ಕೆಎಸ್ಆರ್‌ಟಿಸಿಯಿಂದ ಟ್ಯಾಕ್ಸಿ ಸೇವೆ ಆರಂಭ?
ಬೆಂಗಳೂರು, ಆಗಸ್ಟ್ 25 : ಕೆಎಸ್ಆರ್‌ಟಿಸಿ ಟ್ಯಾಕ್ಸಿ ಸೇವೆ ಆರಂಭಿಸಲು ಚಿಂತನೆ ನಡೆಸಿದೆ. ಈ ಕುರಿತು ಪ್ರಾಥಮಿಕ ಹಂತದ ಮಾತುಕತೆಗಳು ಆರಂಭವಾಗಿವೆ. ಇಸ್ರೋ ಈ ಸೇವೆಗೆ ತಂತ್ರಜ್ಞಾನದ ಸಹಕಾರವನ್ನು ಒದಗಿಸಲಿದೆ.
Recommended Video
ಲಾಕ್ ಡೌನ್ ಅವಧಿಯಲ್ಲಿ ಉಂಟಾದ ನಷ್ಟದಿಂದ ಹೊರ ಬರಲು ಕೆಎಸ್ಆರ್‌ಟಿಸಿ ಮೊಬೈಲ್ ಅಪ್ಲಿಕೇಶನ್ ಆಧಾರಿತ ಟ್ಯಾಕ್ಸಿ ಸೇವೆ ಆರಂಭಿಸಲು ಚಿಂತನೆ ನಡೆಸಿದೆ. ಇದರ ಜೊತೆ ಕೋರಿಯರ್ ಸೇವೆ ಸಹ ಆರಂಭವಾಗಲಿದೆ.
ಕೆಎಸ್ಆರ್‌ಟಿಸಿ ಅಧಿಕಾರಿಗಳು ಕೆಲವೇ ದಿನಗಳಲ್ಲಿ ಇಸ್ರೋ ಜೊತೆ ಈ ಕುರಿತು ಅಂತಿಮ ಹಂತದ ಮಾತುಕತೆ ನಡೆಸಲಿದ್ದಾರೆ. 'ನಮ್ಮ ಕೋರಿಯರ್' ಹೆಸರಿನ ಪಾರ್ಸೆಲ್ ಸೇವೆಯನ್ನು ಆರಂಭ ಮಾಡಲಿದ್ದು, ಇದರಿಂದ ವಾರ್ಷಿಕ 100 ಕೋಟಿ ಆದಾಯ ನಿರೀಕ್ಷೆ ಮಾಡಲಾಗಿದೆ.

ಕೋರಿಯರ್ ಸರ್ವೀಸ್ ಆರಂಭಿಸಲು ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಅದು ಅಂತಿಮ ಹಂತದಲ್ಲಿದೆ. ಬಸ್ ನಿಲ್ದಾಣದ ಆವರಣದಲ್ಲಿಯೇ ಕೋರಿಯರ್ ಸೇವೆಗೆ ಬೇಕಾದ ಸ್ಥಳವನ್ನು ನೀಡಲಾಗುತ್ತದೆ.
ಕೆಎಸ್ಆರ್‌ಟಿಸಿ ಟ್ಯಾಕ್ಸಿ ಯೋಜನೆ ರೂಪುರೇಷೆ ಸಿದ್ಧವಾಗುತ್ತಿದೆ. ತಂತ್ರಜ್ಞಾನದ ನೆರವು ಪಡೆಯುವ ಮಾತುಕತೆ ಅಂತಿಮಗೊಂಡ ಬಳಿಕ ಸರ್ಕಾರದ ಅನುಮತಿ ಪಡೆದು ಇದನ್ನು ಕಾರ್ಯರೂಪಕ್ಕೆ ತರುವ ಸಾಧ್ಯತೆ ಇದೆ.
ಮೊದಲೇ ನಷ್ಟದಲ್ಲಿದ್ದ ಸಾರಿಗೆ ಸಂಸ್ಥೆಗಳಿಗೆ ಲಾಕ್ ಡೌನ್ ಕಾರಣದಿಂದಾಗಿ ಮತ್ತಷ್ಟು ನಷ್ಟವಾಗಿದೆ. ಇದರಿಂದಾಗಿ ನೌಕರರ ವೇತನ ಪಾವತಿಗೂ ತೊಂದರೆಯಾಗುತ್ತಿದೆ. ಇನ್ನು ಅಂತರರಾಜ್ಯ ಬಸ್ ಸೇವೆಗಳು ಆರಂಭವಾಗಿಲ್ಲ.












Click it and Unblock the Notifications