KSRTC: ಮುಷ್ಕರ ಮಾಡಿದ್ದ ಸಾರಿಗೆ ನೌಕರರಿಗೆ ಸಿಹಿ ಸುದ್ದಿ ಕೊಟ್ಟ ರಾಮಲಿಂಗಾ ರೆಡ್ಡಿ

ಬೆಂಗಳೂರು, ಮಾರ್ಚ್ 07: ವೇತನ ತಾರತಮ್ಯ ನಿವಾರಣೆ ಸೇರಿದಂತೆ ವರ್ಷಗಳಿಂದಲೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಈ ಹಿಂದೆ ಮುಷ್ಕರ ಮಾಡಿದ್ದ ನಾಲ್ಕು ಸಾರಿಗೆ ನೌಕರರ ಸಂಘಟನೆಗಳ ಜತೆ ಸಾರಿಗೆ ರಾಮಲಿಂಗಾ ರೆಡ್ಡಿ ಅವರು ಗುರುವಾರ ಮಹತ್ವದ ಸಭೆ ನಡೆಸಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಎಸ್ ಆರ್ ಶ್ರೀನಿವಾಸ್ (ವಾಸು) ರವರ ಉಪಸ್ಥಿತಿಯಲ್ಲಿ ಹಾಗೂ ಸಾರಿಗೆ ಸಚಿವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಸಾರಿಗೆ ನಿಗಮದ 11 ಕಾರ್ಮಿಕ ಸಂಘಟನೆಗಳ ಮುಖಂಡರೊಂದಿಗೆ ಸಭೆ ನಡೆಯಿತು. ಸಚಿವರು ಕುಂದು ಕೊರತೆಗಳನ್ನು ಆಲಿಸಿ ಸಿಹಿ ಸುದ್ದಿ ನೀಡಿದರು.

KSRTC Transport Employees Rs 220 Crore Pending Amount Credit Soon Says Ramalinga Reddy

220 ಕೋಟಿ ಬಾಕಿ ಹಣ ಶೀಘ್ರ ಜಮೆ?

ಸಭೆಯಲ್ಲಿ ಸಮಸ್ಯೆ ಆಲಿಸಿ ಮಾತನಾಡಿದ ರಾಮಲಿಂಗಾ ರೆಡ್ಡಿ ಅವರು, ಅಂತಿಮವಾಗಿ 01.01.2020 ರಿಂದ 28.02.2023ರ ವರೆಗಿನ ನಿವೃತ್ತಿ ಹೊಂದಿರುವ ಹಾಗೂ ಸಂಸ್ಥೆಯಿಂದ ಹೊರಗೆ ಹೋಗಿರುವ ಎಲ್ಲಾ ಅಂದಾಜು 10000 ನೌಕರರಿಗೂ ಶೇ.15 ರಷ್ಟು ವೇತನ ಹೆಚ್ಚಳ ಮಾಡಲು ಸುಮಾರು ರೂ. 220 ಕೋಟಿ ಬಾಕಿ ಹಣ ನೀಡುವುದಾಗಿ ಅವರು ಭರವಸೆ ನೀಡಿದರು.

KSRTC ವ್ಯವಸ್ಥಾಪಕ‌ ನಿರ್ದೇಶಕರಿಂದ ಕೂಡಲೇ ಆದೇಶ ಹೊರಡಿಸಲು ಸೂಚಿಸುತ್ತೇನೆ ಎಂದರು. ಈ‌ ಕ್ರಮಕ್ಕಾಗಿ ಎಲ್ಲಾ ಸಂಘಟನೆಗಳು ವರ್ಷ ವ್ಯಕ್ತಪಡಿಸಿ, ಮಾನ್ಯ ಸಾರಿಗೆ ಸಚಿವರು, ಮಾನ್ಯ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯನ್ನು ಅಭಿನಂದಿಸಿದರು.

ಆರ್ಥಿಕ ಪರಿಸ್ಥಿತಿ ನೋಡಿ ಸೂಕ್ತ ಕ್ರಮ

01.01.2024 ರಿಂದ ಮಾಡಬೇಕಾಗಿರುವ ವೇತನ ಹೆಚ್ಚಳ‌ದ ಬಗ್ಗೆ ಮಾತನಾಡಿದ ಸಚಿವರು, ಮುಂದಿನ‌ ದಿನಗಳಲ್ಲಿ ಹೊಸ ಬಸ್ಸುಗಳ ಸೇರ್ಪಡೆಯಾಗಿ ಆದಾಯ ವೃದ್ಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಆರ್ಥಿಕ ಪರಿಸ್ಥಿತಿಯನ್ನು ಗಣನೆಗೆ ತೆಗದುಕೊಂಡು ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದರು.

KSRTC Transport Employees Rs 220 Crore Pending Amount Credit Soon Says Ramalinga Reddy

ಇಂದು ಮೊದಲ ಸಭೆಯಾಗಿರುವುದರಿಂದ ಮಹತ್ವದ ಆದೇಶ ಹೊರಬಿದ್ದಿದೆ. ಮುಂದಿನ ಸಭೆಗಳಲ್ಲಿ ಹಲವು ಬೇಡಿಕೆಗಳ ಬಗ್ಗೆ ಸಕಾರಾತ್ಮಕವಾಗಿ ಚರ್ಚೆ ಮಾಡಿ ಮುಂದುವರಿಯೋಣ. ಇದು ನಿಮ್ಮ ಸಂಸ್ಥೆ ಈ‌ ಸಂಸ್ಥೆಗಳನ್ನು‌ ಉಳಿಸಿ‌ ಬೆಳೆಸಿಕೊಂಡು ಹೋಗಬೇಕಿರುವುದು ನಮ್ಮೆಲ್ಲರ ಜವಾಬ್ದಾರಿ.

ಸಾರಿಗೆ ಸೇವೆಗಾಗಿ ನೌಕರರ ಸಹಕಾರ ಕೋರಿದ ಸಚಿವ

ಸಾರಿಗೆ ಸಂಸ್ಥೆ ರಕ್ಷಣೆ ಜೊತೆಗೆ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಿ ಸಂಸ್ಥೆಯನ್ನು ಮತ್ತಷ್ಟು ಅಭಿವೃದ್ಧಿಯ ಪಥದಲ್ಲಿ ತೆಗೆದುಕೊಂಡು ಹೋಗಲು ತಮ್ಮೆಲ್ಲರ ಸಹಕಾರ ಬೇಕು ಎಂದು ಸಚಿವರು ಕೋರಿದರು.

ಸಭೆಯಲ್ಲಿ ಎಲ್ಲಾ ಸಂಘಟನೆಗಳು ತಮ್ಮ ತಮ್ಮ ಬೇಡಿಕೆಗಳನ್ನು‌ ಮತ್ತು ಅಭಿಪ್ರಾಯಗಳನ್ನು ಮಂಡಿಸಿದರು. ಮುಖ್ಯವಾಗಿ 01.01.2020 ರಿಂದ 28.02.2023 ರವರೆಗಿನ ವೇತನ ಬಾಕಿ ಹಣ, 01.01.2024 ರಿಂದ ಮೂಲ ವೇತನ‌ ಹೆಚ್ಚಳ ಹಾಗೂ 01.01.2020 ರಿಂದ 28.02.2023ರ ವರೆಗಿನ ವೇತನ ಹೆಚ್ಚಳದ ಬಾಕಿಯನ್ನು ನಿವೃತ್ತ ಹಾಗೂ ಇತರೆ ಕಾರಣಗಳಿಂದ ಸಂಸ್ಥೆಗಳಿಂದ ಹೊರ ಹೋಗಿರುವ ನೌಕರರ ಹಾಗೂ ಇತರೆ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಚರ್ಚಿಸಿದರು.

ಸಭೆಯಲ್ಲಿ KSRTC ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್, BMTC ವ್ಯವಸ್ಥಾಪಕ ನಿರ್ದೇಶಕ ಆರ್. ರಾಮಚಂದ್ರನ್, NWKRTC ವ್ಯವಸ್ಥಾಪಕ ನಿರ್ದೇಶಕ (ಹಿರಿಯ ಶ್ರೇಣಿ) ಎಂ.ರಾಚಪ್ಪ , KSRTC ನಿರ್ದೇಶಕಿ ಡಾ. ಕೆ ನಂದಿನಿದೇವಿ, ಸಾರಿಗೆ ನಿಗಮಗಳ ವಿವಿಧ ಅಧಿಕಾರಿಗಲು, ಮುಖ್ಯಸ್ಥರು ಉಪಸ್ಥಿತರಿದ್ದರು.

ನಿವೃತ್ತಿ ಹೊಂದಿದ ಎಲ್ಲ ನೌಕರರಿಗೆ ಬಾಕಿ ವೇತನ ಬಿಡುಗಡೆ ಮಾಡಲಾಗುವುದು ಎಂದಿರುವ ಸಚಿವರ ಹೇಳಿಕೆಗೆ ಹಾಲಿ ನೌಕರರಲ್ಲಿ ಕೆಲವು ಅಸಮಾಧಾನ ಹೊರ ಹಾಕಿದ್ದಾರೆ. ಹಾಲಿ ನೌಕರರಿಗೆ ಇದರಿಂದ ಅನ್ಯಾಯ ಎಂದು ಆರೋಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+