ಲೋಕಸಭೆ ಚುನಾವಣೆ: ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕದ ಎಲ್ಲಾ ಸ್ಥಾನಗಳನ್ನ ಗೆಲ್ತೇವೆ : ಭವಿಷ್ಯ ನುಡಿದ ಮಾಜಿ ಡಿಸಿಎಂ
ಕಲಬುರಗಿ, ಜನವರಿ 17: ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳ ಪೈಕಿ 20 ಕ್ಕೂ ಹೆಚ್ಚು ಸ್ಥಾನಗಳನ್ನ ಗೆಲ್ಲುವ ನಿಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಟಾರ್ಗೆಟ್ ನೀಡಿದೆ. ಲೋಕಸಭೆ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಹಾಗೂ ಮುಂಬೈ ಕರ್ನಾಟಕದ ಎಲ್ಲಾ ಸ್ಥಾನಗಳನ್ನ ನಾವು ಗೆಲ್ತೇವೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ಈ ಕುರಿತು ಕಲಬುರಗಿಯ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಈ ಭಾಗದ ಎಲ್ಲಾ ಸ್ಥಾನ ಗೆಲ್ಲುತ್ತೇವೆ. ಬಿಜೆಪಿ ಅವರು ಪಕ್ಕದ ರಾಜ್ಯದ ಎರಡು ಸ್ಥಾನಗಳನ್ನು ಸೇರಿಸಿ ಹೇಳುತ್ತಿದ್ದಾರೆ. 28ಕ್ಕೆ 28 ಸ್ಥಾನ ಗೆಲ್ಲುತ್ತೇವೆ ಅನ್ನೋ ವಿಜಯೇಂದ್ರ ಹೇಳಿಕೆಗೆ ತೀರುಗೇಟು ನೀಡಿದರು.

ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಿಸಿದ್ರೆ ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿರುತ್ತಾರೆ ಎಂಬ ಯತೀಂದ್ರ ಹೇಳಿಕೆ ವಿಚಾರದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಸಿದ ಅವರು, ಯತೀಂದ್ರ ಹೇಳಿಕೆ ಅವರ ವೈಯುಕ್ತಿಕ ಅಭಿಪ್ರಾಯ, ನಮ್ಮಲ್ಲಿ ಹೈಕಮಾಂಡ್ ಇದೆ, ಆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಹೈಕಮಾಂಡ್ ಮನಸ್ಸು ಮಾಡಿದ್ರೆ ಈ ಐದು ವರ್ಷ ಅಲ್ಲ ಮುಂದಿನ ಐದು ಕೂಡ ಆಗಿರಬಹುದು. ಅದೆಲ್ಲ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ಹೇಳಿದರು.
ಯಾರನ್ನಾದ್ರು ಈ ವಿವಾರವಾಗಿ ಮಧ್ಯಸ್ಥಿಕೆ ಇಟ್ಟುಕೊಂಡು ಚರ್ಚೆ ಮಾಡಿದ್ದಿರಾ. ಏನೇನು ತೀರ್ಮಾನ ಆಗಿದೆ ಹೈಕಮಾಂಡ್‌ಗೆ ಗೊತ್ತು ಐದು ವರ್ಷನೋ, ಎರಡೂ ವರ್ಷನೋ. ಮುಂದೆ ಸರ್ಕಾರ ಬಂದ್ರು ನಮ್ಮಲ್ಲಿ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದರು. ಇದೇ ವೇಳೆ ಆಯೋಧ್ಯೆ ವಿಚಾರವಾಗಿ ಮಾತನಾಡಿ, ನಾನೇ ಲಕ್ಷ್ಮಣ ಇದ್ದೇನೆ, ರಾಮಮಂದಿರ ಉದ್ಘಾಟನೆಗೆ ನಾನು ಹೋಗ್ತಿಲ್ಲ. ಮುಂದೆ ಯಾವಾಗಲಾದ್ರು ಹೋಗ್ತಿನಿ ಎಂದು ರಾಮ ಮಂದಿರ ಅಹ್ವಾನವನ್ನು ತಿರಸ್ಕರಿಸಿದರು.

ಮೋದಿ ರಾಜ್ಯಕ್ಕೆ ಭೇಟಿ ವಿಚಾರದ ಮಾತನಾಡಿದ ಅವರು, ಬರಗಾಲ, ಅತೀ ವೃಷ್ಟಿಯಾದಾಗ ನರೇಂದ್ರ ಮೋದಿ ಬರಲಿಲ್ಲ. ಚುನಾವಣೆ ಬಂದಾಗ ಬರಲೇಬೆಕಲ್ಲಾ, ಅದಕ್ಕೆ ಬರುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಸಿಎಂ ವಿರುದ್ದ ಅನಂತಕುಮಾರ್ ಹೆಗಡೆ ಏಕ ವಚನ ಪ್ರಯೋಗ ವಿಚಾರದ ಬಗ್ಗೆ ಮಾತನಾಡಿದ ಅವರು, ಈ ತರಹ ಹೇಳಿಕೆಗಳಿಂದ ನಿಮ್ಮ ಬೆಲೆ ಕಡಿಮೆಯಾಗುತ್ತೆ.
ಐದು ವರ್ಷ ಹೆಗಡೆ ನಾಪತ್ತೆಯಾಗಿದ್ರು. ಯಾವ ಕ್ಷೇತ್ರಕ್ಕೂ ಭೇಟಿ ನೀಡಿಲ್ಲ. ಯಾವ ಜನರಿಗೂ ಏನು ಮಾಡಿಲ್ಲ. ಎಲೆಕ್ಷನ್ ಬಂದಾಗ ಟಿಕೆಟ್ ಪಡಿಬೇಕು ಅಂತ ಅನಾವಶ್ಯಕವಾಗಿ ವಿವಾದತ್ಮಕ ಹೇಳಿಕೆ ನೀಡಿ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. ಆ ಮೂಲಕ ಟಿಕೆಟ್ ಪಡೆದುಕೊಳ್ಳಬೇಕು ಅಂತಿದ್ದಾರೆ. ಅದ್ರಿಂದ ಅವರಿಗೆ ಲಾಭವಾಗಲ್ಲ, ಹಾನಿಯಾಗುತ್ತೆ ಎಂದು ಹೇಳಿದರು.












Click it and Unblock the Notifications