KSRTC: ಹಂಪಿ ಪ್ರವಾಸಿಗರಿಗೆ ಗುಡ್ ನ್ಯೂಸ್: ಬೆಂಗಳೂರಿನಿಂದ ನಿತ್ಯ ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ಬಸ್, ವೇಳಾಪಟ್ಟಿ

ಬೆಂಗಳೂರು: ರಾಜ್ಯದ ಪ್ರಮುಖ ಪ್ರವಾಸಿ ತಾಣ ಹಾಗೂ ಐತಿಹಾಸಿಕ ಪರಂಪರೆ ಹೊಂದಿರುವ ವಿಜಯನಗರ ಜಿಲ್ಲೆಯ ಹಂಪಿಗೆ ರಾಜಧಾನಿ ಬೆಂಗಳೂರಿನಿಂದ ನೇರ ಸಂಪರ್ಕವಿದೆ. ವಾರದ ಏಳು ದಿನವು ಸಂಚರಿಸುವ ನಾನ್‌ ಎಸಿ ಸ್ಲೀಪರ್ ಪಲ್ಲಕ್ಕಿ ಬಸ್ ಸಂಚರಿಸಲಿದೆ. ಈ ಬಸ್ ಮಾರ್ಗ, ನಿಲ್ದಾಣ, ಟಿಕೆಟ್ ಬುಕ್ಕಿಂಗ್, ಪ್ರಯಾಣ ದರ ಸೇರಿ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

ಚಿತ್ರದುರ್ಗ, ಹೊಸಪೇಟೆ ಮಾರ್ಗವಾಗಿ ಬೆಂಗಳೂರು-ಹಂಪಿ ಮತ್ತು ಹಂಪಿಯಿಂದ ಬೆಂಗಳೂರಿಗೆ ನಿತ್ಯ ಪಲ್ಲಕ್ಕಿ ಬಸ್ ಸಂಚಾರ ಸೇವೆ ಲಭ್ಯವಿದೆ. ಈ ಮಾರ್ಗದಲ್ಲಿ ಈ ಹಿಂದೆ ನಾನ್ ಎಸಿ ಸ್ಲೀಪರ್ ಬಸ್ ಸೇವೆ ಆರಂಭಿಸಲಾಗಿತ್ತು. ಆ ಬಸ್‌ ಅನ್ನು ಇದೀಗ ವ್ಯವಸ್ಥಿತ, ಆಧುನಿಕ ಸೌಕರ್ಯ ಒಳಗೊಂಡ ನಾನ್ ಎಸಿ ಸ್ಲೀಪರ್ ಪಲ್ಲಕ್ಕಿ ಬಸ್‌ಗೆ ಪರಿವರ್ತಿಸಲಾಗಿದೆ. ಈ ಮೂಲಕ ಹಂಪಿ ಮರ್ಗದ ಪ್ರಯಾಣಿಕರಿಗೆ ಇನ್ನಷ್ಟು ಆರಾಮದಾಯಕ, ಉತ್ತಮ ಸೇವೆ ನೀಡಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬೆಂಗಳೂರು ವಿಭಾಗ ನಿರ್ಧರಿಸಿದೆ. ಸದ್ಯ ಬೇಸಿಗೆ ಪ್ರವಾಸ ಕೈಗೊಳ್ಳುವವರಿಗೆ, ಬೆಂಗಳೂರಿನಿಂದ ತಡೆಯಿಲ್ಲದ ನೇರ ಸಾರಿಗೆ ಸೇವೆ ಬಯಸುವ ಪ್ರಯಾಣಿಕರಿಗೆ/ಪ್ರವಾಸಿಗರಿಗೆ ಅನುಕೂಲವಾಗಲಿದೆ ಎಂದು ಕೆಎಸ್‌ಆರ್‍‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

KSRTC

ಬಸ್ ಸಂಚಾರ ಮಾರ್ಗ, ನಿಲುಗಡೆ

ನಿತ್ಯ ಬೆಂಗಳೂರಿನಿಂದ ನವರಂಗ, ನೆಲಮಂಗಲ, ಚಿತ್ರದುರ್ಗ, ಕೂಡ್ಲಿಗಿ ಮಾರ್ಗವಾಗಿ ಹೊಸಪೇಟೆ ತಲುಪುತ್ತದೆ. ಅಲ್ಲಿಂದ ಮತ್ತೆ ಹಂಪಿ ಬಸ್ ನಿಲ್ದಾಣ ತಲುಪುತ್ತದೆ. ಮರಳಿ ಅದೇ ಮಾರ್ಗದಲ್ಲಿ ರಾತ್ರಿ ಹಂಪಿಯಿಂದ ಬಸ್ ಹೊರಡಲಿದ್ದು, ಈ ಮೇಲಿನ ಎಲ್ಲ ನಿಲ್ದಾಣಗಳು ಬಸ್ ನಿಲುಗಡೆ ನೀಡಲಾಗುತ್ತದೆ.

KSR Bengaluru: ಪಂಚಗಂಗಾ ಸೇರಿ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ
KSR Bengaluru: ಪಂಚಗಂಗಾ ಸೇರಿ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ

ಬೆಂಗಳೂರು ಮೆಜೆಸ್ಟಿಕ್ ನಿಲ್ದಾಣದಿಂದ ರಾತ್ರಿ 11 ಗಂಟೆಗೆ ಹೊರಡುತ್ತದೆ. ಬೆಳಗ್ಗೆ 6.30ಕ್ಕೆ ಹಂಪಿ ನಿಲ್ದಾಣ ತಲುಪುತ್ತದೆ. ಹೊಸಪೇಟೆ ಬೆಳಗ್ಗೆ 6 ಗಂಟೆಗೆ ರಿಚ್ ಆಗಲಿದೆ. ಮರಳಿ ಅದೇ ದಿನ ರಾತ್ರಿ ಹಂಪಿಯನ್ನು ರಾತ್ರಿ 8 ಗಂಟೆಗೆ ಪ್ರಯಾಣ ಆರಂಭಿಸುವ ಬಸ್ ಬೆಳಗ್ಗೆ 4.30ರ ಸುಮಾರು ಬೆಂಗಳೂರು ಮಜೆಸ್ಟಿಕ್ ನಿಲ್ದಾಣ ತಲುಪುತ್ತದೆ. ಈ ಬಸ್‌ ಟಿಕೆಟ್ ದರ ಒಬ್ಬರಿಗೆ 832 ರೂಪಾಯಿ ಇದೆ.

ಟಿಕೆಟ್ ಬುಕಿಂಗ್ ಮಾಡಿಕೊಳ್ಳಿ

ಹಂಪಿಯ ಗತವೈಭವ ನೋಡಲು ಬಯಸುವವರು ಮಾತ್ರವಲ್ಲದೇ ಬೆಂಗಳೂರಿನಿಂದ ಚಿತ್ರದುರ್ಗ, ಕೂಡ್ಲಿಗಿ, ಹೊಸಪೇಟೆ ಮತ್ತು ವಿಜಯನಗರ ಜಿಲ್ಲೆಗೆ ತೆರಳುವ ಪ್ರಯಾಣಿಕರಿಗೆ ಈ ಸಾರಿಗೆ ಅನುಕೂಲವಾಗಿದೆ. ಟಿಕೆಟ್ ಅನ್ನು ಕೆಎಸ್‌ಆರ್‍‌ಟಿಸಿ ಅಧಿಕೃತ ವೆಬ್‌ಸೈಟ್ www.ksrtc.in ಮೂಲಕ ಅಸನ ಕಾಯ್ದಿರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+