾಡಿದ ಹುಕ್ಕೇರಿ ಶಾಸಕ ಉಮೇಶ್ ಕತ್ತಿ, ಉತ್ತರ ಕರ್ನಾಟಕದಲ್ಲಿ ಅತಿವೃಷ್ಠಿಯಿಂದ ಜನರು ಸಂಕಷ್ಟಕ್ಕೆ ಸಲುಕಿದ್ದರು, ಸರ್ಕಾರ ಸರಿಯಾದ ಪರಿಹಾರ ಕಾರ್ಯಗಳನ್ನು ಕೈಗೊಂಡಿಲ್ಲ. ಈ ಭಾಗದ ಅಭಿವೃದ್ಧಿಯ ದೃಷ್ಟಿಯಿಂದ ಪ್ರತ್ಯೇಕ ರಾಜ್ಯ ಮಾಡಬೇಕು ಎಂದು ಶನಿವಾರ ನೀಡಿದ ಹೇಳಿಕೆಯನ್ನು ಸಮರ್ಥಿಸಿಕೊಂಡರು. [ಮತ್ತೆ ಕರ್ನಾಟಕ ಒಡೆಯುವ ಮಾತನಾಡಿದ ಕತ್ತಿ]
ಕೇಂದ್ರ ಸಚಿವ ಅನಂತಕುಮಾರ್, ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ನಟ ಜಗ್ಗೇಶ್, ಕನ್ನಟ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಮುಂತಾದವರು ಉಮೇಶ್ ಕತ್ತಿ ಹೇಳಿಕೆಯನ್ನು ಖಂಡಿಸಿದ್ದಾರೆ. ಯಾವ ನಾಯಕರು ಏನು ಹೇಳಿದರು ನೋಡೋಣ ಬನ್ನಿ

ಇಂತಹ ಹೇಳಿಕೆಯನ್ನು ಮೂಲೆಗೆ ಹಾಕಿ
ಉಮೇಶ್ ಕತ್ತಿ ಅವರ ಹೇಳಿಕೆಗೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಇಂತಹ ಹೇಳಿಕೆಯನ್ನು ಮೂಲೆಗೆ ಹಾಕಿ ಎಂದು ಹೇಳಿದ್ದಾರೆ. ಅಖಿಲ ಕರ್ನಾಟಕವನ್ನು ಪ್ರತ್ಯೇಕಿಸುವುದು ಸರಿಯಲ್ಲ ಎಂದಿರುವ ಅವರು, ಇಂತಹ ಬೇಡಿಕೆಯನ್ನು ಮೂಲೆಗೆ ತಳ್ಳುವುದೇ ಸೂಕ್ತ ಎಂದಿದ್ದಾರೆ. ಕರ್ನಾಟಕ ಏಕೀಕರಣವಾಗಬೇಕಾದರೆ ಹಲವರ ಪ್ರಯತ್ನವಿತ್ತು. ಪ್ರತ್ಯೇಕತೆ ಕೂಗು ಸರಿಯಾದ ಕ್ರಮವಲ್ಲ ಎಂದು ಅವರು ತಿಳಿಸಿದರು.

ಕತ್ತಿ ಅವರದ್ದು ಪ್ರಚಾರ ತಂತ್ರ
ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸುತ್ತಿರುವ ಉಮೇಶ್ ಕತ್ತಿ ಒಬ್ಬ ಹುಚ್ಚ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ. ಕತ್ತಿ ದೊಡ್ಡ ಹುಚ್ಚರಾಗಿದ್ದು, ಕೂಡಲೇ ಅವರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಬೇಕು. ಇಲ್ಲವಾದರೇ ಹುಚ್ಚುತನ ಇನ್ನಷ್ಟು ಹೆಚ್ಚಾಗುತ್ತದೆ ಎಂದು ಲೇವಡಿ ಮಾಡಿರುವ ಅವರು, ಪ್ರತ್ಯೇಕ ರಾಜ್ಯಬೇಕು ಎಂದು ಹೇಳುವ ಮೂಲಕ ಕತ್ತಿ ಪ್ರಚಾರ ಗಿಟ್ಟಿಸುತ್ತಿದ್ದಾರೆ ಎಂದು ದೂರಿದ್ದಾರೆ.
|
ಕೆಲವು ರಾಕ್ಷಕರು ಹುಳಿ ಹಿಂಡುತ್ತಿದ್ದಾರೆ
ಉಮೇಶ್ ಕತ್ತಿ ಅವರ ಹೇಳಿಕೆಯನ್ನು ಹಿರಿಯ ನಟ ಜಗ್ಗೇಶ್ ಸಹ ಖಂಡಿಸಿದ್ದು, ಕರ್ನಾಟಕ ಒಂದು ಮನೆ ಇದ್ದಂತೆ ಇಲ್ಲಿ ಕೆಲವು ರಾಕ್ಷಸರು ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ಕತ್ತಿ ಹೇಳಿಕೆಗೆ ಮಾನ್ಯತೆ ಕೊಡಬೇಡಿ
ಉಮೇಶ್ ಕತ್ತಿ ಅವರ ಹೇಳಿಕೆಗೆ ಯಾವ ಮಾನ್ಯತೆಯೂ ಇಲ್ಲ. ಮಾಧ್ಯಮದವರು ಸಹ ಅವರ ಹೇಳಿಕೆಗೆ ಮಾನ್ಯತೆ ಕೊಟ್ಟು ಪ್ರಚಾರ ನೀಡಬೇಡಿ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಪ್ರತ್ಯೇಕ ರಾಜ್ಯದ ಬೇಡಿಕೆ ಇಡುವುದು ತಪ್ಪು ಎಂದು ಅವರು ತಿಳಿಸಿದ್ದಾರೆ.

ವಾಟಾಳ್‌ಗೆ ಪ್ರಶ್ನೆ ಕೇಳಿದ ಕತ್ತಿ
ಸೋಮವಾರ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಉಮೇಶ್ ಕತ್ತಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ನನ್ನ ಬಗ್ಗೆ ಇಷ್ಟೆಲ್ಲಾ ಮಾತನಾಡುವ ವಾಟಾಳ್ ನಾಗರಾಜ್ ಉತ್ತರ ಕರ್ನಾಟಕದ ಎಷ್ಟು ಜಿಲ್ಲೆಗಳನ್ನು ನೋಡಿದ್ದಾರೆ?, ಬೆಳಗಾವಿಗೆ ಬೆಂಗಳೂರಿನಿಂದ ವಿಮಾನದಲ್ಲಿ ಬಂದು ಹೋಗುವ ವಾಟಾಳ್ ಇಲ್ಲಿನ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕತ್ತಿ ಲೇವಡಿ ಮಾಡಿದರು.












Click it and Unblock the Notifications