ಬೆಂಗಳೂರಿನಿಂದ ಇಲ್ಲಿಗೆ ಹೊಸ KSRTC ಮಲ್ಟಿ ಆಕ್ಸಲ್ ಬಸ್ ಸೇವೆ: ವೇಳಾಪಟ್ಟಿ, ಟಿಕೆಟ್ ದರ
ಬೆಂಗಳೂರು: ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ರಾಜಧಾನಿ ಬೆಂಗಳೂರು ಹಾಗೂ ಗಣಿ ಜಿಲ್ಲೆ ಬಳ್ಳಾರಿ ಮಧ್ಯೆ ಹೊಸದಾಗಿ ಮಲ್ಟಿ ಆಕ್ಸಲ್ (ಐರಾವತ ಕ್ಲಬ್ ಕ್ಲಾಸ್) ಬಸ್ ಸೇವೆ ಆರಂಭಿಸಲಾಗಿದೆ. ಎಲ್ಲೆಲ್ಲಿ ನಿಲುಗಡೆ ಮಾಡಲಾಗುತ್ತದೆ, ಸಮಯ, ಟಿಕೆಟ್ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.
2026 ಸೆಪ್ಟೆಂಬರ್ 15ರಿಂದ ಬೆಂಗಳೂರು-ಬಳ್ಳಾರಿ ನೂತನ ಬಸ್ ಸೇವೆ ಆರಂಭವಾಗಿದ್ದು, ಬಸ್ಗಳು ಮೆಜೆಸ್ಟಿಕ್ (ಕೆಂಪೇಗೌಡ ಬಸ್ ಟಿರ್ಮಿನಲ್) ನಿಲ್ದಾಣದಿಂದ ಬಸ್ ಸಂಚಾರ ಅರಂಭಿಸುತ್ತದೆ. ಅಲ್ಲಿಂದ ಸಿರಾ, ಹಿರಿಯೂರು ಹಾಗೂ ಚಳ್ಳಕೆರೆ ಮಾರ್ಗವಾಗಿ ಬಳ್ಳಾರಿ ನಿಲ್ದಾಣ ತಲುಪುತ್ತದೆ.

ನೂತನ ಬಸ್ ಟಿಕೆಟ್ ದರ
ಬೆಂಗಳೂರು-ಚಳ್ಳಕೆರೆಗೆ ಬಸ್ ಟಿಕೆಟ್ ದರ: ಒಬ್ಬರಿಗೆ 634 ರೂಪಾಯಿ
ಬೆಂಗಳೂರು- ಬಳ್ಳಾರಿ: ಒಬ್ಬರಿಗೆ 802 ರೂಪಾಯಿ
ಬಸ್ ನಿಲುಗಡೆ ನಿಲ್ದಾಣಗಳು
ಬೆಂಗಳೂರಿನಿಂದ ಸಂಜೆ 4:00 ಗಂಟೆಗೆ ಹೊರಡುವ ಬಸ್ ರಾತ್ರಿ 8ಕ್ಕೆ ಚಳ್ಳಕೆರೆ ತಲುಪುತ್ತದೆ. ಅಲ್ಲಿಂದ ರಾತ್ರಿ 9:45ಕ್ಕೆ ಬಳ್ಳಾರಿ ನಿಲ್ದಾಣ ತಲುಪಲಿದೆ. ಮರಳಿ ಬಳ್ಳಾರಿಯಿಂದ ಸಂಜೆ 5ಕ್ಕೆ (17:06) ಹೊರಟು 6:30ಗಂಟೆಗೆ ಚಳ್ಳಕೆರೆಗೆ ಬರುತ್ತದೆ. ರಾತ್ರಿ 10:40ಕ್ಕೆ (22:40) ಬೆಂಗಳೂರು ತಲುಪುತ್ತದೆ ಎಂದು ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ನೂತನ ಬಸ್ ಜೊತೆಗೆ ಈಗಾಗಲೇ ಕಾರ್ಯಾಚರಣೆಯಲ್ಲಿರುವ ಸದ್ಯ ಬೆಂಗಳೂರು ಮತ್ತು ಬಳ್ಳಾರಿ ನಡುವೆ ಒಟ್ಟು 5 ಐರಾವತ ಕ್ಲಬ್ ಕ್ಲಾಸ್ ಸಾರಿಗೆಗಳು ನಿತ್ಯ ಸೇವೆ ನೀಡುತ್ತಿವೆ.
ಬೆಂಗಳೂರು-ಬಳ್ಳಾರಿ ಇತರ ಬಸ್ಗಳು
* ಬೆಂಗಳೂರಿನಿಂದ ನಿತ್ಯ ಬೆಳಗ್ಗೆ 6:40 ಬಸ್ ಹೊರಟು ಮಧ್ಯಾಹ್ನ 12:45ಕ್ಕೆ ತಲುಪುತ್ತದೆ.
* ಐರಾವತ ಕ್ಲಬ್ ಕ್ಲಾಸ್ 2.0 ಬಸ್ ಮಧ್ಯಾಹ್ನ 2ಕ್ಕೆ ಹೊರಟು ರಾತ್ರಿ 8 ಬಳ್ಳಾರಿ ಮುಟ್ಟುತ್ತದೆ.
* ಸಂಜೆ 4 ಗಂ ಟೆಗೆ ಮತ್ತೊಂದು ಬಸ್ ಪ್ರಯಾಣ ಆರಂಭಿಸಿ ರಾತ್ರಿ 9:45ಕ್ಕೆ ತಲುಪಲಿದೆ.
* ಸಂಜೆ 6ಕ್ಕೆ ಇನ್ನೊಂದು ಬಸ್ ಸಂಚಾರ ಆರಂಭಿಸಿ ರಾತ್ರಿ 11:59ಕ್ಕೆ ಬಳ್ಳಾರಿ ರೀಚ್ ಆಗುತ್ತದೆ...
* ರಾತ್ರಿ 11:45ಕ್ಕೆ ಹೊರಟು ಬೆಳಗ್ಗೆ 5:45ಕ್ಕೆ ಬಳ್ಳಾರಿ ತಲುಪುತ್ತದೆ.
ಬಳ್ಳಾರಿ- ಬೆಂಗಳೂರಿಗೆ ಬಸ್ ಸಮಯ
* ಬಳ್ಳಾರಿಯಿಂದ ಪ್ರತಿದಿನ ಬೆಳಗ್ಗೆ 5:40 ಗಂಟೆಗೆ ಬಸ್ ಹೊರಟು ಬೆಳಗ್ಗೆ 11:15ಗಂಟೆಗೆ ಬೆಂಗಳೂರಿಗೆ ಆಗಮಿಸುತ್ತದೆ
* ಬೆಳಗ್ಗೆ 6:50ಬಳ್ಳಾರಿ ನಿಲ್ದಾಣದಿಂದ ಹೊರಟು ಮಧ್ಯಾಹ್ನ 12:24 ಗಂಟೆಗೆ ಮೆಜೆಸ್ಟಿಕ್ಗೆ ಬರಲಿದೆ.
* ಸಂಜೆ 4ಕ್ಕೆ ಸಂಚಾರ ಆರಂಭಿಸಿ ರಾತ್ರಿ 9:45ಕ್ಕೆ
* ಇನ್ನೊಂದು ಬಸ್ ಸಂಜೆ 5:06ಕ್ಕೆ ಪ್ರಯಾಣ ಆರಂಭಿಸಿ ಅದೇ ದಿನ ರಾತ್ರಿ10:40ಕ್ಕೆ ಮತ್ತು
* ಐರಾವತ ಕ್ಲಬ್ ಕ್ಲಾಸ್ 2.0 ಬಸ್ ರಾತ್ರಿ 11:45 ಹೊರಟು ಬೆಳಗ್ಗೆ 5:15 ಗಂಟೆಗೆ ಬೆಂಗಳೂರಿಗೆ ಬರುತ್ತದೆ.
ಬಸ್ ಟಿಕೆಟ್ ಬೆಲೆ
* ಬೆಂಗಳೂರು-ಬಳ್ಳಾರಿ 'ಐರಾವತ ಕ್ಲಬ್ ಕ್ಲಾಸ್' ಬಸ್: ಹಿರಿಯರಿಗೆ/ವಯಸ್ಕರಿಗೆ 802 ರೂ, ಮಕ್ಕಳಿಗೆ 629 ರೂ.
* ಐರಾವತ ಕ್ಲಬ್ ಕ್ಲಾಸ್ 2.0' ಬಸ್: ವಯಸ್ಕರಿಗೆ 864 ರೂ, ಮಕ್ಕಳಿಗೆ 678 ರೂಪಾಯಿ ನಿಗದಿಪಡಿಸಲಾಗಿದೆ.


Click it and Unblock the Notifications
