Tour Package: ಪ್ರವಾಸೋದ್ಯಮ ಇಲಾಖೆಯಿಂದ ವಿಶೇಷ ಟೂರ್ ಪ್ಯಾಕೇಜ್ ಘೋಷಣೆ, ಎಲ್ಲಿಂದ-ಎಲ್ಲಿಗೆ?
ಬೆಂಗಳೂರು: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯು ಪ್ರವಾಸಾಸಕ್ತರಿಗೆ ಹಸಿರು ಪರಿಸರದ ಸೌಂದರ್ಯ ಅನುಭವಿಸುವ ಜೊತೆಗೆ ನಾಡಿನ ಐತಿಹಾಸಿಕ ಸ್ಥಳದ ಸಂಸ್ಕೃತಿ, ಕಲೆಗಳ ಮಾಹಿತಿ ತಿಳಿಸಲು ವಿಶೇಷ ಪ್ರವಾಸ ಪ್ಯಾಕೇಜ್ ಘೋಷಿಸಿದೆ. ಜೊತೆಗೆ ಪ್ರವಾಸ ದರದಲ್ಲಿ ಶೇಕಡಾ 20 ರಷ್ಟು ರಿಯಾಯಿತಿ ಸಹ ನೀಡುತ್ತಿದೆ. ಪ್ರವಾಸದ ಮಾರ್ಗ, ಸ್ಥಳ, ಟಿಕೆಟ್ ದರ, ಸಂಚಾರ ಸಮಯ, ಪ್ಯಾಕೇಜ್ ಬುಕ್ಕಿಂಗ್ ಹೇಗೆ ಎಂಬ ಮಾಹಿತಿ ಇಲ್ಲಿದೆ.
ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಬೆಂಗಳೂರಿನಿಂದ ಈ ಪ್ರವಾಸದ ಪ್ರಯಾಣ ಆರಂಭಿಸಲಿದೆ. ದಕ್ಷಿಣ ಭಾರತದ ಮನಮೋಹಕ ಬೆಟ್ಟ ಪ್ರದೇಶಗಳ ಸೌಂದರ್ಯ ಒಂದೇ ಪ್ರವಾಸದಲ್ಲಿ ಮೈಸೂರು-ಊಟಿ-ಕೊಡೈಕನಾಲ್ ನೋಡಿಕೊಂಡು ಬರುವ ಅವಕಾಶ ಕಲ್ಪಿಸಿದೆ. ಹಸಿರು ಬೆಟ್ಟಗಳು, ತಂಪಾದ ವಾತಾವರಣ, ಸುಂದರ ತಾಣಗಳನ್ನು ಈ ಪ್ಯಾಕೇಜ್ ಒಳಗೊಡಿದೆ. ಆರಾಮದಾಯಕ ಪ್ರಯಾಣ ಹಾಗೂ ಮಾರ್ಗದರ್ಶಕರು ಇರಲಿದ್ದಾರೆ. ಆನ್‌ಲೈನ್ ಮೂಲಕ ಈ ಪ್ಯಾಕೇಜ್ ಬುಕ್ ಮಾಡಬಹುದಾಗಿದೆ.

ಪ್ರವಾಸಿಗರನ್ನು ವಿಶೇಷವಾಗಿ ಆಕರ್ಷಿಸುವ ಸಾಂಸ್ಕೃತಿಕ ರಾಜಧಾನಿ ಮೈಸೂರು ನಗರದ ವೈಭವವನ್ನು ನೋಡಲು ಪ್ರಪಂಚದಾದ್ಯಂತದ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಇತಿಹಾಸಪೂರ್ವ ತಾಣಗಳು, ಸ್ಮಾರಕಗಳು, ವಸ್ತು ಸಂಗ್ರಹಾಲಯಗಳು, ಕೋಟೆಗಳು, ದೇವಾಲಯಗಳು, ಮಸೀದಿಗಳು, ಚರ್ಚುಗಳು ಮತ್ತು ಮೃಗಾಲಯಗಳು ಇಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ.
ಊಟಿಯು ತನ್ನ ಚಹಾ ತೋಟಗಳಿಗೆ ಹೆಚ್ಚು ಪ್ರಸಿದ್ಧವಾಗಿದೆ. ಧೂಳು ಮತ್ತು ಎಲೆ; ಕಪ್ಪು, ಹಸಿರು, ಕಪ್ಪು ಮತ್ತು ಬಿಳಿ ಪ್ರಭೇದ, ಮಸಾಲಾ, ಮಲ್ಲಿಗೆ, ಏಲಕ್ಕಿ ಮತ್ತು ಚಾಕೊಲೇಟ್‌ನಂತಹ ಸುವಾಸನೆಗಳು ಇಲ್ಲಿನ ಕೇಂದ್ರ ಬಿಂದು. ಇನ್ನೂ ಕೊಡೈಕೆನಾಲ್ ಅನ್ನು "ಗಿರಿಧಾಮಗಳ ರಾಜಕುಮಾರಿ" ಎಂದು ಕರೆಯಲಾಗುತ್ತದೆ. ಈ ಎಲ್ಲ ಸ್ಥಳಗಳು ಜನಪ್ರಿಯ ಹಾಗೂ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣಗಳಾಗಿವೆ.
ಡಿಲಕ್ಸ್ ಕೋಚ್ ಬಸ್ ವ್ಯವಸ್ಥೆ : ಈ ಸ್ಥಳಗಳಿಗೆ ಪ್ರವಾಸೋದ್ಯಮ ಇಲಾಖೆಯು ಬೆಂಗಳೂರಿನಿಂದ ಡಿಲಕ್ಸ್ ಕೋಚ್ ಬಸ್ ಮೂಲಕ ಪ್ರವಾಸಿಗರನ್ನು ಕರೆದೊಯ್ಯಲಿದೆ. ಮೈಸೂರಿನಲ್ಲಿರುವ ಹೋಟೆಲ್ ಮಯೂರ ಹೊಯ್ಸಳದಲ್ಲಿ ತಂಗಲು ವ್ಯವಸ್ಥೆ ಮಾಡಿದೆ. ಊಟಿಯಲ್ಲಿರುವ ಹೋಟೆಲ್ ಮಯೂರ ಸುದರ್ಶನ ಅಥವಾ ಅಂತಹುದೇ ಹೋಟೆಲ್ ಎಸ್ ವಿ ಇಂಟರ್ನ್ಯಾಷನಲ್ (ಕೊಡೈಕೆನಲ್) ಪ್ರವಾಸಿಗರಿಗೆ ಅಗತ್ಯ ವ್ಯವಸ್ಥೆ ಒದಗಿಸಲಿದೆ.
ಪ್ರವಾಸ ಬಸ್ ಮಾರ್ಗ/ಸ್ಥಳಗಳು: 4 ದಿನ ದಿನ 3 ರಾತ್ರಿ ಟೂರ್ ಪ್ಯಾಕೇಜ್ ಇದಾಗಿದ್ದು, ಬೆಂಗಳೂರಿನ ಬಿಎಂಟಿಸಿ ಬಸ್ ನಿಲ್ದಾಣ, ಯಶವಂತಪುರದಿಂದ ಬೆಳಗ್ಗೆ 6.30ಕ್ಕೆ ಹೊರಡುತ್ತದೆ. ಇಲ್ಲಿಂದ ನೇರವಾಗಿ ಶ್ರೀರಂಗ ಪಟ್ಟಣದ ಟಿಪ್ಪು ದರಿಯಾ ದೌಲತ್, ಶ್ರೀರಂಗನಾಥ ಸ್ವಾಮಿ ದೇವಸ್ಥಾನ, ಸೇಂಟ್ ಫಿಲೋಮಿಯಾ ಚರ್ಚ್, ಅರಮನೆ ಚಾಮುಂಡಿ ಬೆಟ್ಟ, ಮೃಗಾಲಯ, ಬೃಂದಾವನ ಉದ್ಯಾನ, ನಂಜನಗೂಡು, ಊಟಿ ಮತ್ತು ಕೊಡೈಕೆನಲ್ ಗೆ ತಲುಪುತ್ತದೆ.
ಪ್ರವಾಸಿಗಳ ಜೊತೆ ಮಾರ್ಗದರ್ಶಿ: ವಿಶೇಷವೆಂದರೆ ಎಲ್ಲಾ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಲು ಸಾಕಷ್ಟು ಸಮಯ ನೀಡಲಾಗುತ್ತದೆ. ಜೊತೆಗೆ ಪ್ರವಾಸಿ ತಾಣಗಳ ಬಗ್ಗೆ ಪರಿಪೂರ್ಣ ಜ್ಞಾನ ಹೊಂದಿದ ವೃತ್ತಿಪರ ಮಾರ್ಗದರ್ಶಕರು ಪ್ರವಾಸಿಗರೊಂದಿಗೆ ಇರುವಂತೆ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಪ್ರಕೃತಿ, ಐತಿಹಾಸಿಕ ಸ್ಥಳ ನೋಡುವ ಜೊತೆಗೆ ಅವುಗಳ ಹಿನ್ನೆಲೆ, ಮಹತ್ವ, ಖ್ಯಾತಿಯನ್ನು ತಿಳಿದುಕೊಳ್ಳಬಹುದು. ಈ ಮೂಲಕ ಪ್ರವಾಸವನ್ನು ಯಶಸ್ವಿಯಗೊಳಿಸಬಹುದು.
ಟಿಕೆಟ್ ದರ/ರಿಯಾಯಿತಿ: ಮೈಸೂರು-ಊಟಿ-ಕೊಡೈಕೆನಾಲ್ ಪ್ರವಾಸ ಪ್ಯಾಕೇಜ್ ಗೆ ಒಬ್ಬರಿಗೆ ತಲಾ ₹9,310 ರೂಪಾಯಿ ಇದೆ. ಹಿರಿಯ ನಾಗರಿಕಿಗೆ ದರದಲ್ಲಿ ಶೇಕಡಾ 20ರಷ್ಟು ರಿಯಾಯಿತಿ ಇದೆ. ರಾಜ್ಯ, ಕೇಂದ್ರ ಮತ್ತು ಪಿಎಸ್‌ಯು ಉದ್ಯೋಗಿಗಳಿಗೆ ಎಲ್‌ಟಿಸಿ ಸೌಲಭ್ಯಗಳು ಸಿಗುತ್ತವೆ. ಪ್ಯಾಕೇಜ್ ಬುಕ್ ಮಾಡಲು ನೀವು ಇಲ್ಲಿರುವ ಅಧಿಕೃತ https://kstdc.co/tour_packages/mysuru-ooty-kodaikanal/ ಲಿಂಕ್ ಗೆ ಭೇಟಿ ನೀಡಬೇಕು. ಹೆಚ್ಚಿನ ಮಾಹಿತಿಗೆ 804 334 4334
-
Train Delay: ರೈಲು ಪ್ರಯಾಣಿಕರೇ ಎಚ್ಚರ! ನಾಳೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದಲ್ಲಿ ಭಾರಿ ವ್ಯತ್ಯಯ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ!












Click it and Unblock the Notifications