ಮನಸ್ಸುಗಳನ್ನು ಒಡೆಯುವ ಹಿಂದಿ ಮೇಲರಿಮೆ: ನಮ್ಮ ಭಾಷೆ, ಆತ್ಮಗೌರವ ಮೊದಲು ಗುರು- ರಂಗಸ್ವಾಮಿ ಮೂಕನಹಳ್ಳಿ ಬರಹ

ಭಾವನೆಗಳನ್ನು, ಮನುಷ್ಯರನ್ನು ಬೆಸೆಯಬೇಕಿದ್ದ ಭಾಷೆಯು ಇಂದು ಮೇಲರಿಮೆ ಕಾರಣದಿಂದ ಮನುಷ್ಯರ ನಡುವೆ ಅಡ್ಡಗೋಡೆಯಾಗುತ್ತಿರುವುದು ವಿಪರ್ಯಾಸ. ಭಾರತದ ರಾಷ್ಟ್ರಭಾಷೆ ಹಿಂದಿ. ಎಲ್ಲ ಭಾರತೀಯರೂ ಹಿಂದಿ ಕಲಿತಿರಬೇಕು ಎನ್ನುವ ಧೋರಣೆಯಿಂದ ಭಾಷೆಯ ಬಗ್ಗೆ ವಿರೋಧ ಇಲ್ಲದವರೂ ಹಿಂದಿ ಭಾಷಿಕರ ಧೋರಣೆಯ ಬಗ್ಗೆ ಬೇಸರಪಡುವಂತೆ ಆಗುತ್ತಿದೆ. ತಮಗೆ ಆದ ಇಂಥದ್ದೇ ಅನುಭವವನ್ನು ಲೇಖಕ ಮತ್ತು ಹಣಕಾಸು ತಜ್ಞ ರಂಗಸ್ವಾಮಿ ಮೂಕನಹಳ್ಳಿ ತಮ್ಮ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. 'ನಮಗೆ ನಮ್ಮ ಭಾಷೆ ಮುಖ್ಯ ಗುರು' ಎನ್ನುವ ಅವರ ಮಾತು ಹಲವರ ಗಮನ ಸೆಳೆದಿದೆ. ರಂಗಸ್ವಾಮಿ ಅವರ ಪೋಸ್ಟ್‌ ಅನ್ನು ಯಥಾವತ್ತಾಗಿ ಇಲ್ಲಿ ಮರುಪ್ರಕಟಿಸಲಾಗಿದೆ.

ಅದು 2001 ರ ಸಮಯ. ದೂರ ದೇಶದಲ್ಲಿ ಸಿಗುವ ಭಾರತೀಯರೆಲ್ಲರೂ ನನ್ನ ಬಂಧುಗಳು ಎನ್ನುವ ಭಾವನೆಯಿದ್ದ ಕಾಲ. ಇದರ ಜೊತೆಗೆ ಅಂದಿನ ದಿನದಲ್ಲಿ ಬಾರ್ಸಿಲೋನ ನಗರದಲ್ಲಿ ಭಾರತೀಯರು ಬೆರಳೆಣಿಕೆಯಲ್ಲಿದ್ದರು. ಇಂತಹ ಸಮಯದಲ್ಲಿ ಡೆಲ್ಲಿಯ ಹುಡುಗನೊಬ್ಬನ ಪರಿಚಯವಾಗಿತ್ತು. ಫೋನಿನಲ್ಲಿ ಮಾತಾಡಿದ್ದೆವು. ಅವನಿಗೆ ಕನ್ನಡ ಎಲ್ಲಿಂದ ಬರಬೇಕು? ಹೀಗಾಗಿ ನಾನು ಅವನೊಂದಿಗೆ ಹಿಂದಿಯಲ್ಲಿ ಮಾತಾಡಿದ್ದೆ. ತಿಂಗಳುಗಳು ಕಳೆದು ಒಂದು ದಿನ ನೇರ ಭೇಟಿಯಾಗುವುದು ಎಂದು ನಿರ್ಧರಿಸಿ ಭೇಟಿಯಾದೆವು. ಭೇಟಿಯಾದ ಹತ್ತು ನಿಮಿಷದಲ್ಲಿ ನಮ್ಮ ಸಂಬಂಧ ಕೊನೆಯಾಯ್ತು. ಅದಕ್ಕೆ ಕಾರಣ ಕೆಟ್ಟ ಬುದ್ದಿಯ ಉತ್ತರ ಭಾರತೀಯ ಗುಣ. 'ಹಿಂದಿ ರಾಷ್ಟ್ರ ಭಾಷೆ ಹೀಗಾಗಿ ನೀನು ಹಿಂದಿ ಮಾತಾಡಬೇಕು, ಕನ್ನಡ (ಅವನ ಅಜ್ಞಾನದಲ್ಲಿ ಅದು ಕನ್ನಡ್ ) ರಿಜನಲ್ ಭಾಷೆ ಹೀಗಾಗಿ ನಾನು ಅದನ್ನು ಕಲಿಯುವ ಅವಶ್ಯಕತೆಯಿಲ್ಲ' ಎನ್ನುವ ಉದ್ದಟ ಮಾತು ಕೇಳಿ ಅವನ ಸ್ನೇಹ ಕಡಿದುಕೊಂಡೆ.

ನಾವು ಕನ್ನಡಿಗರು, ಬಹುತೇಕರು ಸೇಮ್. ಎಲ್ಲಾ ಭಾಷೆಯನ್ನು ಗೌರವಿಸುತ್ತೇವೆ. ಒಂದು ಹೆಜ್ಜೆ ಮುಂದೆ ಹೋಗಿ ಅವರ ಭಾಷೆಯಲ್ಲೇ ಮಾತಾಡುತ್ತೇವೆ. ಅವರು ನಮ್ಮ ಭಾಷೆಗೆ ಅವಮಾನ ಮಾಡದಿದ್ದರೆ ಸಾಕು ಬದುಕಿಕೊಳ್ಳಲಿ ಬಿಡು. ಈ ನೆಲ ನನ್ನೊಬ್ಬನಿಗೆ ಸೇರಿದ್ದಲ್ಲ ಎನ್ನುವ ಉದಾರ ಮನೋಭಾವದವರು. ಹೀಗಿದ್ದೂ ಕೆಲ ಹಿಂದಿ ಭಾಷಿಕರ ಕೆಟ್ಟ, ಕೊಳಕು ಮನಸ್ಥಿತಿ ನೋಡಿದಾಗ ಮನಸ್ಸಿನಲ್ಲಿ ಕೋಪ ಉಕ್ಕುತ್ತದೆ.

'ಏಕ್ ಭಾರತ್, ಶ್ರೇಷ್ಠ ಭಾರತ್' ಎಲ್ಲವೂ ಓಕೆ ಗುರು, ಬಟ್ ಆ ಭಾವನೆ ಎಲ್ಲರಿಗೂ ಇರಬೇಕು. ವಲಸಿಗರಾಗಿ ಬಂದವರು ಇಲ್ಲಿನ ನೆಲ, ಜಲ, ಭಾಷೆಗೆ ಗೌರವ ಕೊಡಬೇಕು. ನಾವು ಕನ್ನಡಿಗರು ಎಲ್ಲರನ್ನೂ ಗೌರವಿಸುತ್ತೇವೆ. ನೀವು ನಿಮ್ಮ ಮಿತಿ ಅರಿತುಕೊಂಡು ಸಹಬಾಳ್ವೆ ನಡೆಸುವುದು ಒಳ್ಳೆಯದು.

Language Respect in Karnataka

ಹಿಂದಿ ಭಾಷೆ ಮಾತಾಡುವ ಮಹಿಳೆಯೊಬ್ಬರ ಉದ್ದಟತನದ ವಿಡಿಯೋ ನೋಡಿ ಇಷ್ಟೆಲ್ಲಾ ಹೇಳಬೇಕು ಎನ್ನಿಸಿತು. ಆತ್ಮ ಗೌರವ, ನಮ್ಮ ಭಾಷೆ ಮೊದಲು ಗುರು. ಇದರರ್ಥ ಹಿಂದಿ ದ್ವೇಷ ಎಂದಲ್ಲ. ಬಟ್ ಕರ್ನಾಟಕದಲ್ಲಿ ಕನ್ನಡ ಕಡ್ಡಾಯ ಮಾಡಬೇಕು. ಇಲ್ಲಿ ಬದುಕಬೇಕು ಎಂದರೆ ಕನ್ನಡ ಕಲಿಯಬೇಕು.

ಇದನ್ನೂ ಓದಿ: ವಿದ್ಯಾವಂತರ ಬೇಜವಾಬ್ದಾರಿಗೆ ಸಮಾಜವೇಕೆ ಹಣ ನೀಡಬೇಕು? ಆರೋಗ್ಯ ವಿಮೆ ಮಾಡಿಸಿ: ರಂಗಸ್ವಾಮಿ ಮೂಕನಹಳ್ಳಿ ಬರಹ

ಇದಾಗದಿದ್ದರೆ ಮುಂದಿನ ದಿನಗಳಲ್ಲಿ ನಮ್ಮೂರಲ್ಲಿ ನಮಗೆ ಬದುಕಲು ಕಷ್ಟವಾಗುತ್ತೆ. ದಾವಣಗೆರೆ, ಚಿತ್ರದುರ್ಗ, ಹೊರನಾಡು ಕ್ಷೇತ್ರದಲ್ಲೂ ಹೋಟೆಲ್ ಗಳಲ್ಲಿ ಇವತ್ತಿಗೆ ಸಿಗುವುದು ಹಿಂದಿ ಭಾಷಿಕರು 😇

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+