ಕುಂದಾಪುರ : ಅಕ್ಷತಾ ಕೊಲೆ, ಮತ್ತೊಬ್ಬ ವಶಕ್ಕೆ
ಉಡುಪಿ, ಜೂ. 20 : ವಿದ್ಯಾರ್ಥಿನಿ ಅಕ್ಷತಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸುನೀನ್ ಸ್ನೇಹಿತ ಅಕ್ಷಯ್ (20) ನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪಶ್ಚಿಮ ವಲಯ ಐಜಿಪಿ ಅಮೃತ್ ಪೌಲ್ ಹೇಳಿದ್ದಾರೆ. ಅಕ್ಷತಾ ಕೊಲೆಯಲ್ಲಿ ಅಕ್ಷಯ್ ಪಾತ್ರವಿದೆಯೇ? ಎಂದು ತನಿಖೆ ಮುಂದುವರೆದಿದೆ.
ಹಿಂದಿನ ಸುದ್ದಿ : ಕುಂದಾಪುರದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಅಕ್ಷತಾ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಜೂನ್ 17ರ ಬುಧವಾರ ಕಾಲೇಜಿಗೆ ತೆರಳಿದ್ದ ಅಕ್ಷತಾ ಶವ ಸಂಜೆ ಮನೆಯ ಬಳಿಯ ಕಾಡಿನಲ್ಲಿ ಪತ್ತೆಯಾಗಿತ್ತು.
ಉಡುಪಿ ಪೊಲೀಸರು ಬೈಂದೂರಿನ ಯೋಜನಾ ನಗರದ ನಿವಾಸಿ ಸುನೀಲ್ (19)ನನ್ನು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದಾರೆ. ಅಕ್ಷತಾ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ್ದ ಸುನೀಲ್ ನಂತರ ಆಕೆಯನ್ನು ಕೊಲೆ ಮಾಡಿ ಕಾಡಿನಲ್ಲಿ ಶವವನ್ನು ಬಿಸಾಡಿದ್ದ. [ಕುಂದಾಪುರ ಕಾಲೇಜು ವಿದ್ಯಾರ್ಥಿನಿ ನಿಗೂಢ ಸಾವು]

ಅಕ್ಷತಾ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ್ದ ಸುನೀಲ್ ಆಕೆ ಕೂಗಿಕೊಂಡಾಗ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಕುತ್ತಿಗೆ ಹಿಸುಕಿ ಆಕೆಯನ್ನು ಕೊಲೆ ಮಾಡಲು ಪ್ರಯತ್ನ ನಡೆಸಿದ್ದ. ಅದು ಸಾಧ್ಯವಾಗದಿದ್ದಾಗ ವೇಲ್‌ನಿಂದ ಆಕೆಯ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದ ಎಂಬ ಪ್ರಾಥಮಿಕ ಮಾಹಿತಿ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಕಾಡಿನಲ್ಲಿ ಶವ ಪತ್ತೆಯಾಗಿತ್ತು : ಬೈಂಒತ್ತಿನೆಣೆಯ ಹೆನ್ನಬೇರು ನಿವಾಸಿ ಬಾಬು ದೇವಾಡಿಗ ಹಾಗೂ ರಾಧಾ ಅವರ ಪುತ್ರಿ ಅಕ್ಷತಾ ಬೈಂದೂರು ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಬುಧವಾರ ಬೆಳಗ್ಗೆ ಕಾಲೇಜಿಗೆ ಹೋಗಿದ್ದಳು, ಸಂಜೆ ಮನೆ ಸಮೀಪದ ಕಾಡಿನಲ್ಲಿ ಆಕೆಯ ಶವ ಪತ್ತೆಯಾಗಿತ್ತು.
ಅಕ್ಷತಾ ಕಾಲೇಜಿನಿಂದ ಮರಳುವುದನ್ನು ಆಕೆಯ ಸಂಬಂಧಿಕರೊಬ್ಬರು ನೋಡಿದ್ದರು. ಅಲ್ಲದೇ ಆಕೆ ಮುಂಭಾಗದ ಕೆಲವು ದೂರದಲ್ಲಿ ಇನ್ನೊಬ್ಬ ಯುವಕ ನಡೆದು ಹೋಗಿದ್ದಾನೆ ಎಂದು ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು.












Click it and Unblock the Notifications