ಕರ್ನಾಟಕದಲ್ಲಿ ಮೇ 29ರಿಂದ 3,500 ಸರ್ಕಾರಿ ಬಸ್‌ಗಳ ಸಂಚಾರ

ಬೆಂಗಳೂರು, ಮೇ 28 : ಶುಕ್ರವಾರದಿಂದ ರಾಜ್ಯದಲ್ಲಿ 3500 ಬಸ್‌ಗಳನ್ನು ಓಡಿಸಲಾಗುತ್ತದೆ ಎಂದು ಕೆಎಸ್ಆರ್‌ಟಿಸಿ ಹೇಳಿದೆ. ಕರ್ನಾಟಕದಲ್ಲಿ ಖಾಸಗಿ ಬಸ್‌ಗಳ ಸಂಚಾರಕ್ಕೆ ಇನ್ನೂ ಅನುಮತಿ ನೀಡಿಲ್ಲ.

ಗುರುವಾರ 3285 ಬಸ್‌ಗಳು ರಾಜ್ಯದಲ್ಲಿ ಸಂಚಾರ ನಡೆಸಿವೆ. 104024 ಜನರು ಸಂಚಾರ ನಡೆಸಿದ್ದಾರೆ. ಬೆಂಗಳೂರು ನಗರದಿಂದ 940 ಬಸ್ ಸಂಚಾರ ನಡೆಸಿದ್ದು, 13070 ಜನರು ಪ್ರಯಾಣಿಸಿದ್ದಾರೆ.

ಮೇ 19ರಂದು ಕರ್ನಾಟಕದಲ್ಲಿ ಸರ್ಕಾರಿ ಬಸ್‌ಗಳ ಸಂಚಾರ ಆರಂಭವಾಗಿದೆ. ಭಾನುವಾರ ಹೊರತುಪಡಿಸಿ ಉಳಿದ ದಿನ ಬಸ್‌ಗಳು ಬೆಳಗ್ಗೆ 7ರಿಂದ ಸಂಜೆ 7ಗಂಟೆಯ ತನಕ ಸಂಚಾರ ನಡೆಸುತ್ತವೆ.

 KSRTC To Run 3500 Bus From May 29 In Karnataka

ಗುರುವಾರದ ತನಕ 25109 ಬಸ್‌ಗಳು ಸಂಚಾರ ನಡೆಸಿವೆ. 767285 ಬಸ್‌ಗಳು ಸಂಚಾರ ನಡೆಸಿವೆ ಎಂದು ಕೆಎಸ್ಆರ್‌ಟಿಸಿ ಹೇಳಿದೆ. ಬೆಂಗಳೂರು ನಗರದಿಂದಲೇ ಇದುವರೆಗೂ 6796 ಬಸ್‌ಗಳು ಸಂಚಾರ ನಡೆಸಿದ್ದು, 107667 ಜನರು ಪ್ರಯಾಣ ನಡೆಸಿದ್ದಾರೆ.

ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸಿಕೊಂಡು ಸಂಚಾರ ನಡೆಸಲು ಅವಕಾಶ ನೀಡಲಾಗಿದೆ. ಗುರುವಾರ 5149 ಜನರು ಟಿಕೆಟ್ ಬುಕ್ ಮಾಡಿದ್ದರು. ಶುಕ್ರವಾರ ಸಂಚಾರ ನಡೆಸಲು 3892 ಜನರು ಟಿಕೆಟ್ ಕಾಯ್ದಿರಿಸಿದ್ದಾರೆ.

ಮೇ 19ರಿಂದ ಗುರುವಾರದ ತನಕ 58046 ಜನರು ಮುಂಗಡ ಟಿಕೆಟ್ ಬುಕ್ ಮಾಡಿಕೊಂಡು ಸಂಚಾರ ನಡೆಸಿದ್ದಾರೆ ಎಂದು ಕೆಎಸ್ಆರ್‌ಟಿಸಿ ಹೇಳಿದೆ. ಭಾನುವಾರ ರಾಜ್ಯದಲ್ಲಿ ಲಾಕ್ ಡೌನ್ ನಿಯಮದಲ್ಲಿ ವಿನಾಯಿತಿ ಇರುವುದಿಲ್ಲ. ಆದ್ದರಿಂದ, ಅಂದು ಬಸ್ ಸಂಚಾರ ಇರುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+