KSRTC: ಹಾಸನಾಂಬ ಜಾತ್ರೆಗೆ ವಿಶೇಷ ಪ್ರವಾಸ ಪ್ಯಾಕೇಜ್ ಘೋಷಣೆ, ಮಾರ್ಗ-ಟಿಕೆಟ್ ದರ
KSRTC Tour Package: ರಾಜ್ಯದ ಪ್ರತಿಷ್ಠಿತ ದೇವಾಲಯಗಳಲ್ಲಿ ಒಂದಾಗಿರುವ ವರ್ಷಕ್ಕೆ ಒಂದು ಬಾರಿ ಮಾತ್ರವೇ ದರ್ಶನ ನೀಡುವ ಹಾಸನದ ಪ್ರಸಿದ್ಧ ಹಾಸನಾಂಬ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ-2025 ಜರುಗಲಿದೆ. ಈ ಪ್ರಯುಕ್ತ ಹಾಸನಾಂಬ ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ವತಿಯಿಂದ ವಿಶೇಷ ಪ್ಯಾಕೇಜ್ ಪ್ರವಾಸ ಯೋಜನೆಗಳನ್ನು ಘೋಷಿಸಲಾಗಿದೆ.
ಈ ಪ್ಯಾಕೇಜ್‌ಗಳು ಅಕ್ಟೋಬರ್ 10 ರಿಂದ 22 ರವರೆಗೆ ಹಮ್ಮಿಕೊಳ್ಳಲಾಗಿದೆ.ಹಾಸನ ಹಾಗೂ ಸುತ್ತಮುತ್ತಲಿನ ಪ್ರಮುಖ ಧಾರ್ಮಿಕ ಮತ್ತು ಪ್ರವಾಸಿ ತಾಣಗಳನ್ನು ಒಳಗೊಂಡಿವೆ. ಒಟ್ಟು ಈ ಪ್ಯಾಕೇನ್‌ನಲ್ಲಿ 10 ಪ್ಯಾಕೇಜ್ ಮಾರ್ಗಗಳು ಇವೆ. ನಿಗಮದ ವತಿಯಿಂದ ಪ್ರಯಾನಿಕರಿಗೆ ಉತ್ತಮ ಮತ್ತು ಆರಾಮದಾಯಕ ಪ್ರಯಾಣದ ಅನುಭವಕ್ಕಾಗಿ 8 ಕರ್ನಾಟಕ ಸಾರಿಗೆ ಬಸ್‌ಗಳು, 2 ಅಶ್ವಮೇಧ ಮತ್ತು 2 ವೋಲ್ವೋ ಬಸ್‌ಗಳು ಕಾರ್ಯಾಚರಣೆ ಮಾಡಲು ಸಜ್ಜಾಗಿವೆ.

ಪ್ರವಾಸದಲ್ಲಿ ಪ್ರೇಕ್ಷಣೀಯ ಸ್ಥಳಗಳ ವಿವರ
ಪ್ರತಿ ಪ್ಯಾಕೇಜ್ ಹಾಸನ ನಗರ ಬಸ್ ನಿಲ್ದಾಣದಿಂದ ಪ್ರಾರಂಭವಾಗಲಿದ್ದು, ಶ್ರೀ ಹಾಸನಾಂಬ ಹಾಗೂ ಸಿದ್ದೇಶ್ವರ ದೇವಾಲಯ, ದೇವಿಗೆರೆ ಕಲ್ಯಾಣಿ, ಕೆಂಚಮ್ಮನ ಹೊಸಕೋಟೆ ದೇವಾಲಯ, ಬೆಲೂರು, ಹಳೇಬೀಡು, ಶ್ರವಣಬೆಳಗೊಳ, ಅರಸೀಕೆರೆ, ಅರಕಲಗೂಡು ಸೇರಿದಂತೆ ಅನೇಕ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಯನ್ನು ಒಳಗೊಂಡಿದೆ. ಕೆಲವು ಪ್ಯಾಕೇಜ್‌ಗಳಲ್ಲಿ ಹಾಸನಾಂಭ ದೇವಿಯ ದರ್ಶನಕ್ಕೆ 1000 ರೂಪಾಯಿ ಟಿಕೆಟ್ ನಿಗಿದ ಮಾಡಲಾಗಿದೆ.
ಬಸ್ ಸಂಚಾರ ಸಮಯ, ಟಿಕೆಟ್ ದರ
ಬಸ್‌ಗಳು ಬೆಳಗ್ಗೆ 6.00 ರಿಂದ 8.00 ಗಂಟೆಯವರೆಗೆ ವಿವಿಧ ಸ್ಥಳಗಳಿಂದ ಹೊರಡಲಿವೆ. ಪ್ರಯಾಣದ ದರಗಳು ಪ್ಯಾಕೇಜ್‌ಗಳ ಪ್ರಕಾರ ನಿಗದಿಯಾಗಿವೆ. ವಯಸ್ಕರಿಗೆ 375 ರೂಪಾಯಿಯಿಂದ 2,500 ರೂಪಾಯಿ ವರೆಗೆ ಪ್ಯಾಕೇಜ್ ದರ ಇದೆ. ಮಕ್ಕಳಿಗೆ ರೂ.275 ರಿಂದ ರೂ.2,200 ವರೆಗೆ ನಿಗದಿ ಮಾಡಲಾಗಿದೆ ಎಂದು ನಿಗಮ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರವಾಸಿಗರು ಇಲ್ಲಿಗೆ ಸಂಪರ್ಕಿಸಿ
ಭಕ್ತರು ಹಾಗೂ ಪ್ರವಾಸಿಗರು ಈ ಸೇವೆಗಳ ಪ್ರಯೋಜನ ಪಡೆಯಲು ಕೆಳಗಿನ ದೂರವಾಣಿ ಸಂಖ್ಯೆ 7760990518 ಗೆ 7760990519, 7760990520, 7760990523 ಗೆ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ ಕೆಎಸ್‌ಆರ್‌ಟಿಸಿ ಅಧಿಕೃತ ವೆಬ್‌ಸೈಟ್ http://www.ksrtc.in ಭೇಟಿ ನೀಡುವಂತೆ ಹಾಸನ ವಿಭಾಗದ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications