ರಾಜ್ಯದ ಮಹಿಳೆಯರಿಗೆ ಗುಡ್‌ನ್ಯೂಸ್; 'ಗೃಹಲಕ್ಷ್ಮಿ ಹಣ 5000 ರೂಪಾಯಿ'
ಮಂಡ್ಯ, ಜುಲೈ 01: ರಾಜ್ಯ ಕಾಂಗ್ರೆಸ್ ಅಧಿಕಾರ ಪಂಚ ಗ್ಯಾರಂಟಿ ಯೋಜನೆಗಳನ್ನ ಹಂತ ಹಂತವಾಗಿ ಜಾರಿಗೊಳಿಸಿದ್ದು, ಪ್ರತಿ ಮನೆಯ ಯಜಮಾನಿಗೆ ಕಾಂಗ್ರೆಸ್ ಸರ್ಕಾರ 2000 ಹಣ ನೀಡುತ್ತಿದೆ. 2028 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೃಹ ಲಕ್ಷ್ಮಿ ಯೋಜನೆಯಡಿ 4000 ರೂಪಾಯಿ ಹಣ ನೀಡಲಾಗುವುದು ಎಂದು ಕಾಂಗ್ರೆಸ್ ಶಾಸಕ ರಂಗನಾಥ್ ವಿಧಾನಸಭೆಯಲ್ಲಿ ಘೋಷಿಸಿದ್ದರು.
ಇದೀಗ ರಾಜ್ಯ ಬಿಜೆಪಿ ಹಾಗೂ ಜೆಡಿಎಸ್ ನಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಹುಮತದಿಂದ ಗೆದ್ದು ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು ಎನ್ನುವ ಲೆಕ್ಕಾಚಾರ ನಡೆಯುತ್ತಿದೆ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಕುಮಾರಸ್ವಾಮಿ ಅಧಿಕಾರಕ್ಕೆ ಬಂದರೆ ಬರೋಬ್ಬರಿ 5000 ರೂಪಾಯಿ ನೀಡಲಾಗುವುದು ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ಕುಮಾರಣ್ಣ ಅಧಿಕಾರಕ್ಕೆ ಬಂದರೆ ಗೃಹಲಕ್ಷ್ಮಿ ಎರಡು ಸಾವಿರ ಅಲ್ಲ, ಕುಮಾರಣ್ಣ ಮುಖ್ಯಮಂತ್ರಿ ಆದರೆ ಐದು ಸಾವಿರ ಗ್ಯಾರಂಟಿ ಎಂದು ಹೇಳಿದ್ದಾರೆ.

ಸಿದ್ದರಾಮಣ್ಣ ನಾನು ವಯಸ್ಸಿನಲ್ಲಿ ಬಹಳ ಚಿಕ್ಕವನು. ನಾನು ಅಲ್ಪಸ್ವಲ್ಪ ಪಕ್ಷದ ಇತಿಹಾಸದ ಬಗ್ಗೆ ತಿಳಿದಿದ್ದೇನೆ. ಯಾರೋ ಕಟ್ಟಿದ ಗೂಡಿಗೆ ಹೋಗಿ ವಾಸ ಮಾಡ್ತಿರೋದು ನೀವು. ನಮ್ಮ ಪಕ್ಷದ ಬಗ್ಗೆ ಮಾತಾಡಬೇಡಿ ಎಂದು ಸಿಎಂ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ಯಾರೋ ಕಟ್ಟಿದ ಪಕ್ಷದಲ್ಲಿ ಹೋಗಿ ಅಧಿಕಾರ ಅನುಭವಿಸ್ತಿರೋದು ನೀವು. 2013ರಲ್ಲಿ ಪರಿಶಿಷ್ಟ ನಾಯಕರನ್ನ ಮಣಿಸಿದ್ದು ಯಾರು? ಈಗ ಮಲ್ಲಿಕಾರ್ಜುನ ಖರ್ಗೆಯನ್ನ ಅವರನ್ನ ರಾಷ್ಟ್ರಕ್ಕೆ ಕಳುಹಿಸಿದ್ರಿ. ಯಾರೋ ಕಟ್ಟಿದ ಗೂಡಿಗೆ ಹೋಗಿ ವಾಸ ಮಾಡ್ತಿರೋದು ನೀವು. ನಮ್ಮ ಪಕ್ಷದ ಬಗ್ಗೆ ನೀವು ಮಾತಾಡಬೇಡಿ ಎಂದು ವಾಗ್ದಾಳಿ ನಡೆಸಿದರು.
2004ರಲ್ಲಿ ಕಾಂಗ್ರೆಸ್‌ನ ಜೊತೆ ಜೆಡಿಎಸ್ ಸಮ್ಮಿಶ್ರ ಸರ್ಕಾರ ಮಾಡಿತ್ತು. ಆಗ ಡಿಸಿಎಂ ಆಗಿದ್ದವರು ಯಾರು.? ನಿಮ್ಮನ್ನ ಗುರುತಿಸಿ ಅಧಿಕಾರ ಕೊಟ್ಟಿ, ಬೆಳೆಸಿದ್ದು ಯಾರು? ಇಷ್ಟು ಬೇಗ ಜೆಡಿಎಸ್‌ನ ಮರೆತುಬಿಟ್ರಾ.? ಸಿಎಂ ಸಿದ್ದರಾಮಯ್ಯ ವಿರುದ್ಧ ನಿಖಿಲ್ ಕುಮಾರಸ್ವಾಮಿ ಎಂದು ವಾಗ್ದಾಳಿ ನಡೆಸಿದರು. 2018 ರಲ್ಲಿ ದೇವೇಗೌಡರ ಮನೆ ಬಾಗಿಲಿಗೆ ಓಡೋಡಿ ಬಂದವರು ಯಾರು? ಆಗ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಏನು ಮಾಡಿದ್ರಿ? 2019ರ ಲೋಕಸಭಾ ಚುನಾವಣೆಯಲ್ಲಿ ಏನು ಮಾಡಿದ್ರಿ. ನಿಮ್ಮ ಜೊತೆ ಗುರುತಿಸಿಕೊಂಡವರನ್ನ ಬೇರೆ ಪಕ್ಷಕ್ಕೆ ಹೋಗುವಂತೆ ಮಾಡಿ ಸರ್ಕಾರ ಬಿಳಿಸಿದ್ದು ಯಾರು? ತೀವ್ರವಾಗಿ ವಾಗ್ದಾಳಿ ನಡೆಸಿದರು.
ನಿಮ್ಮನ್ನ ದೇವೇಗೌಡರು ಹಣಕಾಸಿನ ಮಂತ್ರಿ ಮಾಡಿ ಬೆಳೆಸಿದ್ದು.ಹಲವರು ಹಿರಿಯರನ್ನ ಬಿಟ್ಟು ನಿಮ್ಮಿಂದ ಬಜೆಟ್ ಮಂಡಿಸಿದ್ರು. ಆಗ ಮಾತೃ ಪಕ್ಷದಂತೆ ಜೆಡಿಎಸ್ ಇತ್ತು. ಅಂತಹ ಪಕ್ಷ ಬಿಟ್ಟು ಹೋದವರು ತಾಯಿಗೆ ದ್ರೋಹ ಮಾಡಿದಂತೆ ಎಂದು ಕಿಡಿಕಾರಿದರು. ಕಾಂಗ್ರೆಸ್‌ಗೆ ನೂರು ವರ್ಷದ ಇತಿಹಾಸ ಇದೆ ಅಂತೀರಾ.? ನಿಮ್ಮ ಪಕ್ಷ ದೇಶದಲ್ಲಿ ಎಷ್ಟು ರಾಜ್ಯದಲ್ಲಿ ಅಧಿಕಾರ ಮಾಡ್ತಿದ್ದೀರಿ? ನೂರು ವರ್ಷದ ಇತಿಹಾಸ ಇರುವ ಪಕ್ಷ ಮೂರು ರಾಜ್ಯಕ್ಕೆ ಮಾತ್ರ ಸೀಮಿತವಾಗಿದೆ ಎಂದು ರಾಜ್ಯ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು.
ಜೆಡಿಎಸ್ ಪಕ್ಷದಲ್ಲಿರುವ ಕಾರ್ಯಕರ್ತರು ಎರಡು ಪಕ್ಷಗಳಲ್ಲೂ ಸಿಗಲ್ಲ. ಚಿನ್ನದಂತಹ ಕಾರ್ಯಕರ್ತರು ಜೆಡಿಎಸ್ ನವರು. ಅವರ ಬಗ್ಗೆ ಮಾತನಾಡಬೇಡಿ. ಕಾರ್ಯಕರ್ತರ ರಕ್ತದ ಕಣ ಕಣದಲ್ಲಿ ಪಕ್ಷ ನಿಷ್ಠೆ ರೂಢಿಸಿದ್ದಾರೆ. ನಮ್ಮ ಪಕ್ಷದ ಬಗ್ಗೆ ಚಿಂತಿಸೋಕೆ ಕಾರ್ಯಕರ್ತರು ಇದ್ದಾರೆ ಎಂದು ಹೇಳಿದರು. ಪಂಚರತ್ನ ಯಾತ್ರೆ ವೇಳೆ ವಿವಿಧ ಬಗೆಯ ಹಾರ ಹಾಕಿ ಗಿನ್ನಿಸ್ ರೆಕಾರ್ಡ್ ಮಾಡಿದ್ದೀರಾ. ಕುಮಾರಣ್ಣ, ದೇವೇಗೌಡರಿಗೆ ನಿಮ್ಮ ಹೃದಯದಲ್ಲಿ ಸ್ಥಾನ ಕೊಟ್ಟಿದ್ದೀರಿ. ಅದಕ್ಕಾಗಿಯೇ ಕೆ.ಆರ್.ಪೇಟೆ ಕಂಡರೆ ಅವರಿಗೆ ಹೆಚ್ಚು ಪ್ರೀತಿ ಎಂದು ಸಂತಸ ವ್ಯಕ್ತಪಡಿಸಿದರು.
ಬಿ.ಆರ್.ಪಾಟೀಲ್ ಬಹಳ ಹಿರಿಯರು. ಆರೇಳು ಬಾರಿ ಶಾಸಕರಾಗಿದ್ದವರು.ಈ ಹಿಂದೆ ನಮ್ಮ ಪಕ್ಷದಲ್ಲೇ ಇದ್ದವರು. ಕಾಂಗ್ರೆಸ್‌ನಲ್ಲಿ ಗೆದ್ದಿರುವವರ ಅಸಹಾಯಕತೆ ಬೀದಿಯಲ್ಲಿ ಚರ್ಚೆ ಆಗ್ತಿದೆ. ಈ ಸರ್ಕಾರದಲ್ಲಿ ಸ್ವಪಕ್ಷೀಯ ಶಾಸಕರೇ ಅನುದಾನ ಸಿಕ್ತಿಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಈ ಸರ್ಕಾರದಲ್ಲಿ ಕನಿಷ್ಟ ಮೂಲಭೂತ ಸೌಲಭ್ಯಕ್ಕೂ ಹಣ ಕೊಡ್ತಿಲ್ಲ. ಸಿದ್ದರಾಮಯ್ಯ ಜೊತೆ ನಾನೂ ಕೂಡ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದೆ ಅಂತಾರೆ. ಲಾಟರಿ ಸಿಎಂ ಅಂತಾ ಕಾಂಗ್ರೆಸ್‌ನ ಶಾಸಕರೇ ನಿಮಗೆ ಬಿರುದು ಕೊಟ್ಟಿದ್ದಾರೆ ಎಂದರು.












Click it and Unblock the Notifications