ಕೊರೋನಾ ಭೀತಿ: ಲೋಕಸಭಾ ಅಧಿವೇಶನ ಕುರಿತು ಪ್ರಹ್ಲಾದ್ ಜೋಶಿ ಹೇಳಿಕೆ
ಬೆಂಗಳೂರು, ಮಾ. 14: ಕೊರೋನಾ ಗಂಭೀರ ಸಮಸ್ಯೆ ಆಗಿದ್ದರೂ ಜನ ಆತಂಕಕ್ಕೆ ಒಳಗಾಗೋದು ಬೇಡ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ನಡೆದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯ ಬಳಿಕ ಮಾತನಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಕೊರೋನಾ ವೈರಸ್ ತಡೆಯಲು ಪ್ರತ್ಯೇಕ ಸೆಲ್ ರಚಿಸಿ ತಾವೇ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಸಾರ್ವಜನಿಕರು ಹೆಚ್ಚು ಜಾಗೃತರಾಗಿ ಮುನ್ನೆಚ್ವರಿಕೆ ತೆಗೆದುಕೊಳ್ಳಬೇಕು. ರಾಜ್ಯ ಸರ್ಕಾರವೂ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಲೋಕಸಭೆ ಅಥವಾ ವಿಧಾನಸಭೆಯಲ್ಲಿ ಸ್ವಚ್ಚತೆ ಕೈಗೊಳ್ಳಬೇಕಾದ ರೀತಿಯಲ್ಲಿ ಸ್ವಚ್ಛತೆ ತೆಗೆದುಕೊಳ್ಳಲಾಗುತ್ತಿದೆ.

ಕೊರೋನಾ ವೈರಸ್ ಹಿನ್ನೆಲೆಯಲ್ಲಿಯೂ ಲೋಕಸಭಾ ಅಧಿವೇಶನ ನಿಗದಿತ ಅವಧಿಯವರೆಗೂ ನಡೆಯಲಿದೆ. ಯಾವುದೇ ಕಾರಣಕ್ಕೂ ಲೋಕಸಭಾ ಅಧಿವೇಶನ ಮುಂದೂಡಿಕೆ ಮಾಡುವುದಿಲ್ಲ. ವಿಧಾನಸಭೆ ಅಧಿವೇಶನದಲ್ಲಿ ಕೂಡಾ ಎಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೂಚಿಸಿದ್ದಾರೆ.












Click it and Unblock the Notifications