ಕೆಎಸ್ಆರ್‌ಟಿಸಿ ನೇಮಕಾತಿ : ಅರ್ಜಿ ಸಲ್ಲಿಸಲು 1 ದಿನ ಬಾಕಿ

Posted By:
Subscribe to Oneindia Kannada

ಬೆಂಗಳೂರು, ಜನವರಿ 16 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ನಿಗಮದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಫೆಬ್ರವರಿ 4, 2016 ಅಂತಿಮ ದಿನ.

ಆಯ್ಕೆಯಾದ ಅಭ್ಯರ್ಥಿಗಳನ್ನು ಬೆಂಗಳೂರು/ಹಾಸನ, ಬೆಂಗಳೂರು ಕೇಂದ್ರೀಯ, ರಾಮನಗರ, ಮಂಡ್ಯ, ಮೈಸೂರು ನಗರ ಸಾರಿಗೆ, ಮೈಸೂರು ಗ್ರಾಮಾಂತರ, ಚಾಮರಾಜನಗರ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ತುಮಕೂರು, ಚಿಕ್ಕಮಗಳೂರು, ಮಂಗಳೂರು, ಪುತ್ತೂರು ವಿಭಾಗಗಳ ಯಾವುದೇ ಘಟಕ ಅಥವ ಕಚೇರಿಗೆ ನಿಯೋಜಿಸಲಾಗುತ್ತದೆ.[441 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಮೆಸ್ಕಾಂ]

ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಇಲಾಖಾ ಅಭ್ಯರ್ಥಿಗಳು ವಯೋಮಿತಿ ವಿನಾಯಿತಿಯನ್ನು ಹೊರತುಪಡಿಸಿ, ಉಳಿದೆಲ್ಲಾ ಷರತ್ತುಗಳ ವಿಷಯದಲ್ಲಿ ಇತರ ಅಭ್ಯರ್ಥಿಗಳ ಜೊತೆ ಸ್ಪರ್ಧಿಸಬೇಕಾಗಿರುತ್ತದೆ. ಅರ್ಜಿಯನ್ನು www.ksrtcjobs.com ವೆಬ್ ಸೈಟ್‌ಗೆ ಭೇಟಿ ನೀಡುವ ಮೂಲಕ ಮಾತ್ರ ಸಲ್ಲಿಸಬಹುದಾಗಿದೆ.

ಜನವರಿ 14 ರಿಂದ ಫೆಬ್ರವರಿ 4, 2016ರ ವರೆಗೆ ವೆಬ್ ಸೈಟ್ ತೆರೆದಿರುತ್ತದೆ, ಅಷ್ಟರೊಳಗೆ ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿ ಶುಲ್ಕವನ್ನು ಫೆಬ್ರವರಿ 6ರೊಳಗೆ ಅಂಚೆ ಕಚೇರಿಯ ಕೆಲಸದ ವೇಳೆಯಲ್ಲಿ ಪಾವತಿ ಮಾಡಬೇಕು. ನೇಮಕಾತಿ ವಿವರಗಳು ಚಿತ್ರಗಳಲ್ಲಿವೆ....

ಯಾವ-ಯಾವ ಹುದ್ದೆಗಳಿಗೆ ಅರ್ಜಿ ಆಹ್ವಾನ?

ಯಾವ-ಯಾವ ಹುದ್ದೆಗಳಿಗೆ ಅರ್ಜಿ ಆಹ್ವಾನ?

ಕೆಎಸ್‌ಆರ್‌ಟಿಸಿ ಸಹಾಯಕ ಲೆಕ್ಕಿಗ - 71, ಸಹಾಯಕ ಸಂಚಾರ ನಿರೀಕ್ಷಕ 128, ಸಹಾಯಕ ಉಗ್ರಾಣ ರಕ್ಷಕ 34, ಅಂಕಿ-ಅಂಶ ಸಹಾಯಕ 41 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ.

ವಿದ್ಯಾರ್ಹತೆಯ ವಿವರಗಳು

ವಿದ್ಯಾರ್ಹತೆಯ ವಿವರಗಳು

* ಸಹಾಯಕ ಲೆಕ್ಕಿಗ [ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಬಿಕಾಂ ಪದವಿ, ಕಂಪ್ಯೂಟರ್ ಜ್ಞಾನ ಕಡ್ಡಾಯ], ಸಹಾಯಕ ಸಂಚಾರ ನಿರೀಕ್ಷಕ [ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು]

* ಸಹಾಯಕ ಉಗ್ರಾಣ ರಕ್ಷಕ [ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಮೆಕ್ಯಾನಿಕಲ್ /ಆಟೋಮೊಬೈಲ್‌ನಲ್ಲಿ ಇಂಜಿನಿಯರಿಂಗ್ ಡಿಪ್ಲೊಮಾ ಪಡೆದಿರಬೇಕು], ಅಂಕಿ-ಅಂಶ ಸಹಾಯಕ [ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಸಂಖ್ಯಾಶಾಸ್ತ್ರ/ಬಿಸಿಎ/ಬಿಎಸ್‌ಸಿ ಕಂಪ್ಯೂಟರ್ ಸೈನ್ಸ್ ನಲ್ಲಿ ಮೂರು ವರ್ಷದ ಪದವಿ ಹೊಂದಿರಬೇಕು]

ವಯೋಮಿತಿಯ ವಿವರಗಳನ್ನು ನೋಡಿ

ವಯೋಮಿತಿಯ ವಿವರಗಳನ್ನು ನೋಡಿ

ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು 18 ವರ್ಷ ಪೂರ್ಣಗೊಂಡಿರಬೇಕು. ಗರಿಷ್ಠ ವಯೋಮಿತಿ : ಸಾಮಾನ್ಯ ವರ್ಗ 35 ವರ್ಷ, 2ಎ/2ಬಿ/3ಎ/3ಬಿ/ 38 ವರ್ಷ, ಪ.ಜಾತಿ/ಪ.ಪಂ/ಪ್ರವರ್ಗ -1 40 ವರ್ಷಗಳು

ದೇಹದಾರ್ಢ್ಯತೆ ವಿವರ

ದೇಹದಾರ್ಢ್ಯತೆ ವಿವರ

ಸಹಾಯಕ ಸಂಚಾರ ನಿರೀಕ್ಷಕ ಹುದ್ದೆಗೆ ಮಾತ್ರ
ಪುರುಷರು : ಎತ್ತರ 163 ಸೆಂ.ಮೀ, ಮಹಿಳೆ 153 ಸೆಂ.ಮೀ
ತೂಕ : 55 ಕೆ.ಜಿ., ಮಹಿಳೆ 50 ಕೆ.ಜಿ

ಶುಲ್ಕದ ವಿವರಗಳು

ಶುಲ್ಕದ ವಿವರಗಳು

ಸಾಮಾನ್ಯ/2ಎ/2ಬಿ/3ಎ ಮತ್ತು 3ಬಿ 400 ರೂ.ಗಳು, ಪ.ಜಾತಿ/ಪ.ಪಂ/ಪ್ರವರ್ಗ 1/ಮಾಜಿ ಸೈನಿಕ/ಅಶಕ್ತ ಮಾಜಿ ಸೈನಿಕರ ಅವಲಂಬಿತರಿಗೆ 200 ರೂ.ಗಳು. ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ ದೊರೆಯುವ ಚಲನ್ ಪಡೆದುಕೊಂಡು ಎಲೆಕ್ಟ್ರಾನಿಕ್ ಅಂಚೆ ಕಚೇರಿಯಲ್ಲಿ ಇ-ಪೇಮೆಂಟ್ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದಾಗಿದೆ. ಕಡಿಮೆ ಮೊತ್ತದ ಅರ್ಜಿ ಶುಲ್ಕ ಪಾವತಿ ಮಾಡಿದರೆ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.

ಸಾಮಾನ್ಯ ಸಾಮರ್ಥ್ಯ ಪರೀಕ್ಷೆ ವಿವರ

ಸಾಮಾನ್ಯ ಸಾಮರ್ಥ್ಯ ಪರೀಕ್ಷೆ ವಿವರ

ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳು ಸಾಮಾನ್ಯ ಸಾಮರ್ಥ್ಯ ಪರೀಕ್ಷೆಗೆ ಹಾಜರಾಗಬೇಕು. ಪರೀಕ್ಷೆಯು ಸಂವಹನ ನೈಪುಣ್ಯತೆ/ವಿಶ್ಲೇಷಣೆ/ಗಣಿತ/ಸಾಮಾನ್ಯ ಜ್ಞಾನ/ಗಣಕಯಂತ್ರ ಜ್ಞಾನಗಳ ಜೊತೆಗೆ ನಿಗದಿ ಪಡಿಸಿದ ವಿದ್ಯಾರ್ಹತೆ ಮತ್ತು ಹುದ್ದೆಗೆ ಸಂಬಂಧಿಸಿದ ವಿಷಯಗಳನ್ನು ಒಳಗೊಂಡಿರುತ್ತದೆ.

ಸಾಮಾನ್ಯ ಸಾಮರ್ಥ್ಯ ಪರೀಕ್ಷೆ ಕೇಂದ್ರಗಳು

ಸಾಮಾನ್ಯ ಸಾಮರ್ಥ್ಯ ಪರೀಕ್ಷೆ ಕೇಂದ್ರಗಳು

ಸಾಮಾನ್ಯ ಸಾಮರ್ಥ್ಯ ಪರೀಕ್ಷೆಗಳನ್ನು ಬೆಂಗಳೂರು/ಮಂಗಳೂರು/ಮೈಸೂರು/ದಾವಣಗೆರೆ ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಅರ್ಜಿ ಸಲ್ಲಿಸುವ ಸಮಯದಲ್ಲಿ ಸಾಮಾನ್ಯ ಸಾಮರ್ಥ್ಯ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಬೇಕು. ಒಮ್ಮೆ ಆಯ್ಕೆ ಮಾಡಿಕೊಂಡ ಕೇಂದ್ರವನ್ನು ಬದಲಾವಣೆ ಮಾಡಲಾಗುವುದಿಲ್ಲ.

ಅಭ್ಯರ್ಥಿಗಳ ನಿಯೋಜನೆ ವಿವರ

ಅಭ್ಯರ್ಥಿಗಳ ನಿಯೋಜನೆ ವಿವರ

ಆಯ್ಕೆಯಾದ ಅಭ್ಯರ್ಥಿಗಳನ್ನು ಬೆಂಗಳೂರು/ಹಾಸನ, ಬೆಂಗಳೂರು ಕೇಂದ್ರೀಯ, ರಾಮನಗರ, ಮಂಡ್ಯ, ಮೈಸೂರು ನಗರ ಸಾರಿಗೆ, ಮೈಸೂರು ಗ್ರಾಮಾಂತರ, ಚಾಮರಾಜನಗರ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ತುಮಕೂರು, ಚಿಕ್ಕಮಗಳೂರು, ಮಂಗಳೂರು, ಪುತ್ತೂರು ವಿಭಾಗಗಳ ಯಾವುದೇ ಘಟಕ ಅಥವ ಕಚೇರಿಗೆ ನಿಯೋಜಿಸಲಾಗುತ್ತದೆ. [ಕನ್ನಡದಲ್ಲಿ ನೇಮಕಾತಿ ಆದೇಶ ಓದಿ]

ವೇತನ ಶ್ರೇಣಿಯ ವಿವರಗಳು

ವೇತನ ಶ್ರೇಣಿಯ ವಿವರಗಳು

ಸಹಾಯಕ ಲೆಕ್ಕಿಗ, ಸಹಾಯಕ ಸಂಚಾರ ನಿರೀಕ್ಷಕ, ಸಹಾಯಕ ಉಗ್ರಾಣ ರಕ್ಷಕ, ಅಂಕಿ ಅಂಶ ಸಹಾಯಕ ತರಬೇತಿ ಭತ್ಯ 9,750.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka state road transport corporation (KSRTC) issued notification for recruitment of various post. February 4,2016 last date for submit application. How to apply here is complete guide.
Please Wait while comments are loading...