JDS ಮೈಸೂರು ಪಾದಯಾತ್ರೆಯಲ್ಲಿ ಭಾಗವಹಿಸಲು ಕಾರಣ ಏನು? ಕೇಂದ್ರ ಸಚಿವರ ಸಂಧಾನ ಸಕ್ಸಸ್‌

ಮೈಸೂರು ಚಲೋ ಪಾದಯಾತ್ರೆ ಸದ್ಯಕ್ಕಂತೂ ಯಾವುದೇ ತೊಂದರೆ ಇಲ್ಲದೆ ಆರಂಭವಾಗಿದೆ. ಆದರೆ ಕಳೆದ ಎರಡು ದಿನಗಳಿಂದ ಜೆಡಿಎಸ್‌ ಪಾದಯಾತ್ರೆಯಲ್ಲಿ ಭಾಗವಹಿಸುವುದಿಲ್ಲ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದ್ದರು. ಆದರೆ ಹಲವು ಸಭೆಗಳ ಬಳಿಕ ಕುಮಾರಸ್ವಾಮಿ ಯೂಟರ್ನ್‌ ಹೊಡೆದಿದ್ದಾರೆ.

ಅಷ್ಟಕ್ಕೂ ಕುಮಾರಸ್ವಾಮಿ ಯೂಟರ್ನ್‌ ಹೊಡೆಯಲು ಕಾರಣ ಏನು ಎಂಬ ಪ್ರಶ್ನೆಗಳು ಉದ್ಭವಿಸಿವೆ. ಅಂದಹಾಗೆ ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಾಯಕರು ಪಾದಯಾತ್ರೆಗೆ ಪ್ಲ್ಯಾನ್ ಮಾಡಿಕೊಂಡಿತ್ತು. ಆದರೆ ಎಚ್‌ಡಿಕೆ ಈ ಪಾದಯಾತ್ರೆಯಲ್ಲಿ ಭಾಗವಹಿಸುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದರು.

Kumaraswamy s U-Turn JDS to Join Mysore Padayatra After Successful Negotiations

ಪಾದಯಾತ್ರೆಯಲ್ಲಿ ಭಾಗವಹಿಸುವುದಿಲ್ಲ ಎಂದಿದ್ದು ಏಕೆ?

ಕೇವಲ ಎರಡು ದಿನಗಳ ಹಿಂದೆ ಎಚ್‌ಡಿಕೆ ಹೇಳಿಕೆ ಮೈತ್ರಿ ಪಕ್ಷದಲ್ಲಿ ಭಾರೀ ಸಂಚಲನವನ್ನು ಮೂಡಿಸಿತ್ತು. ಇದನ್ನೇ ಬಳಸಿಕೊಂಡು ಕಾಂಗ್ರೆಸ್‌ ಬೆಳೆ ಬೇಯಸಿಕೊಳ್ಳಲು ದೊಡ್ಡ ಪ್ಲ್ಯಾನ್ ಮಾಡಿಕೊಂಡಿತ್ತು. ಅಲ್ಲದೆ ಪಾದಯಾತ್ರೆಗೆ ಸಂಬಂಧಿಸಿದ ಸಭೆಯಲ್ಲಿ, ಬಿಜಿಪಿ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಜೆಡಿಎಸ್‌ ನಾಯಕರು ದೂರಿದರು. ಚುನಾವಣೆ ಹೊಂದಾಣಿಕೆ ಬೇರೆ, ರಾಜಕಾರಣ ಬೇರೆ ಎಂದು ಜೆಡಿಎಸ್ ಮುಖಂಡರು ತಿಳಿಸಿದ್ದಾರೆ.

ಹಳೆಯ ಮೈಸೂರು ಭಾಗದಲ್ಲಿ ಜೆಡಿಎಸ್‌ ಪ್ರಾಬಲ್ಯ

ಹಳೆಯ ಮೈಸೂರು ಭಾಗದಲ್ಲಿ ನಮ್ಮ ಪಕ್ಷದ್ದೇ ಪ್ರಾಬಲ್ಯ ಇದೆ. ನಮ್ಮನ್ನು ಸಭೆಯಲ್ಲಿ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಎಚ್‌ಡಿ ಕುಮಾರಸ್ವಾಮಿ ದೂರಿದ್ದರು. ಆದರೆ, ಅವರ ಕೋಪವನ್ನು ಶಮವನ್ನು ಮಾಡುವ ಕಾರ್ಯ ಮಾಡಲಾಗಿದೆ. ಅಲ್ಲದೆ ಮೈತ್ರಿ ಪಕ್ಷದ ಕೋರ್‌ ಕಮಿಟಿ ಸಭೆಯಲ್ಲಿ, ಸದಸ್ಯರಲ್ಲದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ, ರಾಜೀವ್ ಭಾಗವಹಿಸಿದ್ದು ಎಚ್‌ಡಿಕೆ ಕಂಗಣ್ಣಿಗೆ ಗುರಿಯಾಗಿತ್ತು.

Kumaraswamy s U-Turn JDS to Join Mysore Padayatra After Successful Negotiations

ಎಚ್‌ಡಿಕೆ ಮುನಿಸು

ದೇವೇಗೌಡರ ಕುಟುಂಬದ ವಿರುದ್ಧ ಕತ್ತಿ ಮಸಿಯುವ ಪ್ರೀತಂ ಗೌಡ್‌ ತನ್ನ ಜೊತೆ ವೇದಿಕೆ ಹಂಚಿಕೊಂಡಿದ್ದು ಹೇಗೆ ಎಂಬುದೇ ಎಚ್‌ಡಿಕೆ ಮುನಿಸಿಗೆ ಕಾರಣವಾಗಿತ್ತು. ಕುಮಾರಸ್ವಾಮಿ ಈ ನಡೆ ಮೈತ್ರಿ ಪಕ್ಷಗಳ ಟೆನ್ಷನ್‌ ಹೆಚ್ಚಿಸಿತ್ತು. ಈ ಬಿಕ್ಕಟ್ಟನ್ನು ಶಮನ ಮಾಡುವಂತೆ ಮನವಿ ಸಲ್ಲಿಸಿದ್ದರು.

ಸಂಧಾನ ಸಭೆ ಸಕ್ಸಸ್‌

ಕೇಂದ್ರ ಸಚಿವರ ತಂಡದಿಂದ ಜೆಡಿಎಸ್‌ ಮುಖಂಡ ಎಚ್‌ಡಿ ಕುಮಾರಸ್ವಾಮಿ ಅವರನ್ನು ಮನವಲಿಸುವ ಕಾರ್ಯಕ್ರಮ ನಡೆಯಿತು. ನಂತರ ಧಾರವಾಡ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಈ ಸಭೆಯ ಬಳಿಕವೇ ಕುಮಾರಸ್ವಾಮಿ ತಾವು ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ಭಾಗವಹಿಸುವುದಾಗಿ ಸ್ವಷ್ಟ ಪಡಿಸಿದರು.

ಬಿಜೆಪಿಯ ಮುಖಂಡರು ನಡೆಸಿದ ಸಭೆಯ ತಮಗೆ ಸಮಾಧಾನ ತಂದಿದೆ ಎಂದು ಎಚ್‌ಡಿಕೆ ಹೇಳಿದ್ದರೆ. ಪರಿಣಾಮವೇ ಜೆಡಿಎಸ್‌ ಮೈಸೂರು ಚಲೋ ಪಾದಯಾತ್ರೆಯಲ್ಲಿ ಭಾಗವಹಿಸಲು ಗ್ರೀನ್‌ ಸಿಗ್ನಲ್‌ ನೀಡಲಾಯಿತು.

ಈ ಹಿಂದೆ ಲೋಕಸಭಾ ಚುನಾವಣೆಯ ವೇಳೆಯೂ ಟಿಕೆಟ್‌ ಹಂಚಿಕೆ ಸಂಬಂಧ ಬಿಜೆಪಿ ಜೊತೆ ಎಚ್‌ಡಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದರು. ಅವರು ಈಗ ಕೇಂದ್ರ ಸಚಿವರು ಆಗಿದ್ದುಕೊಂಡು ಮೈತ್ರಿಯ ವಿರುದ್ಧ ಧ್ವನಿ ಎತ್ತಿದ್ದು ಅಸಮಾಧಾನದ ಹೊಗೆ ಮೂಡುವಂತೆ ಮಾಡಿತ್ತು. ಈಗ ಎಲ್ಲವೂ ಸುಸೂತ್ರವಾಗಿ ಬಗೆ ಹರಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+