ಡೀಸೆಲ್ ಬೆಲೆ ಏರಿಕೆ, ಕೆಎಸ್ಆರ್‌ಟಿಸಿ ಪ್ರಯಾಣ ದರ ಏರಿಕೆ?
ಬೆಂಗಳೂರು, ಮೇ 27 : ಡೀಸೆಲ್ ಬೆಲೆಯಲ್ಲಿ ಏರಿಕೆಯಾದ ಕಾರಣ ರಾಜ್ಯದ 4 ಸಾರಿಗೆ ನಿಗಮಗಳು ಸಂಕಷ್ಟಕ್ಕೆ ಸಿಲುಕಿವೆ. ನಷ್ಟವನ್ನು ಎದುರಿಸಲು ಬಸ್ ದರ ಏರಿಕೆ ಮಾಡಲಾಗುತ್ತದೆಯೇ? ಎಂದು ಕಾದು ನೋಡಬೇಕು.
ಕೆಎಸ್ಆರ್‌ಟಿಸಿ ಕೆಲವು ದಿನಗಳ ಹಿಂದೆ ನಷ್ಟದಿಂದ ಹೊರಬಂದಿತ್ತು. 2018ರ ಆರಂಭದಲ್ಲಿ 10 ಕೋಟಿ ಲಾಭದಲ್ಲಿತ್ತು. ಆದರೆ, ಈಗ ಡೀಸೆಲ್ ದರ ಏರಿಕೆಯಾಗುತ್ತಲೇ ಇದೆ. ಆದ್ದರಿಂದ, ನಷ್ಟವಾಗುತ್ತಿದೆ.
ಡೀಸೆಲ್ ದರ ಏರಿಕೆಯ ಪರಿಣಾಮ ಬಿಎಂಟಿಸಿಗೂ ತಟ್ಟಿದೆ. ಸಂಸ್ಥೆಯ 292 ಕೋಟಿ ನಷ್ಟವನ್ನು ಸರಿದೂಗಿಸಲು ಪ್ರಯತ್ನ ನಡೆದಿದೆ. ಹೀಗಿರುವಾಗ ಡೀಸೆಲ್ ದರ ಹೆಚ್ಚಾಗಿದ್ದು, ಇದರಿಂದ ಮಾಸಿಕ 1.96 ಕೋಟಿ ರೂ. ನಷ್ಟ ಉಂಟಾಗುತ್ತಿದೆ.

2017ರ ಅಂತ್ಯದಲ್ಲಿ ಬಸ್ ಪ್ರಯಾಣ ದರವನ್ನು ಏರಿಕೆ ಮಾಡುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಆದರೆ, ಜನರ ಆಕ್ರೋಶ ಎದುರಿಸಬೇಕಾಗುತ್ತದೆ ಎಂದು ಪ್ರಸ್ತಾವನೆಯನ್ನು ಸರ್ಕಾರಿ ತಿರಸ್ಕರಿಸಿತ್ತು.
ಇಂಧನದ ದರಗಳು ಇಳಿಕೆಯಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಂಸ್ಥೆಗಳು ಹೆಚ್ಚು ನಷ್ಟವನ್ನು ಅನುಭವಿಸಬೇಕಾಗುತ್ತದೆ. ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಹೊಸ ಸರ್ಕಾರ ಪ್ರಯಾಣ ದರ ಹೆಚ್ಚಳ ಮಾಡಲಿದೆಯೇ? ಕಾದು ನೋಡಬೇಕು.












Click it and Unblock the Notifications