ಲಂಚ ಮುಕ್ತ ಅಭಿಯಾನಕ್ಕೆ ಟೊಂಕ ಕಟ್ಟಿದ ಆಪ್
ಚಿಕ್ಕಬಳ್ಳಾಪುರ, ನವೆಂಬರ್, 09: ಆಮ್ ಆದ್ಮಿ ಪಕ್ಷ ಏರ್ಪಡಿಸಿದ್ದ "ಲಂಚ ಮುಕ್ತ ಚಿಕ್ಕಬಳ್ಳಾಪುರ" ಅಭಿಯಾನ ಯಶಸ್ವಿಯಾಗಿದ್ದು, ಸರ್ಕಾರಿ ಅಧಿಕಾರಿಗಳು ಲಂಚ ಕೇಳಿದ್ದಲ್ಲಿ "ಲಂಚ ಮುಕ್ತ ಕರ್ನಾಟಕ" ಸಹಾಯವಾಣಿಗೆ (93425-22223) ಕರೆ ಮಾಡಿ ದೂರು ದಾಖಲಿಸಬಹುದು ಎಂದು ತಿಳಿಸಿದರು.
ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಮಾತನಾಡಿ, "ಲಂಚ ಮುಕ್ತ ಕರ್ನಾಟಕ" ಅಭಿಯಾನಕ್ಕೆ ರಾಜ್ಯಾದ್ಯಂತ ಅಭೂತಪೂರ್ವ ಬೆಂಬಲ ದೊರೆತಿದೆ, "ಲಂಚ ಮುಕ್ತ ಚಿಕ್ಕಬಳ್ಳಾಪುರ" ಅಭಿಯಾನದ ಮುಖಾಂತರ ಪಕ್ಷದ ಸಂಘಟನೆಯನ್ನು ಜಿಲ್ಲೆಯಲ್ಲಿ ಬಲವರ್ದಿಸಲು ಗಮನಹರಿಸಲಾಗುತ್ತದೆ ಎಂದರು.[ಸರ್ಕಾರಿ ಕಚೇರಿಗಳಲ್ಲಿ ಲಂಚ ಕೇಳಿದರೆ ಕರೆ ಮಾಡಿ]

ಪಕ್ಷದ ಸಹಸಂಚಾಲಕ ರವಿಕೃಷ್ಣ ರೆಡ್ಡಿ ಮಾತನಾಡಿ, "ಲಂಚ ತೆಗೆದುಕೊಳ್ಳುವವನು ಮತ್ತು ಕೊಡುವವನು ಇಬ್ಬರೂ ತಪ್ಪು ಮಾಡುವುದರಲ್ಲಿ ಸಮಾನರಾಗಿರುತ್ತಾರೆ. ಜನ ಮಧ್ಯವರ್ತಿಗಳ ಸಹಾಯವಿಲ್ಲದೆ ಮತ್ತು ಲಂಚ ಕೊಡದೆ ತಮ್ಮ ಕೆಲಸ ಮಾಡಿಸಿಕೊಳ್ಳಬೇಕು. ಆದ ಈ ಸಮಾಜ ಲಂಚ ಮುಕ್ತವಾಗಲಿದೆ ಎಂದು ಅಭಿಪ್ರಾಯಿಸಿದರು.
ತದನಂತರ ಪಕ್ಷದ ಎಲ್ಲಾ ಸದಸ್ಯರು ತಹಶೀಲ್ದಾರರನ್ನು ಭೇಟಿಮಾಡಿ, ಅವರು ಕಚೇರಿಯಲ್ಲಿ ಇದುವರೆಗೂ ಕೈಗೊಂಡಿರುವ ಹಲವಾರು ಕ್ರಮಗಳ ಕುರಿತಾಗಿ ಅಂದರೆ ಹೆಚ್ಚಿರುವ ಹೊಸ ವೇತನಗಳ ಸಂಖ್ಯೆ, RTC ಗಳ ವಿಲೇವಾರಿ, ಸಕಾಲದಲ್ಲಿ ಜಿಲ್ಲೆ ಮುಂದಿರುವ ವಿವಿಧ ಸವಾಲುಗಳನ್ನು ಕುರಿತಾಗಿ ಮಾಹಿತಿ ಪಡೆದುಕೊಂಡರು.[100 ರೂ. ಲಂಚ ಪಡೆದವನಿಗೆ ಕಡ್ಡಾಯ ನಿವೃತ್ತಿ ಶಿಕ್ಷೆ]
ಚಿಕ್ಕಬಳ್ಳಾಪುರ ಜನತೆ "ಲಂಚ ಮುಕ್ತ ಚಿಕ್ಕಬಳ್ಳಾಪುರ" ಅಭಿಯಾನದಲ್ಲಿ ಪಾಲ್ಗೊಂಡು ಲಂಚ ಕೊಡದೇ ತಮ್ಮ ಕೆಲಸಗಳನ್ನು ಮಾಡಿಸಿಕೊಂಡರು. ಜೊತೆಗೆ ಅಭಿಯಾನದ ಕುರಿತಾಗಿ ಪ್ರಶಂಸೆ ವ್ಯಕ್ತಪಡಿಸಿದ್ದು, ಸರ್ಕಾರಿ ಕಚೇರಿಗಳಲ್ಲಿ ಲಂಚ ಮುಕ್ತ ವಾತಾವರಣ ಸದಾ ಇರಬೇಕೆಂದು ಅಭಿಪ್ರಾಯಪಟ್ಟರು.
ಈ ಅಭಿಯಾನದಲ್ಲಿ ಪಕ್ಷದ ನಾನಾ ಕಾರ್ಯಕರ್ತರು, ರಾಜ್ಯ ಸಂಚಾಲಕ ಹಾಗೂ ಸಹಸಂಚಾಲಕ , ನಾಗರಾಜ್, ಚಿಕ್ಕ ಬಳ್ಳಾಪುರ ಜಿಲ್ಲಾ ಸಂಚಾಲಕ ಅಭಿಲಾಷ್. ಸಿ. ಎ ,ಬಾಗೆಪಲ್ಲಿ ಸಂಚಾಲಕರಾದ ಧ್ರುವ ಕುಮಾರ್ ಮತ್ತಿತರರು ಹಾಜರಿದ್ದರು.












Click it and Unblock the Notifications