ವಿದ್ಯಾವಂತರ ಬೇಜವಾಬ್ದಾರಿಗೆ ಸಮಾಜವೇಕೆ ಹಣ ನೀಡಬೇಕು? ಆರೋಗ್ಯ ವಿಮೆ ಮಾಡಿಸಿ: ರಂಗಸ್ವಾಮಿ ಮೂಕನಹಳ್ಳಿ ಬರಹ
ಬೆಂಗಳೂರು: ಎಷ್ಟೇ ದುಡಿದರೂ ಹಣ ಉಳಿಸದವರಿದ್ದಾರೆ. ಹಣ ಇದ್ದರೂ ಭವಿಷ್ಯದ ಖರ್ಚುಗಳ ಬಗ್ಗೆ ಪ್ಲಾನ್ ಮಾಡದವರೂ ಇದ್ದಾರೆ. ಅದೆಷ್ಟೋ ಬಾರಿ ವರ್ಷಗಟ್ಟಲೇ ಕೂಡಿಟ್ಟ ಹಣ ಆಸ್ಪತ್ರೆಗಳ ಬಿಲ್‌ಗೆ ಸಾಕಾಗಲ್ಲ. ಆಗ ಇನ್ಶುರೆನ್ಸ್ ಮಾಡಿಸಲಿಲ್ಲವಲ್ಲ ಎಂದು ಕೊರಗುವವರೂ ಇದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇಂತಿಂಥವರಿಗೆ ಕಷ್ಟ, ಚಿಕಿತ್ಸೆಗೆ ಹಣದ ಸಹಾಯ ಮಾಡಿ ಎಂದು ಖಾತೆ ಸಂಖ್ಯೆ ಹಾಕಿ ಕೋರುವ ಪೋಸ್ಟ್‌ಗಳು ಸಾಕಷ್ಟು ನೋಡಿರುತ್ತೇವೆ. ಇಂಥವರ ಕುರಿತು ಆರ್ಥಿಕ ಸಲಹೆಗಾರರು ಮತ್ತು ಲೇಖಕರಾದ ರಂಗಸ್ವಾಮಿ ಮೂಕನಹಳ್ಳಿ ಅವರು ಮಾಡಿರುವ ಫೇಸ್‌ಬುಕ್ ಪೋಸ್ಟ್ ಸಾಕಷ್ಟು ಚರ್ಚೆ ಆಗುತ್ತಿದೆ. ಅವರ ಬರಹ ಮುಂದಿದೆ.
''ಈ ಸಾಲುಗಳನ್ನು ಯಾರನ್ನೂ ನೋಯಿಸಲು ಅಥವಾ ಯಾರೊಬ್ಬರ ಕುರಿತಲ್ಲ. ಬದಲಿಗೆ ಇದೊಂದು ಮಾಹಿತಿಗಾಗಿ ಬರೆದ ಬರಹ...ಇವತ್ತಿನ ದಿನಗಳಲ್ಲೂ ಕೂಡ ನಮ್ಮ ಸ್ನೇಹಿತರ ವಲಯದಲ್ಲಿ ಇಂತಹವರು ಕಷ್ಟದಲ್ಲಿದ್ದಾರೆ. ಆಸ್ಪತೆಯಲ್ಲಿದ್ದಾರೆ, ಕೈಲಾದ ಸಹಾಯ ಮಾಡಿ. ಸಮಾಜವಾಗಿ ಇದು ನಾವು ಮಾಡಬೇಕಾದ ಕರ್ತವ್ಯ ಎನ್ನುವ ಅಪ್ಡೇಟ್ ಗಳನ್ನು ನಮಗೆ ತೀರಾ ಹತ್ತಿರದ ಸ್ನೇಹಿತರೆ ಹಾಕುತ್ತಿದ್ದಾರೆ. ಇದು ಹೊಸತೇನಲ್ಲ. 2010 ಕ್ಕೆ ಫೇಸ್‌ಬುಕ್‌ಗೆ ಬಂದದ್ದು. ಅಂದಿನಿಂದಲೂ ಇಂತಹ ಪೋಸ್ಟ್ ಗಳು ಸಾಮಾನ್ಯ. ಕಷ್ಟದಲ್ಲಿರುವವರ ಬಗ್ಗೆ ಅನುಕಂಪ, ಅವರು ಒಳ್ಳೆಯವರು ಎನ್ನುವ ಅಂಶ ಗೊತ್ತಿರುವ ಕಾರಣ ಈ ರೀತಿ ಸಹಾಯ ಕೇಳಿ ನಮ್ಮ ಸ್ನೇಹಿತರು ಈ ರೀತಿ ಪೋಸ್ಟ್ ಹಾಕುತ್ತಾರೆ.

ಮೊದಲು 10 ಲಕ್ಷ ರೂ. ಆರೋಗ್ಯ ವಿಮೆ ಮಾಡಿಸಿ
ಅವರಿಗೆ ಮತ್ತು ಕಷ್ಟದಲ್ಲಿರುವವರಿಗೆ, ಅದರಲ್ಲೂ ಆಸ್ಪತ್ರೆ ಬಿಲ್ ಕಟ್ಟಲಾಗದವರಿಗೆ: ಮೊದಲು ಹತ್ತು ಲಕ್ಷಕ್ಕೆ ಆರೋಗ್ಯ ವಿಮೆ ಮಾಡಿಸಿ. 25 ಸಾವಿರ ವರ್ಷಕ್ಕೆ ಪ್ರಿಮಿಯಂ ಕಟ್ಟಬೇಕಾಗುತ್ತದೆ. ಆ ನಂತರ ಇನ್ನೊಂದು ಕೋಟಿಗೆ ಮಾಡಿಸಿ, ಈ ಬಾರಿ ಅಂದರೆ ಕೋಟಿಗೆ ಮಾಡಿಸುವಾಗ ಮೊದಲ ಹತ್ತು ಲಕ್ಷ ಕ್ಲೇಮ್ ಮಾಡುವುದಿಲ್ಲ. ಸೆಕೆಂಡರಿ ಕ್ಲೇಮ್ ಅಂದರೆ ಹತ್ತು ಲಕ್ಷ ಲಿಮಿಟ್ ಮುಗಿದರೆ ಮಾತ್ರ ಕ್ಲೇಮ್ ಮಾಡುತ್ತೇವೆ ಎಂದು ಹೇಳಿ. ಕೋಟಿಗೆ ಹತ್ತು ಸಾವಿರ ರೂಪಾಯಿ ಮಾತ್ರ ಪ್ರೀಮಿಯಂ ಆಗುತ್ತೆ.
ಒಟ್ಟಾರೆ ಒಂದು ಕೋಟಿ ಹತ್ತು ಲಕ್ಷ ಕವರ್ ಗೆ ನಾವು ವಾರ್ಷಿಕ 35 ಸಾವಿರ ಕಟ್ಟಿದಂತೆ ಆಯ್ತು. ನಾಲ್ಕು ಜನರ ಕುಟುಂಬ ಎಂದು ಕೊಂಡರೆ ಆಗ 35,000/365 = 96 ರೂಪಾಯಿ ದಿನಕ್ಕೆ, ಒಬ್ಬರಿಗೆ 24 ರೂಪಾಯಿ ದಿನಕ್ಕೆ ಆಯ್ತು. ಇಷ್ಟು ನಿಮಗೆ ಕಟ್ಟಲು ಆಗುವುದಿಲ್ಲವೇ?.
ತಪ್ಪು ತಿಳಿಯಬೇಡಿ, ಎಲ್ಲವನ್ನೂ ಲೆಕ್ಕಾಚಾರ ಹಾಕುತ್ತಾನೆ ಎಂದು ಬೇಸರಿಸಬೇಡಿ. ನಿಮ್ಮ ಅಜ್ಞಾನಕ್ಕೆ ಸಮಾಜವೇಕೆ ಸಹಾಯ ಮಾಡಬೇಕು? ತೀರಾ ತಿಳುವಳಿಕೆ ಇಲ್ಲದವರ ವಿಚಾರದಲ್ಲಿ ನಾನೂ ಒಪ್ಪುತ್ತೇನೆ. ಬಟ್ ವಿದ್ಯಾವಂತರು, ಅದೂ ಇಂದಿನ ಮಾಹಿತಿ ಯುಗದಲ್ಲಿ ವಿಮೆ ಮಾಡಿಸದೆ ಇರುವುದು ಬೇಜವಾಬ್ದಾರಿ ಎಂದು ನಾನು ಭಾವಿಸುತ್ತೇನೆ.
ಅಂದಹಾಗೆ ನಾಲ್ಕು ಜನರ ಕುಟುಂಬ ಕನಿಷ್ಠ ಕೋಟಿ ರೂಪಾಯಿ ಕವರ್ ಇಟ್ಟುಕೊಳ್ಳುವುದು ಅನಿವಾರ್ಯ. ಯಾರಿಗಾದರೂ ಈ ಬರಹ ಬೇಸರ ತಂದಿದ್ದರೆ ಕ್ಷಮಿಸಿ. ನನ್ನ ಉದ್ದೇಶ ಎಚ್ಚರಿಸುವುದು ಅಷ್ಟೇ..ಶುಭವಾಗಲಿ'' ಎಂದು ಅವರು ಬರೆದುಕೊಂಡಿದ್ದಾರೆ. ಈ ಮೂಲಕ ಆರೋಗ್ಯ ವಿಮೆಯ ಮಹತ್ವ, ಕಷ್ಟಕಾಲದಲ್ಲಿ ಅದರಿಂದ ಸಿಗುವ ಲಾಭ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಅವರು ಈ ಪೋಸ್ಟ್ ನೋಡಿದ ನೆಟ್ಟಿಗರು ಚರ್ಚೆ ಶುರು ಮಾಡಿದ್ದಾರೆ. ಒಂದಷ್ಟು ಪ್ರಶ್ನೆಗಳನ್ನೂ ಕೇಳಿದ್ದಾರೆ.
ನೆಟ್ಟಿಗರು ಹೇಳಿದ್ದೇನು? ಪ್ರಶ್ನೆಗೆ ಉತ್ತರವು ಇಲ್ಲಿದೆ
'ನೀವು ಹೇಳಿದ್ದೆಲ್ಲ ಹೌದು...ಪ್ರಾಮಾಣಿಕವಾಗಿ ಕ್ಲೇಮ್ ಕೊಡುವ ಕಂಪನಿ ತೋರಿಸಿ...ಎಷ್ಟೋ ಜನ ಪ್ರೀಮಿಯಂ ಕಟ್ಟಿ ಆಸ್ಪತ್ರೆಗೆ ಸೇರಿದಾಗ...ನಾವು ಕಟ್ಟಿದ ಹಣದ ಮೊತ್ತವನ್ನೂ ಕ್ಲೇಮ್ ಕೊಡಲು ಕಂಪನಿ ಆಟ ಆಡಿಸತ್ತವೆ. ಅದರ ಬಗ್ಗೆನೂ ಹೇಳಿ. ಇದೆಲ್ಲ ಸುಲಭವಾಗಿ ಕ್ಲೇಮ್ ಸಿಗುವುದು ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಮಾತ್ರ. ಸಾಮಾನ್ಯ ಜನರಿಗೆ ಕಂಪನಿ ಕ್ಲೇಮ್ ಸುಲಭವಾಗಿ ಕೊಡಲ್ಲ' ನೆಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ.
ಇದಕ್ಕೆ ರಂಗಸ್ವಾಮಿ ಅವರು ಉತ್ತರಿಸಿದ್ದು, 'ಆನ್‌ಲೈನ್‌ನಲ್ಲಿ ಕೊಂಡವರಿಗೆ ಆಗಿರಬಹುದು. ಬಟ್ ಕೊಳ್ಳುವ ಮುನ್ನ ಸರಿಯಾಗಿ ಗಮನಿಸಿ, ಓದಿ ಕೊಂಡರೆ ಕ್ಲೇಮ್ ತಕರಾರು ಇರುವುದಿಲ್ಲ' ಎಂದು ವಿವರಿಸಿದ್ದಾರೆ.
'ತುಂಬಾ ಜನರಿಗೆ, ಏನೂ ಆಗದಿದ್ದರೆ ಸುಮ್ಮನೆ ಪ್ರೀಮಿಯಂ ಕಟ್ಟಬೇಕಲ್ಲ ಎಂಬ ಜಿಪುಣಸಂಕಟ ಕಾಡುತ್ತದೆ. ಅಂಥವರಿಗೆ ಸರಿಯಾಗಿ ತಿಳುವಳಿಕೆ ಕೊಡಬೇಕು' ಎಂದು ಎರಡನೇ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು 'ಒಂದು ಕೋಟಿ ವಿಮೆಗೆ 35 ಸಾವಿರ ಪ್ರೀಮಿಯಂ ಕಟ್ಟಿಸಿಕೊಳ್ಳುವ ಕಂಪನಿ ಯಾವುದು ಸರ್? ನಾನು ಸ್ಟಾರ್ ತೆಗೆದುಕೊಂಡಿದ್ದೇನೆ..25 ಸಾವಿರ ಪ್ರೀಮಿಯಂ/25 ಲಕ್ಷದ ವಿಮೆ' ಎಂದು ತಾವು ವಿಮೆ ಮಾಡಿಸಿದ್ದನ್ನು ತಿಳಿಸಿದ್ದಾರೆ.
-
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
ಮದ್ಯಪಾನದ ಅಭ್ಯಾಸವನ್ನು ನಿಯಂತ್ರಿಸಲು ಬಯಸುತ್ತೀರಾ? ತಜ್ಞರ ಸರಳ ಸಲಹೆಗಳು ಇಲ್ಲಿವೆ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು? -
ವೈಭವ್ ಸೂರ್ಯವಂಶಿ ಕುರಿತು ಬಿಸಿಸಿಐಗೆ ಹೋಯ್ತು ವಿಶೇಷ ಮನವಿ; ಟೀಮ್ ಇಂಡಿಯಾ ಸೇರ್ತಾರಾ ಯುವ ಪ್ರತಿಭೆ? -
ಒಂದು ಬಟನ್ ಒತ್ತಿದರೆ ಬದಲಾಗುತ್ತೆ BMW ಕಾರಿನ ನಂಬರ್ ಪ್ಲೇಟ್, ಹೈಟೆಕ್ ಕಳ್ಳಾಟದ ವಿಡಿಯೋ ಭಾರಿ ವೈರಲ್ -
Asha Bhosle: ಗಾನ ಕೋಗಿಲೆ ಆಶಾ ಭೋಸ್ಲೆ ನಿಧನ: ದೇಶವೇ ಶೋಕದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕಂಬನಿ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
ವಾಂಖೆಡೆಯಲ್ಲಿ ಆರ್ಸಿಬಿ-ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ವರದಿ ಹೀಗಿದೆ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Duet Songs: ಆಶಾ ಭೋಸ್ಲೆ-ಲತಾ ಮಂಗೇಶ್ಕರ್ ಸಹೋದರಿಯರ ಕಂಠಸಿರಿಯಲ್ಲಿ ಅರಳಿದ ಮಾಧುರ್ಯ: ಒಟ್ಟಿಗೆ ಹಾಡಿದ ಹಿಟ್ ಹಾಡುಗಳಿವು -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
ಎಪಿಎಂಸಿಯಲ್ಲಿ ಮೂಟೆಗಳು ಮೈಮೇಲೆ ಬಿದ್ದರೂ ಪವಾಡಸದೃಶ್ಯದಂತೆ ಬದುಕಿದ ಮಹಿಳೆ Video Viral










Click it and Unblock the Notifications