KSRTC: ನವೆಂಬರ್‌ನಿಂದ ಎಲ್ಲ ಬಸ್‌ಗಳಲ್ಲಿ 'ಕ್ಯಾಶ್‌ಲೆಸ್ ವ್ಯವಸ್ಥೆ' ಜಾರಿ
ಬೆಂಗಳೂರು, ಅಕ್ಟೋಬರ್ 04: ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯು ವಿವಿಧ ಬಸ್‌ಗಳಲ್ಲಿ ನಗರ ರಹಿತ ವಹೀವಾಟನ್ನು ಪ್ರಾಯೋಗಿಕವಾಗಿ ಆರಂಭಿಸಿತ್ತು. ಇದೀಗ ಕ್ಯಾಶ್‌ಲೆಸ್ ಸೌಲಭ್ಯ, ಹೊಸ ಹ್ಯಾಂಡೆಲ್ಡ್ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರ (ETM) ಮಷಿನ್ ಬಳಕೆಯನ್ನು ನವೆಂಬರ್‌ನಿಂದ ಎಲ್ಲ ಬಸ್‌ಗಳಲ್ಲಿ ಜಾರಿಗೆ ತರಲು ನಿರ್ಧರಿಸಿದೆ. ಒಂದಷ್ಟು ವಿಳಂಬದ ಬಳಿಕ ಬಸ್‌ಗಳಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವ ನಗರ ರಹಿತ ಸೌಲಭ್ಯವೊಂದು ಈ ಮುಂದಿನ ತಿಂಗಳು ಅನುಷ್ಠಾನಗೊಳ್ಳಲಿದೆ.
ರಾಜ್ಯ ಸಾರಿಗೆ ಇಲಾಖೆಯು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಯುಪಿಐ, ಕ್ರೆಡಿಟ್ ಇಲ್ಲವೇ ಡೆಬಿಟ್ ಕಾರ್ಡ್ ಬಳಸಿ ನೀವು ಟಿಕೆಟ್ ಹಣ ಪಾವತಿಸಬಹುದಾಗಿದೆ. ಈ ನಗದು ರಹಿತ ವ್ಯವಸ್ಥೆಯು ನವೆಂಬರ್‌ನಿಂದ ರಾಜ್ಯದ 8000ಕ್ಕೂ ಅಧಿಕ ಬಸ್‌ಗಳಲ್ಲಿ ಅಳವಡಿಕೆ ಆಗಲಿದೆ. ಇದರಿಂದ ಚಿಲ್ಲರೆ ಸಮಸ್ಯೆ ಜೊತೆಗೆ ಒಂದಷ್ಟು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಾಲಿ ಒಪ್ಪಂದ ಅಕ್ಟೋಬರ್‌ಗೆ ಅಂತ್ಯ
KSRTC ಅಧಿಕಾರಿಗಳು ಹೇಳುವ ಪ್ರಕಾರ, ಉದ್ದೇಶದಂತೆ ಈ ಸೌಲಭ್ಯವನ್ನು ಇದೇ ವರ್ಷ ಜೂನ್ ತಿಂಗಳಿನಲ್ಲಿ ಆರಂಭವಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ನವೆಂಬರ್‌ನಿಂದ ಶುರುವಾಗುತ್ತಿದೆ. ಎಲೆಕ್ಟ್ರಿಕ್ ಸಾಧನ ಮೂಲಕ ಟಿಕೆಟ್ ವಿತರಣೆ ಸಾಧನಗಳ ವಿಚಾರದಲ್ಲಿ ಈಗಾಗಲೇ ಮಾಡಿಕೊಂಡ ಒಪ್ಪಂದ ಇದೇ ವರ್ಷ ಅಕ್ಟೋಬರ್‌ಗೆ ಅಂತ್ಯಗೊಳ್ಳಲಿದೆ. ಈ ಕಾರಣದಿಂದ ಸೌಲಭ್ಯ ಜನರಿಗೆ ಮುಕ್ತಗೊಳಿಸುವುದು ತಡವಾಗಿದೆ.
ನವೆಂಬರ್ ಹೊತ್ತಿಗೆ ನಗದು ರಹಿತ ಸೇವೆ ನೀಡಲು ಹೊಸ ಹ್ಯಾಂಡೆಲ್ಡ್ ಎಲೆಕ್ಟ್ರಾನಿಕ್ ಮಷಿನ್ ಅನ್ನು ನಾಲ್ಕು ನಿಗಮಗಳಿಗೆ ನೀಡಲಾಗುತ್ತದೆ. ಇದಾದ ಮೇಲೆ ಪ್ರತಿ ಬಸ್‌ನಲ್ಲಿ ಈ ಸೌಲಭ್ಯ ಲಭ್ಯವಾಗುತ್ತದೆ. ಆಗ ಪ್ರಯಾಣಿಕರು ನಗದು ಚಿಲ್ಲರೆ ಹಣ ಪಾವತಿ, ಯುಪಿಐ, ಕ್ರೆಡಿಟ್, ಡೆಬಿಟ್ ಕಾರ್ಡ್ ಮೂಲಕ ಯಾವುದಾದರು ಒಂದನ್ನು ಬಳಸಿ ಹಣ ನೀಡಿ ಟಿಕೆಟ್ ಪಡೆಯಬಹುದಾಗಿದೆ.
ಹೊಸ ವ್ಯವಸ್ಥೆ ಜಾರಿ ಏಕೆ?
ಜನರಿಗೆ ಇದುವರೆಗೆ ಬಸ್ ಹತ್ತುವಾಗ ಚಿಲ್ಲರೆ ಒಯ್ಯುವುದು, ಟಿಕೆಟ್ ಬೆಲೆಗೆ ತಕ್ಕ ನಗದು ಹಣ ನೀಡಬೇಕೆಂಬ ಆತಂಕ ಇರುತ್ತದೆ. ಕೆಲವೊಮ್ಮೆ ಹೆಚ್ಚಿನ ಹಣ ನೀಡಿರುತ್ತಾರೆ. ಚಿಲ್ಲರೆಯನ್ನು ಟಿಕೆಟ್ ಹಿಂದೆ ನಿರ್ವಾಹಕರು ನಮೂದಿಸಿರುತ್ತಾರೆ. ಆದರೂ ಮರೆತು ಚಿಲ್ಲರೆ ಇಸಿದುಕೊಳ್ಳದೇ ಮರೆ ಬಿಡುತ್ತಾರೆ. ಈ ಎಲ್ಲ ತಲೆನೋವುಗಳಿಗೆ KSRTC ಎಲ್ಲ ಬಸ್‌ಗಳಲ್ಲಿ ಮುಕ್ತಿ ದೊರೆಯಲಿದೆ.
ಸದ್ಯ ಕೆಎಸ್‌ಆರ್‌ಟಿಸಿ, ವಾಯುವ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೆಲವು ಬಸ್‌ಗಳಲ್ಲಿ ನಗದು ರಹಿತ ಟಿಕೆಟ್ ವಿತರಣೆ, ಪಾವತಿ ಈಗಾಗಲೇ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ. ಅಧಿಕೃತವಾಗಿ ಎಲ್ಲ ಬಸ್‌ಗಳಲ್ಲಿ ಮುಂದಿನ ತಿಂಗಳು ಜಾರಿಗೆ ಬರಲಿದೆ.
ಹೊಸ ಮಷಿನ್ ಬಳಕೆ, ಪ್ರಯೋಜನ ಹೇಗೆ?
ಈ ಎಲೆಕ್ಟ್ರಾನಿಕ್ ಟಿಕೆಟ್ ಮಷಿನ್ ಬಳಕೆ ಬಗ್ಗೆ ಈಗಾಗಲೇ ನಿರ್ವಾಹಕರಿಗೆ, ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಪ್ರಯಾಣಿಕರು ನೀವು ತೆರಳಬೇಕಾದ ಸ್ಥಳದ ಹೆಸರು ಹೇಳಬೇಕು. ನಿರ್ವಾಹಕರು ಈ ಮಷಿನ್‌ನಲ್ಲಿ ನೀವು ಹತ್ತಿದ ಮತ್ತು ಇಳಿಯುವ ಸ್ಥಳ ಸಮೂದಿಸುತ್ತಾರೆ. ಬಳಿಕ ಮಷಿನ್ ಪರದೇ ಮೇಲೆ ದೂರ, ಪ್ರಯಾಣದ ಟಿಕೆಟ್ ಹಣ ಮತ್ತು ಕ್ಯೂಆರ್ ಕೋಡ್ ಪ್ರದರ್ಶನವಾಗುತ್ತದೆ. ನೀವು ಯುಪಿಐ, ಇತರೆ ಯಾವುದಾದರೂ ಟಿಜಿಟಲ್ ವಿಧಾನ ಮೂಲಕ ಪಾವತಿಸಬೇಕು. ಇದರಿಂದ ಪ್ರಯಾಣಿಕರಿಗೆ ನಗದು ತರುವ ಅಗತ್ಯ ಇರುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ..












Click it and Unblock the Notifications