ಸತ್ಯಕ್ಕೆ ಜಯ; ರಾಹುಲ್‌ ಗಾಂಧಿ ಧೈರ್ಯ ನಾವು ಮೆಚ್ಚುತ್ತೇವೆ; ಕಾನೂನು ರಕ್ಷಣೆ ಮಾಡಿದೆ: ಮಧು ಬಂಗಾರಪ್ಪ

ಶಿವಮೊಗ್ಗ, ಆಗಸ್ಟ್‌ 05: ರಾಹುಲ್ ಗಾಂಧಿ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ್ದು, ಈ ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಗೌರವ ಬಂದಿದೆ. ರಾಹುಲ್ ಗಾಂಧಿ ಧೈರ್ಯ ನಾವು ಮೆಚ್ಚುತ್ತೇವೆ. ಒಳ್ಳೇ ನಾಯಕನನ್ನ ಜನ, ಕಾನೂನು ರಕ್ಷಣೆ ಮಾಡಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಈ ಕುರಿತು ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವರ ವಿರುದ್ದ ಸ್ವಪಕ್ಷದ ಶಾಸಕರು ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದು, ಶಾಸಕರ ಹೇಳಿಕೆಗೆ ಸಚಿವ ಮಧು ಬಂಗಾರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಸಕರು ಅಸಮಾಧಾನವನ್ನ ಮಾಧ್ಯಮಗಳು ತೋರಿಸೋದು ನಮಗೆ ಅಸಮಾಧಾನ ಎಂದು ಹೇಳಿದ್ದಾರೆ.

Law Has Protected Rahul Gandhi Minister Madhu Bangarappa Said

ಹಿರಿಯ ಶಾಸಕರ ಅಸಮಾಧಾನ ಇರುತ್ತೆ. ಮಾಧ್ಯಮದವರು ಸಿಕ್ಕಿದ ತಕ್ಷಣ ತೋರಿಸುತ್ತೀರಿ ಅದು ನಮಗೆ ಅಸಮಾಧಾನ. ಅವರು ಸಮಾಧಾನದಿಂದ ಇದ್ದರೆ ನಾವು ಇರಬಹುದು. ಪತ್ರ ಬರೆಯಬಹುದು ಎಂಬುದು ನಮ್ಮ ಬೈಲಾದಲ್ಲೇ ಇದೆ. ಆದರೆ, ಪತ್ರ ಬರೆಯದೇ ಮಾತುಕತೆ ನಡೆಸಬಹುದಿತ್ತು. ಅವರೆಲ್ಲಾ ಹಿರಿಯರು, ಎಲ್ಲಾ ಸರಿ ಹೋಗುತ್ತೆ ಎಂದು ತಿಳಿಸಿದರು.

ಭದ್ರಾವತಿಯ ಐತಿಹಾಸಿಕ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಪುನಾರಾರಂಭ ವಿಷಯದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯ ಸರ್ಕಾರ ಎಂದೂ ವಿಐಎಸ್ ಎಲ್ ಕಾರ್ಖಾನೆ ಮುಚ್ಚುತ್ತೇವೆಂದು ಹೇಳಿರಲಿಲ್ಲ. ಆದರೆ ಇಲ್ಲಿನ ಜನಪ್ರತಿನಿಧಿಗಳೇ ಕೇಂದ್ರ ಸರ್ಕಾರ ಕಾರ್ಖಾನೆ ಮುಚ್ಚುತ್ತೆ ಎಂದು ಹೇಳಿದ್ದರು. ಇನ್ನೇನು ಏಳು ತಿಂಗಳಲ್ಲಿ ಲೋಕಸಭಾ ಚುನಾವಣೆ ಬಂದಿದೆ. ಈ ಹೊತ್ತಲ್ಲಿ ಕಾರ್ಖಾನೆ ಆರಂಭ ಮಾಡುತ್ತೇನೆಂದು ಹೇಳಿದ್ದಾರೆ. ಇದು ಪರ್ಮನೆಂಟ್ ಆಗಿ ಆರಂಭವಾದರೆ ಒಳ್ಳೆಯದು. ಚುನಾವಣಾ ಪೂರ್ವ ಘೋಷಣೆಯಾದ್ದರಿಂದ ಬಿಜೆಪಿಯನ್ನ ನಂಬಲಸಾಧ್ಯ. ಇಷ್ಟರೊಳಗೇ ಅದನ್ನ ಉಳಿಸಿಕೊಳ್ಳಲು ಪ್ರಯತ್ನ ಮಾಡಬೇಕು ಎಂದು ಹೇಳಿದರು.

ಆರಗ ಜ್ಞಾನೇಂದ್ರ ಕಸ್ತೂರಿ ರಂಗನ್ ವರದಿ ವಿರೋಧಿಸುವ ಭರದಲ್ಲಿ ಮಲ್ಲಿಕಾರ್ಜುನ ಖರ್ಗೆ ಕುರಿತು ವ್ಯಂಗ್ಯವಾಗಿ ಮಾತನಾಡಿದ ಅವರು, ಆರಗ ಅವರ ಕ್ಲಾಸ್ ಏನೆಂದು ಗೊತ್ತಾಗುತ್ತೆ. ಅಂಥವರಿಗೆ ನಾನು ಉತ್ತರಿಸುವುದಿಲ್ಲ. ಪುನಃ ಈಗ ನಾನು ಹಾಗೆ ಹೇಳಿಯೇ ಇಲ್ಲ ಎಂದಿದ್ದಾರೆ. ನಾವು ರಾಜಕಾರಣಿಗಳು, ಬೇರೆಯವರಿಗೆ ಉತ್ತಮ ಉದಾಹರಣೆ ಆಗಬೇಕು. ಕೆಟ್ಟ ಉದಾಹರಣೆ ಆಗಬಾರದು. ಇದು ನಿಲ್ಲಬೇಕು, ವ್ಯಕ್ತಿಗತ ಟೀಕೆ ಸರಿ ಅಲ್ಲ ಎಂದು ಕಿಡಿಕಾರಿದರು.

ಪೊಲೀಸ್ ವರ್ಗಾವಣೆ ದಂಧೆ ಕುರಿತಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆರೋಪದ ಕುರಿತು ಮಾತನಾಡಿ, ಕುಮಾರಸ್ವಾಮಿ ಅವರು ಅವರ ಬಳಿ ದಾಖಲೆ ಇದ್ದರೆ ಕೊಡಲಿ. ಇವರೆಲ್ಲಾ ರಾಜ್ಯ ಆಳಿದವರು, ಈ ತರಹದ ಹೇಳಿಕೆಗಳು ಬೇರೆ ಅರ್ಥ ನೀಡುತ್ತವೆ. ಗ್ಯಾರಂಟಿ ಯೋಜನೆಗಳಿಗೆ ಎಲ್ಲಿಂದ ಹಣ ತರ್ತೀರಾ ಅಂದಿದ್ದರು. ಈಗ ಮಾಡ್ತಾ ಇದ್ದೀವಲ್ಲ ಎಂದು ಕುಟುಕಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+